ಅದ್ಭುತ ಸಿನಿಮಾ ಆದರೆ ನಾವ್ಯಾರು ನೋಡಲಾಗುವುದಿಲ್ಲ!

ಜನಕ್ಕೆ ಭವಿಷ್ಯದ ಬಗ್ಗೆ ಸದಾ ಕುತೂಹಲ. ಭವಿಷ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಹಲವಾರು ಸಿನಿಮಾಗಳು ವಿಶ್ವದೆಲ್ಲೆಡೆ ಈಗಾಗಲೇ ಬಂದಿವೆ. ಕನ್ನಡಲ್ಲಿ ಈ ಪ್ರಯತ್ನ ಬಹಳ ಹಿಂದೆಯೇ ಆಗಿತ್ತು, 'ಮಾನವ 2022' ಹೆಸರಿನ ಸಿನಿಮಾ 1997 ರಲ್ಲಿಯೇ ಬಿಡುಗಡೆ ಆಗಿತ್ತು. 2022 ರಲ್ಲಿ ಮಾನವ ಹೇಗಿರಬಹುದು ಎಂದು ಊಹಿಸಿ ಆ ಸಿನಿಮಾ ಮಾಡಲಾಗಿತ್ತು.

ಬಾಲಿವುಡ್‌ನಲ್ಲಿಯೂ ಹೀಗೆ ಭವಿಷ್ಯದ ಬಗ್ಗೆ ಹಲವು ಸಿನಿಮಾಗಳು ಬಂದಿವೆ. ಹಾಲಿವುಡ್‌ನಲ್ಲಿ ಅಂತೂ ಕೇಳುವಂತೆಯೇ ಇಲ್ಲ, ಭವಿಷ್ಯದ ಕುರಿತಾಗಿ ಹಲವಾರು ಸಿನಿಮಾಗಳು ಬಂದಿವೆ, ಸೂಪರ್-ಡೂಪರ್ ಹಿಟ್ ಸಹ ಆಗಿವೆ.

ಭವಿಷ್ಯ ಹೀಗಿರಬಹುದು ಎಂದು ಊಹಿಸಿ ಸಿನಿಮಾ ಮಾಡಿ ಅದನ್ನು ವರ್ತಮಾನದಲ್ಲಿ ಬಿಡುಗಡೆಗೊಳಿಸುವುದು ಸಾಮಾನ್ಯ, ಆದರೆ ಭವಿಷ್ಯ ಹೇಗಿರಬಹುದೆಂದು ಯೋಜಿಸಿ ಅದನ್ನು ಸಿನಿಮಾ ಮಾಡಿ ಸಿನಿಮಾವನ್ನೂ ಭವಿಷ್ಯದಲ್ಲಿಯೇ ಬಿಡುಗಡೆ ಮಾಡಿದರೆ? ಹೀಗೊಂದು ವಿಚಿತ್ರ ಸಾಹಸವೊಂದು ಈಗಾಗಲೇ ಮಾಡಲಾಗಿದೆ. ಸಿನಿಮಾ ನಿರ್ಮಾಣ ಮಾಡಿ ಅದನ್ನು ನೂರು ವರ್ಷಗಳ ಬಳಿಕ ಬಿಡುಗಡೆ ಮಾಡುವುದಾಗಿ ಹೇಳಿ ಭದ್ರ ಖಜಾನೆಯೊಳಗೆ ಬಚ್ಚಿಟ್ಟಿಬಿಟ್ಟಿದೆ ಚಿತ್ರತಂಡವೊಂದು.

ಹಾಲಿವುಡ್‌ನ ಜನಪ್ರಿಯ ನಟ, ಬರಹಗಾರ ಜಾನ್ ಮಾಲ್ಕೊವಿಚ್ ಹಾಗೂ ಜನಪ್ರಿಯ ನಿರ್ದೇಶಕ, ವಿಶ್ಯುಲ್ ಎಫೆಕ್ಟ್ಸ್ ಸೂಪರ್‌ವೈಸರ್ ರಾಬರ್ಟ್ ರೋಗ್ರಿಗೇಜ್ ಸೇರಿ ಸಿನಿಮಾ ಒಂದನ್ನು ಮಾಡಿದ್ದು ಆ ಸಿನಿಮಾ ಬಿಡುಗಡೆ ಆಗುವುದು ಇನ್ನು 93 ವರ್ಷಗಳ ನಂತರ ಅಂದರೆ 2115 ಕ್ಕೆ. ಅಲ್ಲಿಯ ವರೆಗೆ ಸಿನಿಮಾ ಖಜಾನೆಯೊಳಗೆ ಭದ್ರವಾಗಿರಲಿದೆ.

'100 ಇಯರ್ಸ್; ದಿ ಮೂವಿ ಯು ವಿಲ್ ನೆವೆರ್ ಸಿ'

'100 ಇಯರ್ಸ್; ದಿ ಮೂವಿ ಯು ವಿಲ್ ನೆವೆರ್ ಸಿ'

'100 ಇಯರ್ಸ್; ದಿ ಮೂವಿ ಯು ವಿಲ್ ನೆವೆರ್ ಸಿ' ಹೆಸರಿನ ಸಿನಿಮಾವನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ 2015 ರಲ್ಲಿಯೇ ಮುಗಿದಿದೆ. ಆದರೆ ಸಿನಿಮಾದ ಕಾಪಿಯನ್ನು ಖಜಾನೆಯೊಳಗೆ ಇರಿಸಿ ಬೀಗ ಹಾಕಲಾಗಿದೆ. ಸಿನಿಮಾವು 2015 ರಿಂದ ನೂರು ವರ್ಷ ಅಂದರೆ 2115 ಕ್ಕೆ ಬಿಡುಗಡೆ ಆಗಲಿದೆ. ಈಗಿನಿಂದ ಇನ್ನು 93 ವರ್ಷಗಳ ಯಾರು ಬದುಕಿರುತ್ತಾರೊ ಅವರು ಮಾತ್ರವೇ ಈ ಸಿನಿಮಾವನ್ನು ನೋಡಲು ಸಾಧ್ಯ. ಈಗ ಭೂಮಿ ಮೇಲೆ ಬದುಕಿರುವ ಮುಕ್ಕಾಲಿಗೂ ಹೆಚ್ಚು ಜನರಿಗೆ ಆ ಸಿನಿಮಾವನ್ನು ನೋಡಲು ಸಾಧ್ಯವೇ ಇಲ್ಲ.

ನೂರು ವರ್ಷಗಳ ಬಳಿಕ ಸಿನಿಮಾ ಬಿಡುಗಡೆ

ನೂರು ವರ್ಷಗಳ ಬಳಿಕ ಸಿನಿಮಾ ಬಿಡುಗಡೆ

2115 ರ ನವೆಂಬರ್ 18 ನೇ ತಾರೀಖಿನಂದು ಈ ಸಿನಿಮಾವನ್ನು ಇಡಲಾಗಿರುವ ಖಜಾನೆ ತಂತಾನೆ ತೆರೆದುಕೊಳ್ಳುತ್ತದೆ ಹಾಗೂ ಕ್ಯಾನಸ್‌ನ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತದೆ. ನೂರು ವರ್ಷದ ಬಳಿಕ ತನ್ನಂತಾನೆ ಸಿನಿಮಾ ಪ್ರದರ್ಶನವಾಗುವಂತೆ ಸಿನಿಮಾವನ್ನು ಇಡಲಾಗಿರುವ ಖಜಾನೆಯನ್ನು ತಂತ್ರಜ್ಞಾನ ಬಳಸಿ ಮಾರ್ಪಾಡುಗೊಳಿಸಲಾಗಿದೆ. ಸಿನಿಮಾದ ನಟ, ನಿರ್ದೇಶಕ, ನಿರ್ಮಾಪಕ ಯಾರೂ ಇಲ್ಲದಿದ್ದರೂ ಸರಿಯಾಗಿ ನೂರು ವರ್ಷವಾದ ಬಳಿಕ ಸಿನಿಮಾ ತಂತಾನೆ ಬಿಡುಗಡೆ ಆಗಲಿದೆ.

ಲೂಯಿಸ್ 13 ಬಾಟಲಿಯ ಜೊತೆ ಇಡಲಾಗಿದೆ

ಲೂಯಿಸ್ 13 ಬಾಟಲಿಯ ಜೊತೆ ಇಡಲಾಗಿದೆ

ಸಿನಿಮಾದ ಕಾಪಿ ಇಡಲಾಗಿರುವ ಖಜಾನೆಯಲ್ಲಿ ಲೂಯಿಸ್ 13 ಮದ್ಯದ ಬಾಟಲಿಯನ್ನು ಸಹ ಇಡಲಾಗಿದೆ. ಲೂಯಿಸ್ 13 ಬಾಟಲಿಯನ್ನು ಬರೋಬ್ಬರಿ 100 ವರ್ಷ ಏಜಿಂಗ್ ಪ್ರಕ್ರಿಯಿಗೆ ಒಳಪಡಿಸಿದ ಬಳಿಕವೇ ಗ್ರಾಹಕರಿಗೆ ನೀಡಲಾಗುತ್ತದೆ. ಈ ಸಿನಿಮಾವನ್ನು ಸಹ 100 ವರ್ಷದ ವರೆಗೆ ತೆಗೆಯದ ಕಾರಣ, ಲೂಯಿಸ್ 13 ಮದ್ಯದ ಬಾಟಲಿ ಒಂದನ್ನು ಆ ಸಿನಿಮಾದ ಕಾಪಿಯೊಂದಿಗೆ ಖಜಾನೆಯಲ್ಲಿ ಇಡಲಾಗಿದೆ. ಸಿನಿಮಾ ಬಿಡುಗಡೆ ಆದ ದಿನವೇ ಲೂಯಿಸ್ 13 ನ ಆ ಮದ್ಯದ ಬಾಟಲಿಯನ್ನು ಸಹ ತೆರೆದು ಮಾರಾಟಕ್ಕೆ ಇಡಲಾಗುತ್ತದೆ. '100 ಇಯರ್ಸ್; ದಿ ಮೂವಿ ಯು ವಿಲ್ ನೆವೆರ್ ಸಿ' ಸಿನಿಮಾವನ್ನು ಲೂಯಿಸ್ 13 ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗಿದೆ.

ನಟರು ಯಾರ್ಯಾರು?

ನಟರು ಯಾರ್ಯಾರು?

ಸಿನಿಮಾವನ್ನು ರಾಬರ್ಟ್ ರೋಡ್ರಿಗೆಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಕತೆ ಬರೆದಿರುವುದು ಜಾನ್ ಮಾಲ್ಕೊವಿಚ್. ಸಿನಿಮಾದಲ್ಲಿ ಶುಯಾ ಚಾಂಗ್, ಮಾರ್ಕೊ ಜರೋರ್ ಜೊತೆಗೆ ಕತೆ ಬರೆದಿರುವ ಜಾನ್ ಮಾಲ್ಕೊವಿಚ್ ಸಹ ನಟಿಸಿದ್ದಾರೆ. ಇನ್ನೂ ಕೆಲವು ಪಾತ್ರಗಳು ಸಿನಿಮಾದಲ್ಲಿಯೆವಾದರೂ ಮುಖ್ಯ ಪಾತ್ರಗಳು ಈ ಮೂರೇ. ಸಿನಿಮಾದಲ್ಲಿ ನಟಿಸಿರುವ ನಟರಿಗೆ ಸಿನಿಮಾದ ಟಿಕೆಟ್‌ಗಳನ್ನು ಉಡುಗೊರೆಗಳನ್ನು ಈಗಾಗಲೇ ನೀಡಲಾಗಿದೆ. ಆದರೆ ಅವರ್ಯಾರೂ ಈ ಸಿನಿಮಾ ನೋಡಲು ಸಾಧ್ಯವಿಲ್ಲ!

ಮೂರು ಪ್ರೋಮೊ ಬಿಡುಗಡೆ ಮಾಡಲಾಗಿದೆ

ಮೂರು ಪ್ರೋಮೊ ಬಿಡುಗಡೆ ಮಾಡಲಾಗಿದೆ

ಸಿನಿಮಾದ ಮೂರು ಪ್ರೋಮೊಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೂರೂ ಪ್ರೋಮೊಗಳ ಕತೆ ಅಥವಾ ಥೀಮ್ ಒಂದೇ ಆಗಿದೆ. ಆದರೆ ಮೂರೂ ಪ್ರೋಮೋಗಳು ಮೂರು ಭಿನ್ನ ಭವಿಷ್ಯದಲ್ಲಿ ನಡೆಯುತ್ತವೆ. ಒಂದು ಪ್ರೋಮೋನಲ್ಲಿ ಎಲ್ಲೆಲ್ಲೂ ಹಸಿರು ತುಂಬಿದೆ, ಇನ್ನೊಂದು ಪ್ರೋಮೊನಲ್ಲಿ ಜಗತ್ತು ಬಹಳ ಅಡ್ವಾನ್ಸ್ ಆಗಿಬಿಟ್ಟಿದೆ, ಮತ್ತೊಂದು ಪ್ರೋಮೋನಲ್ಲಿ ಜಗತ್ತು ಅಡ್ವಾನ್ಸ್ ಆಗಿದೆ ಆದರೆ ಜೊತೆಗೆ ಮಾಲಿನ್ಯ ಸಹ ಆಗಿಬಿಟ್ಟಿದೆ. ಮೂರೂ ಪ್ರೋಮೋನಲ್ಲಿ ಜಾನ್ ಮಾಲ್ಕೊವಿಚ್ ಸಿನಿಮಾದ ರೀಲ್ ಖಜಾನೆಯೊಳಗೆ ಇಟ್ಟು, ಲೂಯಿಸ್ 13 ಬಾಟಲಿಯೊಂದನ್ನು ಇಟ್ಟು ಖಜಾನೆಯ ಬಾಗಿಲು ಬಂದ್ ಮಾಡುತ್ತಾರೆ, ನಂತರ ನೂರು ವರ್ಷಗಳಾದ ಮೇಲೆ ನಟಿ ಶುಯಾ ಚಾಂಗ್ ಜೊತೆ ಸೇರಿ ಆ ಖಜಾನೆ ತೆರೆಯುತ್ತಾನೆ ಅದೇ ಸಮಯಕ್ಕೆ ಸರಿಯಾಗಿ ವಿಲನ್‌ ಲುಕ್‌ನಲ್ಲಿ ನಟ ಮಾರ್ಕೊ ಜರೋರ್ ಆಗಮನವಾಗುತ್ತದೆ. 'ನೀವೇಕೆ ಇಲ್ಲಿ ಬಂದಿದ್ದೀರಿ, ಏನು ಮಾಡುತ್ತಿದ್ದೀರಿ?' ಎಂದು ಪ್ರಶ್ನೆ ಮಾಡುತ್ತಾನೆ ಇಷ್ಟಕ್ಕೆ ಪ್ರೋಮೊ ಮುಗಿಯುತ್ತದೆ.

1000 ಮಂದಿಗೆ ಈಗಾಗಲೇ ಟಿಕೆಟ್ ನೀಡಲಾಗಿದೆ

1000 ಮಂದಿಗೆ ಈಗಾಗಲೇ ಟಿಕೆಟ್ ನೀಡಲಾಗಿದೆ

ಈ ಸಿನಿಮಾವನ್ನು ಯಾವ ಕಾರಣಕ್ಕೆ ನಿರ್ಮಾಣ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಿನಿಮಾದ ಕತೆಯನ್ನು ಸಹ ಗೌಪ್ಯವಾಗಿ ಇಡಲಾಗಿದೆ. ಐಎಂಡಿಬಿ ಪೇಜ್‌ನಲ್ಲಿಯೂ ಸಹ ಸಿನಿಮಾದ ಸಿನಾಪ್ಸಿಸ್ ನೀಡಲಾಗಿಲ್ಲ. ಸಿನಿಮಾವನ್ನು ಇಡಲಾಗಿರುವ ಖಜಾನೆಯನ್ನು ಫ್ರಾನ್ಸ್‌ನ ಕೊನ್ಯಾಕ್‌ನಲ್ಲಿ ಇಡಲಾಗಿದ್ದು, ಖಜಾನೆಯನ್ನು ಬುಲೆಟ್ ಪ್ರೂಫ್ ತಂತ್ರಜ್ಞಾನದಿಂದ ಮಾಡಲಾಗಿದೆ. ಸಿನಿಮಾದ ಮೊದಲ ಶೋಗೆ ವಿಶ್ವದಾದ್ಯಂತ ಸುಮಾರು 1000 ಮಂದಿಗೆ ಟಿಕೆಟ್ ಅನ್ನು ಉಚಿತವಾಗಿ ನೀಡಲಾಗಿದೆ. ಈ ಟಿಕೆಟ್‌ಗಳನ್ನು ಮೆಟಲ್‌ನಿಂದ ಮಾಡಲಾಗಿದೆ. ಆ ಟಿಕೆಟ್‌ಗಳನ್ನು ಅವರು ತಮ್ಮ ಮುಂದಿನ ಪೀಳಿಗೆಗೆ ನೀಡಬಹುದು. ಸಿನಿಮಾವನ್ನು ಹೊಂದಿರುವ ಖಜಾನೆಯನ್ನು ಕ್ಯಾನಸ್ ಸಿನಿಮೋತ್ಸವದಲ್ಲಿ ಸೇರಿದಂತೆ ಇತರ ಸಿನಿಮೋತ್ಸವಗಳಲ್ಲಿ ಪ್ರದರ್ಶನಕ್ಕೆ ಸಹ ಇಡಲಾಗುತ್ತದೆ.

More from Filmibeat

English summary
Movie 100 Years; The movie you will never see will released on November 18 2115. Movie made on 2015 it will release exactly after 100 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X