ಚುನಾವಣೆ ಪ್ರಚಾರಕ್ಕೆ ಬೆತ್ತಲೆಯಾಗಿ ಫೋಸ್ ಕೊಟ್ಟ ಮಾಡೆಲ್!

ಭಾರತದಲ್ಲಿ ನಟಿಯರು ಚುನಾವಣೆಗೆ ಸ್ಪರ್ಧಿಸುವುದು ಸಾಮಾನ್ಯ. ಸಿನಿಮಾಗಳಲ್ಲಿ ಎಷ್ಟೇ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರೂ ಸಹ ಚುನಾವಣೆ ಸಮಯದಲ್ಲಿ ಖಾದಿ ಸೀರೆಗಳನ್ನು ಧರಿಸಿ ಲಕ್ಷಣವಾಗಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಆದರೆ ಮೆಕ್ಸಿಕೋದಲ್ಲಿ ಮಾಡೆಲ್ ಒಬ್ಬಾಕೆ ಚುನಾವಣೆಗೆ ಸ್ಪರ್ಧಿಸಿದ್ದು ಮತದಾರರನ್ನು ಸೆಳೆಯಲು ಬೆತ್ತಲೆಯಾಗಿ ಫೋಸ್ ನೀಡಿದ್ದಾಳೆ. ಅಷ್ಟೇ ಅಲ್ಲದೆ ಚಿತ್ರ-ವಿಚಿತ್ರ ಭರವಸೆಗಳನ್ನು ಸಹ ನೀಡಿದ್ದಾಳೆ.

ಮೆಕ್ಸಿಕೋದ ಮಾಡೆಲ್ ರೋಸ್ಸಿಯೊ ಪಿನೊ ಅಲಿಯಾಸ್ ಲಾ ಗ್ರೊಸೇರಾ ಮೆಕ್ಸಿಕೋದ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣಾ ಪ್ರಚಾರಕ್ಕಾಗಿ ಬೆತ್ತಲೆಯಾಗಿ ಫೋಸ್ ನೀಡಿದ್ದಾರೆ. ತಾವು ಗೆದ್ದರೆ ಸ್ತನಗಳನ್ನು ಸುಂದರಗೊಳಿಸುವ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ (ಬ್ರೆಸ್ಟ್ ಇಂಪ್ಲ್ಯಾಂಟ್) ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಖಾಸಗಿ ವಿಡಿಯೋ, ಚಿತ್ರಗಳನ್ನು ಗ್ರಾಹಕರಿಗೆ ನೀಡುವ 'ಓನ್ಲಿ ಫ್ಯಾನ್' ವೆಬ್‌ಸೈಟ್‌ನಲ್ಲಿ ಮಾಡೆಲ್ ಆಗಿರುವ ರೋಸ್ಸಿಯೊ ವೆಬ್‌ಸೈಟ್ ಮೂಲಕವೇ ಜನಪ್ರಿಯತೆಗಳಿಸಿದ್ದಾರೆ. ಇದೀಗ 'ಓನ್ಲಿ ಫ್ಯಾನ್' ವೆಬ್‌ಸೈಟ್‌ನಿಂದ ಹೊರಗೆ ಬಂದಿರುವ ರೋಸ್ಸಿಯೊ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಜಾಹೀರಾತಿನಲ್ಲಿ ಅರೆ ಬೆತ್ತಲೆ ಚಿತ್ರಗಳು

ಜಾಹೀರಾತಿನಲ್ಲಿ ಅರೆ ಬೆತ್ತಲೆ ಚಿತ್ರಗಳು

ಪ್ರಸ್ತುತ ಗರ್ಭಿಣಿ ಆಗಿರುವ ರೋಸ್ಸಿಯೊ ಆದರೂ ಸಹ ಅರೆ ಬೆತ್ತಲೆ ಫೊಟೊಗಳನ್ನು ಚುನಾವಣೆ ಪ್ರಚಾರಕ್ಕಾಗಿ ನೀಡಿದ್ದಾರೆ. 'ಮತ ನೀಡಿ' ಎಂಬ ಜಾಹೀರಾತಿನ ರೋಸ್ಸಿಯೊರ ಅರೆ ಬೆತ್ತಲೆ ಚಿತ್ರಗಳನ್ನು ತಮ್ಮ ಕ್ಷೇತ್ರಗಳಲ್ಲಿ ಹಾಕಿಸಿದ್ದಾರೆ ರೋಸ್ಸಿಯೊ.

