»   » ಕಾನ್ ಸಿನಿಮೋತ್ಸವದಲ್ಲಿ ಮಾಡೆಲ್ ಬೆಲ್ಲಾಳ ಗೌನ್ ತಂದಿತ್ತ ಫಜೀತಿ

ಕಾನ್ ಸಿನಿಮೋತ್ಸವದಲ್ಲಿ ಮಾಡೆಲ್ ಬೆಲ್ಲಾಳ ಗೌನ್ ತಂದಿತ್ತ ಫಜೀತಿ

By: Sonu Gowda
Subscribe to Filmibeat Kannada

ಮೊನ್ನೆ ಮೊನ್ನೆ 69ನೇ 'ಕಾನ್' ಸಿನಿಮೋತ್ಸವದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತು ನಟಿ ಸೋನಂ ಕಪೂರ್ ಅವರು ತಮ್ಮ ವಿಭಿನ್ನ ವಸ್ತ್ರ ವಿನ್ಯಾಸದಿಂದ ಎಲ್ಲರ ಬಾಯಿಗೆ ಆಹಾರವಾಗಿದ್ದ ವಿಚಾರ ಮರೆಯುತ್ತಿದ್ದಂತೆ, ಇದೀಗ ಮತ್ತೊಂದು ಮುಜುಗರಕ್ಕೀಡು ಮಾಡುವ ವಿಚಾರ ಬೆಳಕಿಗೆ ಬಂದಿದೆ.

ಹೌದು ಹಾಲಿವುಡ್ ಕ್ಷೇತ್ರದ ಖ್ಯಾತ ಮಾಡೆಲ್ ಗಿಗಿ ಹ್ಯಾಡಿಡ್ ಅವರ ಸೋದರಿ ಮಾಡೆಲ್ ಬೆಲ್ಲಾ ಹ್ಯಾಡಿಡ್ ಅವರು ಫ್ರಾನ್ಸ್ ನಲ್ಲಿ ನಡೆದ ಕಾನ್ ಚಲನಚಿತ್ರೋತ್ಸವದಲ್ಲಿ ಧರಿಸಿದ್ದ ಕೆಂಪು ಬಣ್ಣದ ಗೌನ್ ನಿಂದ ಇದೀಗ ಇಡೀ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ.[ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾಗುತ್ತಿದೆ ಐಶ್ವರ್ಯ ರೈ ತುಟಿ]

Model Bella Hadid almost had a major wardrobe malfunction at cannes

ಅವರು ಹಾಕಿಕೊಂಡಿದ್ದ ಗೌನ್ ಬರೀ ಹೆಸರಿಗೆ ಮಾತ್ರ ಹಾಕಿಕೊಂಡಿದ್ದಾರೆ ಎಂದು ಹೇಳಬಹುದಿತ್ತು, ಯಾಕೆಂದರೆ ಅವರು ಅಂದು ಹಾಕಿದ್ದ ಕೆಂಪು ಬಣ್ಣದ ಗೌನಿನಲ್ಲಿ ಕಾಣಬಾರದ ಜಾಗಗಳಲ್ಲೇ ಕಂಡಿದ್ದು, ಅದರಿಂದಾಗಿ ಎಲ್ಲರಿಗೂ ಮುಜುಗರ ಉಂಟಾಗುವ ಪ್ರಸಂಗ ಎದುರಾಗಿತ್ತು.

ಜೊತೆಗೆ ಮಾಡೆಲ್ ಬೆಲ್ಲಾ ಅವರು ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುವಾಗ ಹಾಗೂ ಮೆಟ್ಟಿಲೇರುವಾಗ ಅವರ ಅಂಗಾಗಗಳಲ್ಲೇ ಪ್ರದರ್ಶನವಾಗಿದ್ದು, ನೆರೆದಿದ್ದವರು ತಲೆ ತಗ್ಗಿಸುವಂತಹ ಸಂದರ್ಭ ಕೂಡ ಎದುರಾಗಿತ್ತು.

ಇನ್ನು ಈ ಮೊದಲು ಮಾಡೆಲ್ ಬೆಲ್ಲಾ ಅವರು ಮ್ಯಾಗಜೀನ್ ಒಂದರ ಮುಖಪುಟಕ್ಕೆ ಅರೆ ಬೆತ್ತಲೆ ಪೋಸ್ ನೀಡಿ ಸುದ್ದಿ ಮಾಡಿದ್ದರು.

ಹಾಲಿವುಡ್ ಮಾಡೆಲ್ ಬೆಲ್ಲಾ ಹ್ಯಾಡಿಡ್ ಅವರ ಕೆಂಪು ಬಣ್ಣದ ಗೌನ್ ತಂದಿತ್ತ ಫಜೀತಿಯ ಫೋಟೋ ನೋಡಲು ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ...

-
-
-
-
-
-
-
-
-
-
English summary
Hollywood Model Bella Hadid walked the red carpet at 69th Cannes Film Festival and she made her red carpet moment count, in a jaw-dropping dress that showed off her svelte figure.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada