ವಿಡಿಯೋ: ಮನಿ ಹೈಸ್ಟ್ ನ ನೈರೋಬಿ ಸೀರೆ ಉಟ್ಟು ತೆಲುಗು ಮಾತನಾಡುವುದು ನೋಡಿದ್ದೀರಾ?
'ಮನಿಹೈಸ್ಟ್' ವಿಶ್ವವಿಖ್ಯಾತ ವೆಬ್ ಸೀರೀಸ್. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಈ ಸರಣಿ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ.
Recommended Video
ದರೋಡೆ ಕತೆಯನ್ನು ಅದೆಷ್ಟು ರೋಚಕವಾಗಿ, ಭಾವನಾತ್ಮಕವಾಗಿ, ಬುದ್ಧಿವಂತಿಕೆಯಿಂದ ಹೇಳಿದ್ದಾರೆಂದರೆ. ವಿಶ್ವವೇ ಸೂಜಿಗಲ್ಲಿನಂತೆ ಮನಿಹೈಸ್ಟ್ ಗೆ ಆಕರ್ಷಿತವಾಗಿದೆ.
ಮನಿ ಹೈಸ್ಟ್, ಜನರಿಗೆ ಈ ಪರಿ ಮೋಡಿ ಮಾಡಲು ಮತ್ತೊಂದು ಕಾರಣ ಕತೆಯೊಳಗಿನ ಭಿನ್ನ-ಭಿನ್ನ ಪಾತ್ರಗಳು. ಪ್ರೊಫೆಸರ್, ಬರ್ಲಿನ್, ಟೋಕಿಯೋ, ಡೆನ್ವರ್, ಮಾಸ್ಕೊ ಹೀಗೆ ಒಂದಕ್ಕಿಂತಾ ಒಂದು ಭಿನ್ನವಾದ, ತೀರಾ ಆತ್ಮೀಯ ಎನಿಸುವ ಪಾತ್ರಗಳು ಮತ್ತು ಅವರ ನಟನೆ.

ಜನಮೆಚ್ಚಿನ ಪಾತ್ರಗಳಲ್ಲಿ ಒಂದು
ಮನಿಹೈಸ್ಟ್ ಪಾತ್ರಗಳಲ್ಲಿ ಅತಿಹೆಚ್ಚು ಖ್ಯಾತಿಗಳಿಸಿದ ಜನರಿಗೆ ಇಷ್ಟವಾದ ಪಾತ್ರಗಳಲ್ಲಿ ಪ್ರಮುಖವಾದುದು ನೈರೋಬಿ ಪಾತ್ರ. ಇದನ್ನು ನಿರ್ವಹಿಸಿದ ಅಲ್ಬಾ ಫ್ಲೊರೆಸ್ ಭಾರತೀಯ ಉಡುಗೆ ತೊಟ್ಟು ತೆಲುಗು ಮಾತನಾಡುವ ವಿಡಿಯೋ ಭಾರಿ ವೈರಸ್ ಆಗಿದೆ.

ಆಪ್ತವಾಗುವ ನೈರೋಬಿ ಪಾತ್ರ
ಪುಟ್ಟ ಮಗನನ್ನು ವಾಪಸ್ ಸೇರಿಕೊಳ್ಳಲು, ಆತನಿಗೆ ಉಜ್ವಲ ಭವಿಷ್ಯ ರೂಪಿಸುವ ಕನಸು ಕಟ್ಟಿಕೊಂಡು ದರೋಡೆಗೆ ಬರುವ ನೈರೋಬಿ. ದರೋಡೆ ತಂಡದೆಲ್ಲರ ನೆಚ್ಚಿನ ಹುಡುಗಿ. ಸದಾ ನ್ಯಾಯದ ಪರ. ಸದಾ ಪ್ರೊಫೆಸ್ಸರ್ ಪರ. ನೋವಿನಲ್ಲೂ ನಗುವ-ನಗಿಸುವ ಗುಣ ನೈರೋಬಿಯದ್ದು, ಹಾಗಾಗಿಯೇ ಈ ಪಾತ್ರ ಹೆಚ್ಚು ಜನಕ್ಕೆ ಆಪ್ತ.

ನೈರೋಬಿ ಪಾತ್ರ ಮಾಡಿರುವ ಅಲ್ಬಾ ಫ್ಲೊರೆಸ್
ನೈರೋಬಿ ಪಾತ್ರ ಮಾಡಿದ ಅಲ್ಬಾ ಫ್ಲೊರೆಸ್ ಈ ಹಿಂದೆ ಭಾರತೀಯ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ವಿಸೆಂಟ್ ಫೆರ್ರೆರ್' ಎಂಬ ಫ್ರೆಂಚ್ ಸಿನಿಮಾದಲ್ಲಿ ಅವರು ಅನಂತಪುರಂ ಜಿಲ್ಲೆಯ ತೆಲುಗು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾದ ವಿಡಿಯೋ ಈಗ ವೈರಲ್ ಆಗಿದೆ
ಆ ಸಿನಿಮಾದ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋದಲ್ಲಿ ಸೀರೆಯುಟ್ಟ ನೈರೋಬಿ ಥೇಟ್ ಭಾರತೀಯ ಮಹಿಳೆಯಂತೆಯೇ ಕಾಣುತ್ತಾರೆ. ಅಷ್ಟೆ ಅಲ್ಲ ತುಂಬಾ ಚೆನ್ನಾಗಿ ತೆಲುಗು ಭಾಷೆ ಸಹ ಮಾತನಾಡುತ್ತಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ.

ಚಿತ್ರಗಳನ್ನು ಅಪ್‌ಲೋಡ್ ಮಾಡಿದ ನೈರೋಬಿ
ವಿಡಿಯೋ ವೈರಲ್ ಆಗುತ್ತಿದ್ದಂತೆ ನೈರೋಬಿ ಅಲಿಯಾಸ್ ಅಲ್ಬಾ ಫ್ಲೊರೆಸ್ ತಮ್ಮ ಭಾರತೀಯ ಲುಕ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನೂ ಸಹ ಕೋಟ್ಯಂತರ ಮಂದಿ ಲೈಕ್, ಶೇರ್ ಮಾಡಿದ್ದಾರೆ.


Click it and Unblock the Notifications