ಭಗವದ್ಗೀತೆ, ಗಣೇಶನ ಫೊಟೊ ಮನೆಯಲ್ಲಿಟ್ಟುಕೊಂಡಿದ್ದಾರೆ ಈ ವಿದೇಶಿ ಸ್ಟಾರ್ ನಟ
ಹಿಂದು ಧರ್ಮವನ್ನು ಪಾಲಿಸುವ ಹಲವು ವಿದೇಶಿಗರಿದ್ದಾರೆ. ಅದರಲ್ಲಿ ಕೆಲವು ಸ್ಟಾರ್ ಸೆಲೆಬ್ರಿಟಿಗಳು ಸಹ ಇದ್ದಾರೆ. ಇದೇ ಪಟ್ಟಿಗೆ ಮತ್ತೊಂದು ಸೇರ್ಪಡೆ ಖ್ಯಾತ ಸ್ಪ್ಯಾನಿಷ್ ನಟ ಪೆಡ್ರೊ ಗೊನ್ಜಾಲೆಸ್ ಅಲೋನ್ಜೊ.
Recommended Video
ಈ ಸ್ಪ್ಯಾನಿಷ್ ನಟನನ್ನು ಆತನ ಮೂಲ ಹೆಸರು ಪೆಡ್ರೊ ಗೊನ್ಜಾಲೆಸ್ ಅಲೋನ್ಜೊ ಎಂದು ಕರೆದರೆ ಹಲವರಿಗೆ ಗೊತ್ತಾಗುವುದಿಲ್ಲ, ಅದೇ 'ಬರ್ಲಿನ್' ಎಂದರೆ ಥಟ್ಟನೆ ಹೊಳೆಯುತ್ತದೆ. ಹೌದು, ವಿಶ್ವವನ್ನೇ ಮೋಡಿ ಮಾಡಿರುವ 'ಮನಿಹೈಸ್ಟ್' ವೆಬ್ ಸರಣಿಯ ಪ್ರಖ್ಯಾತ 'ಬರ್ಲಿನ್' ಪಾತ್ರವನ್ನು ನಿರ್ವಹಿಸುವುದು ಇದೇ ನಟ ಪೆಡ್ರೊ ಗೊನ್ಜಾಲೆಸ್ ಅಲೋನ್ಜೊ.
ಪೆಡ್ರೊ ಗೊನ್ಜಾಲೆಸ್ ಅಲಿಯಾಸ್ ಬರ್ಲಿನ್ ಇತ್ತೀಚೆಗೆ ಭಾರತೀಯ ಆನ್‌ಲೈನ್ ಮಾಧ್ಯಮವೊಂದಕ್ಕೆ ಆನ್‌ಲೈನ್ ವಿಡಿಯೋ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಭಾರತದ ಬಗ್ಗೆ ಮಾತನಾಡಿರುವ ಈ ನಟ ತಮ್ಮ ಮನೆಯಲ್ಲಿ ಭಗವದ್ಗೀತೆ ಹಾಗೂ ದೇವರು ಗಣೇಶನ ಫೊಟೊ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ.

'ನನ್ನ ಪ್ರೇಯಸಿಗೆ ಭಾರತದ ಬಗ್ಗೆ ಗೊತ್ತಿದೆ'
'ನನ್ನ ಪ್ರೇಯಸಿಗೆ ಭಾರತ, ಏಷ್ಯಾ ಖಂಡದ ಬಗ್ಗೆ ಸಾಕಷ್ಟು ಜ್ಞಾನವಿದೆ. ಅಲ್ಲೆಲ್ಲಾ ಸಾಕಷ್ಟು ಸಂಚರಿಸಿದ್ದಾಳೆ, ಅಭ್ಯಾಸ ಮಾಡಿದ್ದಾಳೆ. ಆಕೆಯಿಂದ ನಾನು ಭಾರತದ ಬಗ್ಗೆ ತಿಳಿದುಕೊಂಡಿದ್ದೇನೆ. ನನ್ನ ಮನೆಯಲ್ಲಿ ಭಗವದ್ಗೀತೆ ಹಾಗೂ ದೇವರು ಗಣೇಶನ ಫೊಟೊ ಒಟ್ಟುಕೊಂಡಿದ್ದೇನೆ ಎಂದಿದ್ದಾರೆ ಬರ್ಲಿನ್.

