ತಾರೆಯೊಬ್ಬಳ ಲಜ್ಜೆಗೆಟ್ಟ ಫೋಟೋಗಳು ಲೀಕ್

By ರವಿಕಿಶೋರ್

Miranda Kerr
ಇತ್ತೀಚೆಗೆ ಕೆಲವು ತಾರೆಗಳಿಗೆ ಅದೇನು ತೆವಲೋ ಏನೋ ಗೊತ್ತಿಲ್ಲ. ಆಗಾಗ ತಮ್ಮ ಬೆತ್ತಲೆ ಫೋಟೋಗಳನ್ನು ಆನ್ ಲೈನ್ ನಲ್ಲಿ ಹಾಕಿ ವಿಕೃತಾನಂದ ಅನುಭವಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಸೂಪರ್ ಮಾಡೆಲ್ ಮಿರಾಂಡಾ ಕೇರ್ ತಮ್ಮ ನಗ್ನ ಚಿತ್ರಗಳನ್ನು ತಮ್ಮದೇ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿ ಕುಣಿದಾಡಿದ್ದಾರೆ.

ಇಂಟರ್ ನೆಟ್ ಮಾನದಂಡಗಳಿಗೆ ಗೋಲಿ ಹೊಡೆಯುವ ಈ ರೀತಿ ಫೋಟೋಗಳಿಂದ ತುಂಬಾ ಕಿರಿಕ್ ಆಗುತ್ತದೆ ಎಂದು ಆಕೆಗೂ ಗೊತ್ತು. ತಮ್ಮ ವೆಬ್ ಸೈಟ್ ಎಲ್ಲಿ ಬಾಗಿಲು ಮುಚ್ಚತ್ತದೋ ಎಂದು ಹೆದರಿ ಆಕೆ ಕೂಡಲೆ ಆ ಫೋಟೋಗಳನ್ನು ಅಲ್ಲಿಂದ ತೆಗೆದಿದ್ದಾರೆ.

ಅಷ್ಟರಲ್ಲಾಗಲೆ ಈಕೆಯ ನಂಗಾನಾಚ್ ಫೋಟೋಗಳು ರಸಿಕರ ಕಂಪ್ಯೂಟರ್ ಪರದೆಗಳನ್ನು ಅಲಂಕರಿಸಿ ಆಗಿತ್ತು. ಕಪ್ಪು ಬಿಳುಪಿನ ಈ ಫೋಟೋಗಳನ್ನು ಆಕೆಯ ಮದುವೆಗೂ ಮುನ್ನವೇ ಅಂದರೆ 2009ಕ್ಕೂ ಮುನ್ನವೇ ತೆಗೆದಿರಬಹುದು ಎನ್ನಲಾಗಿದೆ.

ಈ ಫೋಟೋಗಳನ್ನು ಆಕೆಯ ಗಂಡ ಆರ್ಲೆಂಡೋ ಬ್ಲೂಮ್ ನೋಡಿ ಬೊಂಬಡ ಬಜಾಯಿಸಿದ್ದಾನಂತೆ. ಆದರೂ ಏನು ಮಾಡೋದು ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಎಂಬಂತಾಗಿದೆ ಆತನ ಪರಿಸ್ಥಿತಿ.

ಈಕೆ ಈ ಹಿಂದೆ ಜಿಕ್ಯು, ಆಸ್ಟ್ರೇಲಿಯನ್ ರೋಲಿಂಗ್ ಸ್ಟೋನ್, ಡಬ್ಲ್ಯು ಮ್ಯಾಗಜಿನ್ ಎಂಬ ನಿಯತಕಾಲಿಕೆಗೆ ಹಾಗೂ 2010ರ ಪಿರೇಲ್ಲಿ ಕ್ಯಾಲೆಂಡರ್ ಗೆ ತಮ್ಮ ದಂತದ ಮೈಯನ್ನು ಪ್ರದರ್ಶಿಸಿದ್ದರು. ಈಗ ಈಕೆ ಪೋಸ್ಟ್ ಮಾಡಿರುವ ಪೋಟೋಗಳಲ್ಲಿ ಒಂದೇ ಒಂದು ಬಟ್ಟೆಯ ಸಣ್ಣ ಎಳೆಯೂ ಇಲ್ಲದಿರುವುದು ವಿಶೇಷ.

ನಗ್ನ ಫೋಟೋ ಹಾಕಿ ಬಳಿಕ ಅದೇ ಜಾಗಕ್ಕೆ ಬಟ್ಟೆ ತೊಟ್ಟ ಸಭ್ಯ ಫೋಟೋ ಒಂದನ್ನು ಹಾಕಿದ್ದಾರೆ. ಪ್ರಚಾರಕ್ಕಾಗಿ ಆಗಾಗಿ ಈ ರೀತಿ ಮಾಡುವ ತಂತ್ರ ಹಾಲಿವುಡ್ ತಾರೆಗಳಲ್ಲಿ ಹೊಸದಲ್ಲ ಬಿಡಿ. ಹಲವಾರು ತಾರೆಗಳು ಆಗಾಗ ಈ ರೀತಿ ಮಾಡುತ್ತಾ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿರುತ್ತಾರೆ ಎನ್ನುತ್ತದೆ Huffington Post.

More from Filmibeat

English summary
Australian supermodel Miranda Kerr uploaded bare photographs on his website and then were quickly removed, but not before they were reposted elsewhere. The black and white photos show Kerr in various flirty poses and are fairly tame by internet standards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X