twitter
    For Quick Alerts
    ALLOW NOTIFICATIONS  
    For Daily Alerts

    2014ರಲ್ಲಿ ಸದ್ದು ಮಾಡಿದ ಚಿತ್ರದ ಟ್ರೈಲರ್ ಗಳು

    By ಜೇಮ್ಸ್ ಮಾರ್ಟಿನ್
    |

    ಈಗಿನ ದಿನಗಳಲ್ಲಿ ಚಿತ್ರಕ್ಕಿಂತ ಚಿತ್ರದ ಮುನ್ನೋಟವನ್ನು ನೀಡುವ ಟ್ರೈಲರ್ ಗಳು ಟೀಸರ್ ಗಳೇ ಹೆಚ್ಚು ಆಕರ್ಷಣೀಯ ಹಾಗೂ ಸೃಜನಶೀಲತೆಯಿಂದ ಕೂಡಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಹಾಲಿವುಡ್ ಚಿತ್ರಗಳಲ್ಲಿ ಈ ವರ್ಷ ಅನೇಕ ಟ್ರೈಲರ್ ಗಳು ಭಾರಿ ಸದ್ದು ಮಾಡಿದ್ದವು. ಫ್ಯೂರಿಯಸ್ 7, ಅವೆಂಜರ್ ಅಲ್ಲದೆ ಕಾದಂಬರಿಯಾಧರಿತ ಚಿತ್ರ ಫಿಫ್ಟಿ ಶೇಡ್ಸ್ ಆಫ್ ಗ್ರೇ ಕೂಡಾ ಹಿಟ್ ಟ್ರೇಲರ್ ಗಳ ಪಟ್ಟಿಗೆ ಸೇರಿತು.

    ಸಾಹಸಮಯ ದೃಶ್ಯಗಳ ಮೂಲಕ ಹಾಗೂ ಸಿನಿಮಾ ಅಲ್ಲದೆ ನಿಜ ಜೀವನದಲ್ಲೂ ಹೀರೋ ಆಗಿ ಮೆರೆದ ಪಾಲ್ ವಾಕರ್ ಅವರ ಅಭಿನಯದ ಕೊನೆ ಚಿತ್ರ ಫ್ಯೂರಿಯಸ್ 7 ಹೆಚ್ಚು ವೀಕ್ಷಣೆ ಪಡೆಯುವ ಟ್ರೈಲರ್ ಎಂಬ ನಿರೀಕ್ಷೆಯಿತ್ತು. ಅಥವಾ ಸ್ಟಾರ್ ವಾರ್ಸ್ ಪೈಪೋಟಿ ನೀಡುವ ಸಾಧ್ಯತೆಯಿತ್ತು.

    ಅದರೆ, ವರ್ಷ ಮುಗಿಯುತ್ತಿದ್ದಂತೆ ಫಿಫ್ಟಿ ಶೇಡ್ಸ್ ಆಫ್ ಗ್ರೇ ಚಿತ್ರದ ಟ್ರೈಲರ್ ಅತಿ ಹೆಚ್ಚು ಬಾರಿ ವೀಕ್ಷಣೆ ಪಡೆದುಕೊಂಡಿದೆ. ಮೊದಲ ವಾರವೇ 36.4 ಮಿಲಿಯನ್ ವೀಕ್ಷಣೆ ಪಡೆದ ಫಿಫ್ಟಿ ಶೇಡ್ಸ್ ಆಫ್ ಗ್ರೇ ವರ್ಷದ ಕೊನೆಗೆ 95 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. [ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ]

    ಟೀನೇಜ್ ನಿಂಜಾ ಟರ್ಟಲ್ಸ್ ಹುಟ್ಟುಹಾಕಿದ್ದ ದಾಖಲೆಯನ್ನು ಫಿಫ್ಟಿ ಶೇಡ್ಸ್ ಮುರಿದು ಹಾಕಿದೆ. ಸ್ಟಾರ್ ವಾರ್ಸ್ 81 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಅವೆಂಜರ್ಸ್ ಏಜ್ ಆಫ್ ಅಲ್ಟ್ರಾನ್ 78 ಮಿಲಿಯನ್ ವೀಕ್ಷಣೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಟಾಪ್ 5 ಟ್ರೇಲರ್ ಗಳು ಮುಂದಿವೆ ನೋಡಿ...