ಪುಸ್ತಕ ಬರೆದಿರುವ ಬರ್ಲಿನ್
ಸ್ವತಃ ಪುಸ್ತಕವೊಂದನ್ನು ಬರೆದಿರುವ ಬರ್ಲಿನ್, ನನಗೆ ಪ್ರವಾಸ ಹೋಗುವುದು ವಿವಿಧ ಸ್ಥಳಗಳ ಸಂಸ್ಕೃತಿ, ಸಂಸ್ಕೃತಿಯ ಭಿನ್ನತೆಯನ್ನು ತಿಳಿದುಕೊಳ್ಳುವುದು ಇಷ್ಟ. ನಾನು ಭಗವದ್ಗೀತೆಯನ್ನು ಇಟ್ಟುಕೊಂಡಿದ್ದೇನೆ, ಇನ್ನೂ ಕೆಲವು ಗ್ರಂಥಗಳಲ್ಲಿ ಅಧ್ಯಯನ ಮಾಡಿದ್ದೇನೆ. ಆದರೆ ಎಲ್ಲರದಾಚೆ ನನ್ನದೇ ಧಾರ್ಮಿಕ ಸಿದ್ಧಾಂತವನ್ನು ನಾನು ಹೊಂದಿದ್ದೇನೆ ಎಂದಿದ್ದಾರೆ ಈ ಸ್ಟಾರ್ ನಟ.

ಬಾಲಿವುಡ್ ಡೈಲಾಗ್ ಹೊಡೆದ ಬರ್ಲಿನ್
ಇದೇ ಸಂದರ್ಶನದಲ್ಲಿ ಕೆಲವು ಬಾಲಿವುಡ್ ಸಿನಿಮಾಗಳ ಡೈಲಾಗ್ ಅನ್ನು ಸಹ ಹೊಡೆದಿದ್ದಾರೆ ಬರ್ಲಿನ್, 'ಮುಗ್ಯಾಂಬೊ ಖುಷ್ ಹುವಾ', 'ಬಡೇ ಬಡೇ ದೇಶೊ ಮೇ ಚೋಟಿ ಚೋಟಿ ಬಾಯ್ ಹೋತೀ ರೆಹತೀ ಹೈ' ಇನ್ನೂ ಕೆಲವು ಡೈಲಾಗ್‌ಗಳನ್ನು ಹೇಳಿದ್ದಾರೆ ಬರ್ಲಿನ್.

ಜನಪ್ರಿಯ ವೆಬ್ ಸರಣಿ 'ಮನಿಹೈಸ್ಟ್'
ವಿಶ್ವದ ಅತ್ಯಂತ ಜನಪ್ರಿಯ ವೆಬ್ ಸರಣಿಗಳಲ್ಲಿ ಪ್ರಮುಖವಾದುದು 'ಮನಿಹೈಸ್ಟ್'. ಕಳ್ಳ ಮತ್ತು ಪೊಲೀಸರ ನಡುವಿನ ತಿಕ್ಕಾಟದ ಈ ಶೋ ಕೋಟ್ಯಂತರ ಜನರನ್ನು ಸೆಳೆದಿದೆ. ಈವರೆಗೆ ಐದು ಪಾರ್ಟ್‌ಗಳಲ್ಲಿ ಸರಣಿ ಪ್ರಸಾರವಾಗಿದ್ದು, ಐದನೇ ಸರಣಿ ಕೆಲವು ತಿಂಗಳಲ್ಲಿ ಪ್ರಸಾರವಾಗಲಿದೆ.


Click it and Unblock the Notifications