'ಸ್ತನಗಳುಳ್ಳ ಮಹಿಳೆ ಸಬಲೀಕೃತ ಮಹಿಳೆ'

'ಸ್ತನಗಳುಳ್ಳ ಮಹಿಳೆ ಸಬಲೀಕೃತ ಮಹಿಳೆ'

'ಸ್ತನಗಳುಳ್ಳ ಮಹಿಳೆ ಸಬಲೀಕೃತ ಮಹಿಳೆ', 'ನೀವು ನನಗೆ ನೀಡುವ ಮತದಿಂದ ಇಬ್ಬರಿಗೆ ಸಹಾಯವಾಗುತ್ತದೆ' ಇನ್ನಿತರೆ ಸ್ಲೋಗನ್‌ಗಳನ್ನು ಅವರು ತಮ್ಮ ಚುನಾವಣಾ ಪ್ರಚಾರ ಜಾಹೀರಾತಿನಲ್ಲಿ ಬಳಸಿದ್ದಾರೆ. 'ಯಾವುದೇ ಮಹಿಳೆಯನ್ನು ಕೇಳಿ ನೋಡಿ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ ಆದರೆ ಹಣವಿರುವುದಿಲ್ಲ. ಹಾಗಾಗಿ ನನ್ನನ್ನು ಗೆಲ್ಲಿಸಿದರೆ ಮಹಿಳೆಯರಿಗೆ ಬ್ರೆಸ್ಟ್ ಇಂಪ್ಲ್ಯಾಂಟ್ ಮಾಡಿಸುತ್ತೇನೆ. ಸ್ತನ ಕ್ಯಾನ್ಸರ್‌ ನಿಂದ ಗುಣಮುಖರಾದವರಿಗೂ ಇದು ಸಹಾಯವಾಗಲಿದೆ' ಎಂದಿದ್ದಾರೆ ರೋಸ್ಸಿಯೊ.

ಒಳ್ಳೆಯ ಭರವಸೆಗಳನ್ನೂ ನೀಡಿದ್ದಾರೆ ರೋಸ್ಸಿಯೊ

ಒಳ್ಳೆಯ ಭರವಸೆಗಳನ್ನೂ ನೀಡಿದ್ದಾರೆ ರೋಸ್ಸಿಯೊ

ಕೇವಲ ಇದಷ್ಟೆ ಅಲ್ಲದೆ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯವನ್ನು ತಡೆಯಲು ಕಠಿಣ ಕಾನೂನು ತರುವ ಭರವಸೆಯನ್ನೂ ರೋಸ್ಸಿಯೊ ನೀಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡದ ಪೋಷಕರನ್ನು ಶಿಕ್ಷಿಸುವಂತೆ ಕಾನೂನು ತರುವುದಾಗಿಯೂ ಭರವಸೆ ನೀಡಿದ್ದಾರೆ.

Recommended Video

Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada
ಪ್ರೋಗ್ರೆಸ್ಸಿವ್ ಸೋಷಿಯಲ್ ನೆಟ್‌ವರ್ಕ್ ಪಕ್ಷದಿಂದ ಸ್ಪರ್ಧೆ

ಪ್ರೋಗ್ರೆಸ್ಸಿವ್ ಸೋಷಿಯಲ್ ನೆಟ್‌ವರ್ಕ್ ಪಕ್ಷದಿಂದ ಸ್ಪರ್ಧೆ

ರೋಸ್ಸಿಯೊ ಪ್ರೋಗ್ರೆಸ್ಸಿವ್ ಸೋಷಿಯಲ್ ನೆಟ್‌ವರ್ಕ್ ಪಕ್ಷದಿಂದ ಚೇಂಬರ್ ಆಫ್ ಡೆಪ್ಯೂಟೀಸ್ ಸ್ಥಾನಕ್ಕೆ ಸೊನಾರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಯು ಜೂನ್ 06ಕ್ಕೆ ನಡೆಯಲಿದೆ. 2017 ರಲ್ಲಿ ಸಂಭವಿಸಿದ ಚಿಯಾಪಾಸ್ ಭೂಕಂಪದ ಸಂದರ್ಭದಲ್ಲಿ ರೋಸ್ಸಿಯೊ ಸ್ವಯಂ ಸೇವಕಿಯಾಗಿ ದುಡಿದ್ದಿದ್ದರಂತೆ, ಆಗ ಅವರಿಗೆ 'ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು' ಎನಿಸಿತಂತೆ.

More from Filmibeat

English summary
Rocio Pino, model from Mexico contested for election and she promises free breast implants if she won the election. She poses naked for election campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X