    ಫಿಫ್ಟಿ ಶೇಡ್ಸ್ ಆಫ್ ಗ್ರೇ ಚಿತ್ರದ ಟ್ರೈಲರ್

    ಫಿಫ್ಟಿ ಶೇಡ್ಸ್ ಆಫ್ ಗ್ರೇ ಚಿತ್ರದ ಟ್ರೈಲರ್

    2011 ರಲ್ಲಿ ಬ್ರಿಟಿಶ್ ಲೇಖಕ ಇ.ಎಲ್ ಜೇಮ್ಸ್ ಬರೆದ ಕಾಮೋನ್ಮತ್ತ ಸನ್ನಿವೇಶಗಳುಳ್ಳ, ವಿಶ್ವದ 51 ಭಾಷೆಗಳಿಗೆ ಅನುವಾದವಾಗಿರುವ, ಸುಮಾರು 100 ಮಿಲಿಯನ್ ಇ ಕಾಪಿಗಳು ಮಾರಾಟವಾಗಿರುವ ಕೃತಿ ತೆರೆಯ ಮೇಲೆ ಫೆ.14, 2015 ಬರಲು ಸಿದ್ಧವಾಗಿದೆ.

    ಸ್ಟಾರ್ ವಾರ್ಸ್ : ದಿ ಫೋರ್ಸ್ ಅವೇಕನ್ಸ್

    ಸ್ಟಾರ್ ವಾರ್ಸ್ : ದಿ ಫೋರ್ಸ್ ಅವೇಕನ್ಸ್

    ಸ್ಟಾರ್ ವಾರ್ಸ್ ಪ್ರಿಯರು ಬಹುಕಾಲದಿಂದ ಕಾಯುತ್ತಿರುವ ದಿ ಫೋರ್ಸ್ ಅವೇಕನ್ಸ್ ಚಿತ್ರ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು, ಸದ್ಯಕ್ಕೆ 81 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

    ಅವೆಂಜರ್ಸ್ ಏಜ್ ಆಫ್ ಅಲ್ಟ್ರಾನ್

    ಅವೆಂಜರ್ಸ್ ಏಜ್ ಆಫ್ ಅಲ್ಟ್ರಾನ್

    ಅವೆಂಜರ್ಸ್ ಏಜ್ ಆಫ್ ಅಲ್ಟ್ರಾನ್ ಭಾರಿ ಪೈಪೋಟಿ ನಡುವೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದು 78 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

    ಜುರಾಸಿಕ್ ವರ್ಲ್ಡ್

    ಜುರಾಸಿಕ್ ವರ್ಲ್ಡ್

    ಜುರಾಸಿಕ್ ಪಾರ್ಕ್ ಸರಣಿಯ ಮುಂದಿನ ಚಿತ್ರ ಜುರಾಸಿಕ್ ವರ್ಲ್ಡ್ ಟ್ರೈಲರ್ ಗೂ ಮುನ್ನ ಬಿಟ್ಟ ಕೆಲ ಸೆಕೆಂಡುಗಳ ಟೀಸರ್ ಭಾರಿ ಮೆಚ್ಚುಗೆ ಗಳಿಸಿತ್ತು. 1993ರಿಂದ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಿರುವ ಈ ಚಿತ್ರ ಸರಣಿಯ ಮುಂದಿನ ಚಿತ್ರ 64 ಮಿಲಿಯನ್ ವೀಕ್ಷಣೆ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.ಅದರೆ, ಟ್ರೇಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.[ಥ್ರಿಲ್ ಇರದ ಟ್ರೇಲರ್ ಗೂ ಕೋಟಿ ಮಂದಿ ಮೆಚ್ಚುಗೆ]

    ಟೀನೇಜ್ ಮುಟಾಂಟ್ ನಿಂಜಾ ಟರ್ಟಲ್ಸ್

    ಟೀನೇಜ್ ಮುಟಾಂಟ್ ನಿಂಜಾ ಟರ್ಟಲ್ಸ್

    ಟೀನೇಜ್ ಮುಟಾಂಟ್ ನಿಂಜಾ ಟರ್ಟಲ್ಸ್ ಈ ವರ್ಷದ ಆರಂಭದಿಂದಲೂ ಭಾರಿ ಸದ್ದು ಮಾಡಿದ ಟ್ರೈಲರ್ ಆಗಿತ್ತು. ಕೊನೆಗೆ 58 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಐದನೇ ಸ್ಥಾನಕ್ಕೆ ಕುಸಿದಿದೆ. ಫಿಫ್ಟಿ ಶೇಡ್ಸ್ ಆಫ್ ಗ್ರೇ ಟ್ರೈಲರ್ ಬಿಡುಗಡೆಗೂ ಮುನ್ನ ಈ ಚಿತ್ರ ಮುನ್ನೋಟವೇ ಭಾರಿ ಮೆಚ್ಚುಗೆ ಪಡೆದ ವಿಡಿಯೋ ಆಗಿತ್ತು.

    English summary
    Many movie trailers have won our hearts and have made it to the top watched trailers of 2014. With so many Hollywood movie trailers like Furious 7, Avengers: Age of Ultron and many more, YouTube has been searched again and again by viewers to watch the trailers.
    Friday, January 2, 2015, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X