ಲೈಂಗಿಕ ಕಿರುಕುಳ ಆರೋಪಕ್ಕೆ ಕ್ಷಮೆಯಾಚಿಸಿದ ನಟ ಮಾರ್ಗನ್ ಫ್ರೀಮನ್
ಆಸ್ಕರ್ ವಿಜೇತ ನಟ, ಕಂಚಿನ ಕಂಠದ ಮಾರ್ಗನ್ ಫ್ರೀಮನ್ ಅವರ ಮೇಲೆ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಕ್ಷಮೆಯಾಚಿಸಿದ್ದಾರೆ. ಎಂಟು ಮಹಿಳಾ ಸೇರಿದಂತೆ ಒಟ್ಟು ಹದಿನೆಂಟು ಜನರು ಮಾರ್ಗನ್ ಫ್ರೀಮನ್ ವಿರುದ್ಧ ಆರೋಪ ಮಾಡಿದ್ದರು.
ಶೂಟಿಂಗ್ ಸೆಟ್ ನಲ್ಲಿ ಮಾರ್ಗನ್ ಅವರು ಅಸಭ್ಯವಾಗಿ ವರ್ತಿಸುತ್ತಿದ್ದರು, ದೌರ್ಜನ್ಯ ಮಾಡ್ತಾರೆ ಎಂದು ಮಹಿಳೆಯರು ಸೇರಿದಂತೆ ಹಲವರು ದೂರು ನೀಡಿದ್ದರು ಎಂದು ಸಿಎನ್ ಎನ್ ವರದಿಯಲ್ಲಿ ಉಲ್ಲೇಖಸಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾರ್ಗನ್ ಅವರು "ನನಗೆ ತಿಳಿದಿರುವ ಅಥವಾ ನನ್ನೊಂದಿಗೆ ಕೆಲಸ ಮಾಡಿದ್ದವರ ಬಳಿ ಯಾವುದೇ ಉದ್ದೇಶ ಪೂರ್ವಕವಾಗಿ ಅಪರಾಧವಾಗಿರುವುದಿಲ್ಲ. ಯಾರೂ ಅದನ್ನ ಅಪರ್ಥ ಮಾಡಿಕೊಳ್ಳಬೇಡಿ. ಅದರಿಂದ ಯಾರಿಗಾದರೂ ಅವಮಾನ, ಅಪಮಾನವಾಗಿದ್ದರೇ ನಾನು ಕ್ಷಮೆಯಾಚಿಸುತ್ತೇನೆ - ಇದು ನನ್ನ ಉದ್ದೇಶವಲ್ಲ" ಎಂದಿದ್ದಾರೆ.

2015 ರ ಬೇಸಿಗೆಯಲ್ಲಿ ಕೆಲಸದ ವೇಳೆ, ತಮ್ಮ ಪ್ರೊಡಕ್ಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ಸಹಾಯಕಿಗೆ ಕಿರುಕುಳ ನೀಡಿದ್ದರು ಎಂದು ಕೇಬಲ್ ಟೆಲಿವಿಷನ್ ನೆಟ್ ವರ್ಕ್ ವರದಿ ಮಾಡಿತ್ತು.
ಫ್ರೀಮನ್ ತನ್ನನ್ನು ಪದೇ ಪದೇ ಮುಟ್ಟುವಂತೆ, ತನ್ನ ಕೈಯನ್ನು ತಾಗಿಸುತ್ತಾ ಮತ್ತು ಅನುಮತಿ ಇಲ್ಲದೆ ಬೆನ್ನು ಮುಟ್ಟುವುದು, ಮತ್ತು ಕೆಟ್ಟದಾಗಿ ನೋಡುತ್ತಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ, ತನ್ನ ಸ್ಕರ್ಟ್ ಎತ್ತುವಂತೆ ಮತ್ತು ಒಳ ಉಡುಪಿನ ಬಗ್ಗೆ ಮಾತನಾಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಳು ಎಂದು ವರದಿಯಾಗಿತ್ತು.


Click it and Unblock the Notifications











