ಥಿಯೇಟರ್‌ನಲ್ಲಿ ಆದಿಪುರುಷ್ ಅಬ್ಬರ; ಓಟಿಟಿಯಲ್ಲಿ ಅದೇ ದಿನ 'ಎಕ್ಸ್ಟ್ರಾಕ್ಷನ್ 2' ಬಿಡುಗಡೆ

ನಾಳೆ ( ಜೂನ್ 16 ) ಶುಕ್ರವಾರ ನಟ ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಳ್ಳುತ್ತಿದೆ. ಮೂಲ ಹಿಂದಿ ಭಾಷೆಯ ಚಿತ್ರವಾಗಿರುವ ಆದಿಪುರುಷ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ತೆರೆಗೆ ಬರುತ್ತಿದೆ.

ದೇಶದಾದ್ಯಂತ ಸದ್ಯ ಆದಿಪುರುಷ್ ಜಪ ಜೋರಾಗಿ ನಡೆಯುತ್ತಿದ್ದು, ಇದೇ ದಿನ ದೇಶದಲ್ಲಿ ವಿವಿಧ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಹೀಗೆ ಒಂದೆಡೆ ಚಿತ್ರಮಂದಿರಗಳಲ್ಲಿ ಹಲವು ಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದರೆ, ಮತ್ತೊಂದೆಡೆ ಓಟಿಟಿಯಲ್ಲಿಯೂ ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ.

Most anticipated movie Extraction 2 releasing tomorrow on Netflix

ಕಳೆದ ಕೆಲ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಅನೇಕ ಚಿತ್ರಗಳು ನಾಳೆ ಓಟಿಟಿಗೆ ಬರುತ್ತಿದ್ದರೆ, ಇವುಗಳ ಜತೆಗೆ ಕೆಲ ಹೊಸ ಚಿತ್ರಗಳೂ ಸಹ ನೇರವಾಗಿ ಓಟಿಟಿಗೆ ಲಗ್ಗೆ ಇಡುತ್ತಿವೆ. ಈ ಚಿತ್ರಗಳ ಪೈಕಿ ಅಮೆರಿಕಾದ ಆಕ್ಷನ್ ಥ್ರಿಲ್ಲರ್ 'ಎಕ್ಸ್ಟ್ರಾಕ್ಷನ್ 2' ಸಹ ಒಂದು.

ಹೌದು, 2020ರಲ್ಲಿ ತೆರೆಗೆ ಬಂದಿದ್ದ ಎಕ್ಸ್ಟ್ರಾಕ್ಷನ್ ಚಿತ್ರದ ಯಶಸ್ಸಿನ ಬಳಿಕ 'ಎಕ್ಸ್ಟ್ರಾಕ್ಷನ್ 2' ಚಿತ್ರವನ್ನು ಅದೇ ತಂಡ ನಿರ್ಮಿಸಿದ್ದು, ಈ ಚಿತ್ರ ನಾಳೆ ( ಜೂನ್ 16 ) ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ. ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಕಳೆದ ಚಿತ್ರದಲ್ಲಿ ಭಾರತದ ಕುಖ್ಯಾತ ಮಾದಕ ವಸ್ತುಗಳ ಮಾಫಿಯಾದ ಡಾನ್ ಓವಿ ಮಹಾಜನ್ ಕಥೆಯನ್ನು ಹೇಳಿದ್ದ ಚಿತ್ರತಂಡ ಈ ಬಾರಿ ಯಾವ ಕಥೆಯನ್ನು ತೆರೆ ಮೇಲೆ ತೋರಿಸುತ್ತಾರೋ ಕಾದು ನೋಡಬೇಕಿದೆ. ಈ ಚಿತ್ರ ಆಂಡಿ ಪಾರ್ಕ್ಸ್ ಬರೆದಿರುವ 'ಸಿಯುಡಾಡ್' ಎಂಬ ಗ್ರಾಫಿಕ್ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಜೋ ರುಸ್ಸೊ, ಆಂಟನಿ ರುಸ್ಸೋ, ಫೆರ್ನಾಂಡೊ ಲಿಯೊ ಗೊನ್ಝಲೆಜನ್ಝ್ ಹಾಗೂ ಎರಿಕ್ ಸ್ಕಿಲ್‌ಮ್ಯಾನ್ ಕಥೆ ಬರೆದಿದ್ದಾರೆ. ಇನ್ನು ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸ್ಯಾಮ್ ಹರ್‌ಗ್ರೇವ್ ಅವರೇ ಈ ಚಿತ್ರವನ್ನೂ ಸಹ ನಿರ್ದೇಶನ ಮಾಡುತ್ತಿದ್ದಾರೆ.

ಈ ಬಾರಿ ಕ್ರಿಸ್ ಹೆಮ್ಸ್‌ವರ್ತ್ ನಾಯಕನಾಗಿದ್ದರೆ, ಗೋಲ್ಶಿಫ್ತೆ ಫರಹಾನಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಆಡಂ ಬೆಸ್ಸಾ, ಓಲ್ಗಾ ಕುರ್ಯೇಂಕೊ ಸೇರಿದಂತೆ ಹಲವು ಪ್ರಮುಖ ನಟರು ಹಾಗೂ ನಟಿಯರು ಬಣ್ಣ ಹಚ್ಚಿದ್ದಾರೆ.

ಈ ಚಿತ್ರದಲ್ಲಿ ಕ್ರಿಸ್ ಹೆಮ್ಸ್‌ವರ್ತ್ ಟೈಲರ್ ರೇಕ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಗೋಲ್ಶಿಫ್ತೆ ಫರಹಾನಿ ನಿಕ್ ಖಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡ ಈ ಚಿತ್ರದ ಚಿತ್ರೀಕರಣ ಕೊವಿಡ್ ಕಾರಣದಿಂದಾಗಿ ಹೆಚ್ಚು ದಿನಗಳ ಕಾಲ ಸ್ಥಗಿತಗೊಂಡು ಬಳಿಕ ಮತ್ತೆ 2022ರ ಜನವರಿ 28ರಂದು ಆರಂಭಗೊಂಡು ಫೆಬ್ರವರಿ 14ರಂದು ಮುಕ್ತಾಯಗೊಂಡಿತ್ತು.

ಬಳಿಕ 2022ರ ಏಪ್ರಿಲ್ 6ರಂದು ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿತು. ಹೀಗೆ ಕಳೆದ ಎರಡ್ಮೂರು ವರ್ಷಗಳಿಂದ ನಡೆಯುತ್ತಿರುವ ಈ ಚಿತ್ರದ ಕೆಲಸ ಈಗ ಪೂರ್ಣಗೊಂಡಿದ್ದು, ಚಿತ್ರವನ್ನು ಸಿನಿ ರಸಿಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

More from Filmibeat

English summary
Most anticipated movie Extraction 2 releasing tomorrow on Netflix. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X