63ನೇ ವಯಸ್ಸಿನಲ್ಲಿ 4ನೇ ಮದ್ವೆಗೆ ರೆಡಿಯಾದ ಸೂಪರ್ ಸ್ಟಾರ್, 26 ವರ್ಷ ಕಿರಿಯ ನಟಿ ಜೊತೆ ಆಕಾಶದಲ್ಲಿ ನಡೆಯಲಿದೆ ಮದುವೆ ?

ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಆದರೆ .. ಇದು ಬಣ್ಣದ ಲೋಕ. ಇಲ್ಲಿ.. ಪ್ರೀತಿ ಮೊಳಕೆಯೊಡೆದಷ್ಟೇ ವೇಗವಾಗಿ ಉಸಿರುಗಟ್ಟಿ ಸತ್ತು ಹೋಗುತ್ತದೆ. ಆ ನಂತರ ಅಷ್ಟೇ ಬೇಗ ಇನ್ಯಾರದ್ದೋ ಮೇಲೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ.

ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಉದಾಹರಣೆಗೆ ಹಾಲಿವುಡ್‌ನ ಸೂಪರ್ ಸ್ಟಾರ್ ಟಾಮ್ ಕ್ರೂಸ್‌ ಅವರನ್ನೇ ತೆಗೆದುಕೊಳ್ಳಿ.

MISSION MATRIMONY Tom Cruise amp amp Ana de Armas Rumored for Historic Space Wedding

ಹೌದು, ಟಾಮ್ ಕ್ರೂಸ್.. ಭಯ ಅಂದರೇನು ಎಂದು ಅರಿಯದ ವ್ಯಕ್ತಿ. ಹಿಂದೆ ಮುಂದೆ ಆಲೋಚನೆ ಮಾಡದೇ ಎಲ್ಲಿಂದ ಬೇಕಾದರೂ ಎಗರಬಲ್ಲ ಟಾಮ್ ಕ್ರೂಸ್, ಜಾಕಿ ಚಾನ್ ಹೊರತುಪಡಿಸಿದರೆ ಅತ್ಯಂತ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಸ್ಟಾರ್ ಕೂಡ ಹೌದು.

ಇಂಥಾ ಟಾಮ್ ಕ್ರೂಸ್‌ ಗೆ ಈಗ 63 ವರ್ಷ. ಆದರೆ ಪ್ರೀತಿ ಇದ್ದಲ್ಲಿ ವಯಸ್ಸಿನ ಹಂಗೆಲ್ಲಿ..? ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಟಾಮ್ ಕ್ರೂಸ್ 63ನೇ ವರ್ಷದಲ್ಲಿ ನಾಲ್ಕನೇ ಮದುವೆಯಾಗಲು ಸಿದ್ಧರಾಗಿದ್ದಾರೆ. ಅದು ಭೂಮಿಯ ಮೇಲಲ್ಲ ಬದಲಿಗೆ ಆಕಾಶದಲ್ಲಿ ಹೀಗೊಂದು ಸುದ್ದಿ ಸದ್ಯ ಹಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದೆ.

ಹೌದು, ''ರಾಡಾರ್'' ಆನ್‌ಲೈನ್ ವರದಿಯ ಪ್ರಕಾರ ಟಾಮ್ ಕ್ರೂಸ್, ಹಾಲಿವುಡ್‌ನ 37ರ ಹರೆಯದ ಚೆಲುವೆ ''ಅನಾ ಡಿ ಅರ್ಮಾಸ್'' ಅವರಿಗೆ ಮನ ಸೋತಿದ್ದಾರೆ. ಆಕಾಶದಲ್ಲಿ ಸ್ಕೈಡೈವಿಂಗ್ ಮಾಡುವ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ. ಟಾಮ್ ಕ್ರೂಸ್ ಅವರಾಗಲಿ.. ಅನಾ ಡಿ ಅರ್ಮಾಸ್ ಅವರಾಗಲಿ.. ಈ ಕುರಿತು ಇನ್ನೂ ಏನೂ ಹೇಳಿಲ್ಲ. ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿಲ್ಲ. ಆದರೆ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಇಬ್ಬರ ಸಂಬಂಧ ಮತ್ತು ಮದುವೆ ಕುರಿತು ಹಾಲಿವುಡ್‌ನಲ್ಲಿ ಸದ್ಯ ಜೋರು ಚರ್ಚೆ ನಡೆಯುತ್ತಿದೆ.

