twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರಿನ ಅನಾಥ ಹುಡುಗ ಹಾಲಿವುಡ್‌ನಲ್ಲಿ ಸ್ಟಾರ್ ಆಗಿ ಮೆರೆದ ಕತೆ!

    |

    ಹಾಲಿವುಡ್‌ ಸಿನಿಮಾಗಳಲ್ಲಿ ಹಲವಾರು ಬಾಲಿವುಡ್ ನಟ-ನಟಿಯರು ಅಭಿನಯಿಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಪಾತ್ರಗಿಟ್ಟಿಸಿಕೊಳ್ಳಲು ನಟ-ನಟಿಯರು ಮಾಡುವ 'ಪಿಆರ್‌ ಸ್ಟಂಟ್‌'ಗಳು ಗೊತ್ತಿಲ್ಲದೇ ಇಲ್ಲ. ಆದರೆ, 1930 ರ ವೇಳೆಯಲ್ಲಿಯೇ ಮೈಸೂರಿನಲ್ಲಿ ಜನಿಸಿದ ಬಡ, ಅನಾಥ ಬಾಲಕನೊಬ್ಬ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ, ದೊಡ್ಡ ಸ್ಟಾರ್ ಆಗಿ ಮೆರೆದಿದ್ದ ಎಂಬುದು ಬಹು ಜನರಿಗೆ ಗೊತ್ತಿಲ್ಲ.

    ಹೌದು, ಆತನ ಹೆಸರು ಸಾಬು ದಸ್ತಗಿರ್, ಮೈಸೂರಿನ ಕರಪುರ ಎಂಬಲ್ಲಿ 1924 ರಲ್ಲಿ ಜನಿಸಿದ ಸಾಬು ದಸ್ತಗಿರ್, ಹುಟ್ಟುವಾಗಲೇ ಅಮ್ಮನನ್ನು, ನಂತರ ಅಪ್ಪನನ್ನೂ ಕಳೆದುಕೊಂಡು, ಆಗಿನ ಮೈಸೂರಿನ ರಾಜರ ಆನೆ ಲಾಯದಲ್ಲಿ ಕೆಲಸ ಮಾಡುತ್ತಿದ್ದ. ಈತನೇ ಮುಂದೆ ಕೋಟ್ಯಂತರ ಹಣ ಬಾಚಿದ ಹಾಲಿವುಡ್‌ ಸಿನಿಮಾಗಳ ನಾಯಕ ನಟನಾದ.

    1930, ಭಾರತದಲ್ಲಿ ಮೊದಲ ಟಾಕಿ ಸಿನಿಮಾ ಇನ್ನೂ ತಯಾರಾಗಿರಲಿಲ್ಲ ಆ ವೇಳೆಗೆ ಹಾಲಿವುಡ್‌ನಲ್ಲಿ ಟಾಕಿ ಸಿನಿಮಾಗಳು ಬಹಳಾ ಸದ್ದು ಮಾಡುತ್ತಿದ್ದವು. ಸಿನಿಮಾಗಳು ದೊಡ್ಡ ಮಟ್ಟಿನ ಜನರನ್ನು ಸೆಳೆಯುತ್ತಿದ್ದ ಕಾಲ. ಆಗ ಬ್ರಿಟಿಷ್ ಸಿನಿಮಾ ನಿರ್ದೇಶಕನೋರ್ವ ಮೈಸೂರಿಗೆ ಬಂದಿದ್ದ ಆತನ ಹೆಸರು ರಾಬರ್ಟ್ ಫ್ಲಾಟರಿ.

    ಆನೆಯ ಲಾಯದಲ್ಲಿ ಸಿಕ್ಕ ಸಿನಿಮಾ ನಾಯಕ!

    ಆನೆಯ ಲಾಯದಲ್ಲಿ ಸಿಕ್ಕ ಸಿನಿಮಾ ನಾಯಕ!

    ಕತೆಗಾರ ರುದ್ಯಾರ್ಡ್ ಕಿಪ್ಲಿಂಗ್‌ ನ ಸಣ್ಣ ಕತೆಯನ್ನು ಸಿನಿಮಾ ಮಾಡುವ ಯೋಚನೆಯಲ್ಲಿದ್ದ ರಾಬರ್ಟ್ ಫ್ಲಾಟರಿ. ಆತ ಆಯ್ದುಕೊಂಡಿದ್ದ ಸಿನಿಮಾ ಆನೆಗಳ ಕುರಿತಾದದ್ದು, ಹೆಸರು, 'ದಿ ಎಲಿಫೆಂಟ್ ಬಾಯ್'. ರಾಬರ್ಟ್ ಫ್ಲಾಟರಿ ಮೈಸೂರಿಗೆ ಬಂದಾಗ ಆತನ ಕಣ್ಣು ಆನೆ ಲಾಯದಲ್ಲಿ ಆನೆಗಳೊಂದಿಗೆ ಆಡುತ್ತಿದ್ದ ಸಾಬು ದಸ್ತಗಿರ್ ಮೇಲೆ ಬಿತ್ತು. ಬ್ರಿಟೀಷ್‌ ವ್ಯಕ್ತಿ ತನ್ನನ್ನು ಗಮನಿಸುತ್ತಿದ್ದಾನೆಂದು ಸಾಬು, ಆನೆಗಳೊಂದಿಗೆ ಆಟವಾಡಿದ, ಆನೆಗಳ ಕೈಲಿ ಕಸರತ್ತು ಮಾಡಿ ಫ್ಲಾಟರಿಗೆ ತೋರಿಸಿದ.

    1937 ರಲ್ಲಿ ಬಿಡುಗಡೆಯಾದ 'ದಿ ಎಲಿಫೆಂಟ್ ಬಾಯ್'

    1937 ರಲ್ಲಿ ಬಿಡುಗಡೆಯಾದ 'ದಿ ಎಲಿಫೆಂಟ್ ಬಾಯ್'

    ಆನೆಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಸಾಬುವನ್ನು ತನ್ನ ಸಿನಿಮಾದ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡ ರಾಬರ್ಟ್ ಫ್ಲಾಟರಿ, ಆತನನ್ನು ಲಂಡನ್‌ಗೆ ಕರೆದುಕೊಂಡು ಹೋದ, ಅಲ್ಲಿ ಇಂಗ್ಲಿಷ್ ಕಲಿಸಿದ, ನಟನೆ ಹೇಳಿಕೊಟ್ಟ. 1937 ರ ವೇಳೆಗೆ ಸಾಬು ನ ಮೊದಲ ಸಿನಿಮಾ 'ದಿ ಎಲಿಫೆಂಟ್ ಬಾಯ್' ಬಿಡುಗಡೆ ಆಯಿತು. ಸಿನಿಮಾ ಸೂಪರ್ ಡೂಪರ್ ಹಿಟ್.

    ಮೊದಲ ಮೋಗ್ಲಿ ಸಾಬು ದಸ್ತಗಿರ್

    ಮೊದಲ ಮೋಗ್ಲಿ ಸಾಬು ದಸ್ತಗಿರ್

    ಸಾಬು ಸಿನಿ ಪಯಣ ಆಗಷ್ಟೆ ಆರಂಭವಾಗಿತ್ತು, ