ಮನೆಯಲ್ಲಿ ಒಬ್ಬರೇ ಇದ್ದಾಗ ಹೃದಯಾಘಾತ, ಕೊನೆಯುಸಿರೆಳೆದ ಹಾಲಿವುಡ್‌ನ ಖ್ಯಾತ ಸ್ಟಾರ್

''ಕಿಲ್ ಬಿಲ್ ಭಾಗ 1'' ಮತ್ತು ಭಾಗ 2.. ''ರೆಸರ್ವಾಯರ್ ಡಾಗ್ಸ್''.. ''ದಿ ಹೇಟ್ಫುಲ್ ಎಟ್ಸ್''.. ''ಓನ್ಸ್ ಅಪೋನ್ ಎ ಟೈಮ್ ಇನ್ ಹಾಲಿವುಡ್''.. ಹೀಗೆ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದ ಹಾಲಿವುಡ್‌ನ ಖ್ಯಾತ ಸ್ಟಾರ್ ಮೈಕೆಲ್ ಮ್ಯಾಡ್ಸೆನ್ ಕೊನೆಯುಸಿರೆಳೆದಿದ್ದಾರೆ. 67ರ ಪ್ರಾಯದ ಮೈಕೆಲ್ ಮ್ಯಾಡ್ಸೆನ್ ಗುರುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ''ವರೈಟಿ'' ವೆಬ್ ಸೈಟ್ ವರದಿಯನ್ನು ಮಾಡಿದೆ.

ತಮ್ಮ ನಿವಾಸದಲ್ಲಿ ಮೈಕೆಲ್ ಮ್ಯಾಡ್ಸೆನ್ ಕುಸಿದು ಬಿದ್ದಿದ್ದು, ಬೆಳಗ್ಗೆ 8-25ಕ್ಕೆ ಹೃದಯಾಘಾತದಿಂದ ಮೈಕೆಲ್ ಇಹಲೋಕ ತ್ಯಜಿಸಿದರು ಎಂದು ಅವರ ಪ್ರತಿನಿಧಿ ಲಿಜ್ ರೊಡ್ರಿಗ್ವೆಜ್ ಹೇಳಿದ್ದಾರೆ.

Mr Blonde No More Michael Madsen Reservoir Dogs Actor Dies at 67

ಕಳೆದ ಎರಡು ವರ್ಷಗಳಿಂದ ''ರೆಸರೆಕ್ಷನ್ ರೋಡ್''.. ''ಕನ್ಸೆಷನ್ಸ್''.. ''ಕುಕ್‌ಬುಕ್ ಫಾರ್ ಸೌದರ್ನ್ ಹೌಸ್‌ವೈವ್ಸ್''.. ಹೀಗೆ ಹಲವು ಹೊಸ ಬಗೆಯ ಚಿತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದಿಂದ ಹಾಲಿವುಡ್ ಪ್ರೇಕ್ಷಕರಿಗೆ ಇನ್ನೂ ಹತ್ತಿರವಾಗಿದ್ದ ಮೈಕೆಲ್ ''ಟಿಯರ್ಸ್ ಫಾರ್ ಮೈ ಫಾದರ್'' ಎಂಬ ತಮ್ಮ ಪುಸ್ತಕವನ್ನು ಬಿಡುಗಡೆ ಮಾಡಲು ತಯಾರಿಯನ್ನು ನಡೆಸಿದ್ದರು ಎಂದು ಅವರ ಮ್ಯಾನೇಜರ್ ಮತ್ತು ಮುದ್ರಣಕಾರರು ಮಾಧ್ಯಮದವರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸೆಪ್ಟೆಂಬರ್ 25-1957ರಲ್ಲಿ ಚಿಕಾಗೋದಲ್ಲಿ ಜನ್ಮ ಪಡೆದ ಮೈಕೆಲ್ ಮ್ಯಾಡ್ಸೆನ್ ಚಿಕಾಗೋದಲ್ಲಿರುವ 'ಸ್ಟೆಪ್ಟನ್‌ವೋಲ್ಟ್' ರಂಗಭೂಮಿಯಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದರು.

'ಸ್ಟೆಪ್ಟನ್‌ವೋಲ್ಟ್' ರಂಗಭೂಮಿಯಲ್ಲಿ ಜಾನ್ ಮಾಲ್ಕೋವಿಚ್ ಅವರಿಂದ ಅಭಿನಯದ ಕಲೆಯನ್ನು ಕರಗತ ಮಾಡಿಕೊಂಡ ಮೈಕೆಲ್ ಆ ನಂತರ ಲಾಸ್‌ ಏಂಜಲೀಸ್‌ಗೆ ವಲಸೆ ಬಂದರು. ಬೆವರ್ಲಿ ಹಿಲ್ಸ್‌ನ ಗ್ಯಾಸ್‌ಸ್ಟೇಷನ್‌ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದ್ದರು.

1982ರಲ್ಲಿ St. Elsewhereನ ಎರಡು ಎಪಿಸೋಡ್‌ನಲ್ಲಿ ಕಾಣಿಸಿಕೊಂಡ ಮೈಕೆಲ್ ಆ ನಂತರ ಜಾನ್ ಬ್ಯಾಡ್ಹ್ಯಾಮ್ ನಿರ್ದೇಶನದ ''ವಾರ್‌ಗೇಮ್ಸ್‌'' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದರು.

mr-blonde-no-more-michael-madsen-reservoir-dogs-actor-dies-at-67

1992ರಲ್ಲಿ ತೆರೆಗೆ ಬಂದ ಖ್ಯಾತ ನಿರ್ದೇಶಕ ಕ್ವೆಂಟಿನ್ ಟಾರಂಟಿನೋ ನಿರ್ದೇಶನದ ಚೊಚ್ಚಲ ಚಿತ್ರ ''ರೆಸರ್ವಾಯರ್ ಡಾಗ್ಸ್'' ಮೈಕೆಲ್ ಅವರಿಗೆ ವ್ಯಾಪಕ ಹೆಸರು ಮತ್ತು ಕೀರ್ತಿಯನ್ನು ತಂದು ಕೊಟ್ಟಿತ್ತು. ಇಲ್ಲಿಂದಾಚೆ.. ಕ್ವೆಂಟಿನ್ ಟಾರಂಟಿನೋ ಮತ್ತು ಮೈಕೆಲ್ ಜೊತೆಯಲ್ಲಿ ಹಲವು ಚಿತ್ರಗಳನ್ನು ಮಾಡಿದ್ದರು.

1983ರಲ್ಲಿ ತೆರೆಗೆ ಬಂದ "ವಾರ್ ಗೇಮ್ಸ್," 1984ರಲ್ಲಿ ಬಿಡುಗಡೆಯಾದ "ದಿ ನ್ಯಾಚುರಲ್," 1991ರ "ದಿ ಡೋರ್ಸ್," ಅದೇ ವರ್ಷ ತೆರೆಗೆ ಬಂದ "ಥೆಲ್ಮಾ & ಲೂಯಿಸ್," 1993ರ "ಫ್ರೀ ವಿಲ್ಲಿ," 1995ರ "ಸ್ಪೀಸೀಸ್," 1996ರ "ಮಲ್ಹೋಲ್ಯಾಂಡ್ ಫಾಲ್ಸ್," 1997ರ "ಡೋನಿ ಬ್ರಾಸ್ಕೋ," 2002ರ "ಡೈ ಅನದರ್ ಡೇ," 2005ರ "ಸಿನ್ ಸಿಟಿ," ಮತ್ತು 2006ರ "ಸ್ಕೇರಿ ಮೂವಿ 4" ಮೈಕಲ್ ಮ್ಯಾಡ್ಸೆನ್ ಅಭಿನಯದ ಕೆಲ ಜನಪ್ರಿಯವಾದ ಪ್ರಮುಖ ಚಿತ್ರಗಳು.

ಕಳೆದ ವರ್ಷ '' ಅರೀನಾ ವಾರ್ಸ್'' ಮತ್ತು ''ಮ್ಯಾಕ್ಸ್ ದಾಗನ್'' ಚಿತ್ರಗಳಲ್ಲಿ ಅಭಿನಯಿಸಿದ್ದ ಮೈಕಲ್ ಮ್ಯಾಡ್ಸೆನ್ '' ಎ ಕಾರ್ಪ್ಸ್ ಇನ್ ಕೆನ್ಸಿಂಗ್ಟನ್'' ಮತ್ತು ''ಲೆಜೆಂಡ್ ಆಫ್ ದಿ ವೈಟ್ ಡ್ರ್ಯಾಗನ್'' ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ಎರಡು ಚಿತ್ರಗಳು ತೆರೆಗೆ ಬರುವ ಮುನ್ನ ಮೈಕೆಲ್ ಇಹಲೋಕ ತ್ಯಜಿಸಿದ್ದಾರೆ.

ಇನ್ನು ವ್ಯೆಯಕ್ತಿಕ ವಿಚಾರಕ್ಕೆ ಬಂದರೆ ಮೈಕೆಲ್ ಮೂರು ಮದುವೆಯಾಗಿದ್ದರು. 1984ರಲ್ಲಿ ಜಾರ್ಜ್ಯಾನ್ನೆ ಲಾಪಿಯೆರೆ ಅವರನ್ನು ಮದುವೆಯಾಗಿದ್ದ ಮೈಕೆಲ್ 1988ರಲ್ಲಿ ವಿಚ್ಛೇದನ ನೀಡಿದ್ದರು. ಆ ನಂತರ 1991ರಲ್ಲಿ ಜೆನ್ನಿನ್ ಬಿಸಿಗ್ನಾನೊ ಅವರನ್ನು ಮದುವೆಯಾಗಿದ್ದರು ಮೈಕೆಲ್. ಆದರೆ ಈ ಸಂಬಂಧ ಕೂಡ ಕೇವಲ ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು.

1996ರಲ್ಲಿ ಡಿಅನ್ನಾ ಮೋರ್ಗನ್ ಅವರನ್ನು ಮದುವೆಯಾಗಿದ್ದ ಮೈಕೆಲ್ ಸದ್ಯ ತಮ್ಮ ಮೂರನೇ ಪತ್ನಿಯ ಜೊತೆ ವಾಸ ಇದ್ದರು. ಮೂವರು ಪತ್ನಿಯರಿಂದ ಇವರಿಗೆ 7 ಜನ ಮಕ್ಕಳಿದ್ದು ಆ ಪೈಕಿ 2022ರಲ್ಲಿ ಒಬ್ಬ ಮಗ { ಹಡ್ಸನ್ } ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಮೈಕೆಲ್ ಹ್ಯಾಡ್ಸೆನ್ ಅವರ ನಿಧನಕ್ಕೆ ಹಾಲಿವುಡ್‌ನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

More from Filmibeat

English summary
Veteran actor Michael Madsen, known for 'Reservoir Dogs,' 'Kill Bill,' and over 300 roles, has passed away at 67. Explore his extensive filmography and legacy.
Read more about: death heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X