ಇನ್ನೂ ಟಾಮ್ ಕ್ರೂಸ್ ಅವರಂತೆಯೇ ಅನಾ ಕೂಡ ಸಾಹಸಿ. ಹೀಗಾಗಿ ಆಕಾಶದಲ್ಲಿ ಮದುವೆಯಾಗುವ ಚಿಂತನೆ ಇಬ್ಬರು ನಡೆಸುತ್ತಿದ್ದಾರೆ. ಆಕಾಶದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಆಕಾಶದಿಂದ ಇಬ್ಬರು ಹಾರದಿದ್ದರೆ, ನೀರಿನಾಳದಲ್ಲಿ ಇಬ್ಬರ ಮದುವೆ ನಡೆಯುವುದು ಖಚಿತ ಎಂದು ''ರಾಡಾರ್‌'' ಆನ್‌ಲೈನ್ ವರದಿ ಮಾಡಿದೆ.

MISSION MATRIMONY Tom Cruise amp amp Ana de Armas Rumored for Historic Space Wedding

ಅಂದ್ಹಾಗೇ ಟಾಮ್ ಕ್ರೂಸ್ ಅವರಿಗೆ ಅನಾ ಡಿ ಅರ್ಮಾಸ್ ಪರಿಚಯವಾಗಿದ್ದು ಈ ವರ್ಷದ ಆರಂಭದಲ್ಲಿ. ಜಸ್ಟ್ ಮಾತ್ ಮಾತಲ್ಲಿ ಶುರುವಾದ ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆದಿದೆ. ಈ ವರ್ಷದ ಮೇನಲ್ಲಿ ''ಗುಡ್ ಮಾರ್ನಿಂಗ್ ಅಮೆರಿಕಾ'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನಾ, ಟಾಮ್ ಕ್ರೂಸ್ ಬಗ್ಗೆ ಮಾತನಾಡಿದ್ದರು. ಆಗಲೇ ಹಲವರಿಗೆ ಅನಾ ಬಾಯಲ್ಲಿ ಟಾಮ್ ಕ್ರೂಸ್ ಹೆಸರು ಕೇಳಿ ಅನುಮಾನ ಬಂದಿತ್ತು. ಇನ್ನೂ ಅನುಮಾನ ಇವರು ಇಬ್ಬರು ಒಟ್ಟಿಗೆ ವೆರ್ಮೋಂಟ್ ಪ್ರವಾಸಕ್ಕೆ ಹೋದಾಗ ಹೆಚ್ಚಾಯ್ತು. ಇಬ್ಬರು ''ಡೀಪರ್'' ಎಂಬ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ ಕೂಡ. ಇದೆಲ್ಲದರಿಂದ ನಿರಂತರವಾಗಿ ಚರ್ಚೆಯಲ್ಲಿದ್ದ ಇವರ ಸಂಬಂಧ ಮದುವೆಯ ಹಂತಕ್ಕೆ ಬಂದಿದೆ ಎನ್ನುವವರೆಗೆ ಬಂದು ನಿಂತಿದೆ.

ಇನ್ನುಳಿದಂತೆ 1987ರಲ್ಲಿ ''ಮಿಮಿ ರೋಜರ್ಸ್'' ಅವರ ಜೊತೆ ಮದುವೆಯಾಗಿದ್ದರು. ಆದರೆ ಈ ಸಂಬಂಧ ಕೇವಲ ಮೂರು ವರ್ಷಕ್ಕೆ ಮುರಿದು ಬಿತ್ತು. ಆ ನಂತರ ''ಮಿಮಿ ರೋಜರ್ಸ್‌'' ಅವರಿಗೆ ನೀಡಿದ ವ‍ರ್ಷದಲ್ಲಿಯೇ ಅಂದರೆ 1990ರಲ್ಲಿ ತಮ್ಮ ''ಡೇಸ್ ಆಫ್ ಥಂಡರ್'' ಚಿತ್ರದ ನಾಯಕಿ ''ನಿಕೋಲ್ ಕಿಡ್ಮನ್'' ಅವರ ಜೊತೆ ಟಾಮ್ ಕ್ರೂಸ್ ಮದುವೆಯಾದರು.ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಹನ್ನೊಂದು ವರ್ಷ ಸಂಸಾರ ನಡೆಸಿದರು.

MISSION MATRIMONY Tom Cruise amp amp Ana de Armas Rumored for Historic Space Wedding

ನಿಕೋಲ್ ಅವರಿಂದ ದೂರವಾದ ನಂತರ ಟಾಮ್ ಕ್ರೂಸ್ 2006ರಲ್ಲಿ '' ಕೇಟಿ ಹೋಮ್ಸ್‌'' ಅವರನ್ನು ಮದುವೆಯಾದರು. ಇಟಲಿಯಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಆರು ವರ್ಷಕ್ಕೆ ಮುರಿದು ಬಿತ್ತು. ಇವರ ಈ ಪ್ರೀತಿಯ ಸಂಕೇತವಾಗಿ ಇಬ್ಬರಿಗೆ ಸೂರಿ ಎಂಬ ಮಗಳಿದ್ದಾಳೆ.

ಇನ್ನೂ ಟಾಮ್ ಕ್ರೂಸ್ ಹೃದಯ ಗೆದ್ದ 37 ವರ್ಷದ ಅನಾ ಇದಕ್ಕೂ ಮುನ್ನ ಸ್ಪ್ಯಾನಿಷ್ ನಟ ಮತ್ತು ಮಾಡೆಲ್ ಮಾರ್ಕ್ ಕ್ಲೋಟೆಟ್ ಅವರನ್ನು 2011 ಮದುವೆಯಾಗಿದ್ದರು. 2013ರಲ್ಲಿ ವಿಚ್ಚೇದನ ನೀಡಿದರು. ಆ ನಂತರ ತಮ್ಮ ''ಡೀಫ್ ವಾಟರ್'' ಚಿತ್ರದ ನಾಯಕ ಬೆನ್ ಅಫ್ಲೆಕ್ ಜೊತೆ 2020ರಿಂದ 2021ರವರೆಗೆ ಸುತ್ತಾಡಿದ ಅನಾ ಆ ನಂತರ 2021ರಿಂದ 2024ರವರೆಗೆ ''ಟಿಂಡರ್'' ಕಂಪನಿಯ ಉಪಾಧ್ಯಕ್ಷ ಪಾಲ್ ಬೌಕಡಾಕಿಸ್ ಜೊತೆ ಇದ್ದರು. ಇದರ ನಡುವೆ ಅನಾ ಹೆಸರು ಕ್ಯೂಬನ್ ಕಲಾವಿದ ಅಲೆಜಾಂಡ್ರೊ ಪಿನ್ಯೆರೊ ಬೆಲ್ಲೊ ಮತ್ತು ಟ್ಯಾಲೆಂಟ್ ಏಜೆಂಟ್ ಫ್ರಾಂಕ್ಲಿನ್ ಲ್ಯಾಟ್ ಜೊತೆ ಕೂಡ ಥಳುಕು ಹಾಕಿಕೊಂಡಿತ್ತು.

''ನೈವ್ಸ್ ಔಟ್''.. ''ಬ್ಲೇಡ್ ರನ್ನರ್ 2049''.. ''ನೋ ಟೈಮ್ ಟು ಡೈ'' .. ''ಬ್ಲಾಂಡ್''. ''ದಿ ಗ್ರೇ ಮ್ಯಾನ್'' ಅನಾ ಡಿ ಅರ್ಮಾಸ್ ಅಭಿನಯದ ಪ್ರಮುಖ ಚಿತ್ರಗಳು. ಹೀಗೆ ಹಾಲಿವುಡ್‌ನಲ್ಲಿ ತಮ್ಮ ಚಿತ್ರಗಳಿಂದ ಮತ್ತು ವ್ಯೆಯಕ್ತಿಕ ಜೀವನಗಳಿಂದ ಸದ್ದು ಮಾಡುತ್ತಾ ಸುದ್ದಿಯಾಗುತ್ತಾ ಬಂದ ಟಾಮ್ ಕ್ರೂಸ್ ಮತ್ತು ಅನಾ ಡಿ ಅರ್ಮಾಸ್ ಶೀಘ್ರದಲ್ಲಿಯೇ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಈ ಕುರಿತು ಇಬ್ಬರು ಮಾತನಾಡುವ ಸಾಧ್ಯತೆ ಕೂಡ ಇದೆ.

More from Filmibeat

English summary
Mission: Matrimony or massive fabrication? Dive into the wildest celebrity rumor of the year: Are Tom Cruise and Ana de Armas really planning to tie the knot in zero gravity?
Read more about: tom cruise marriage love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X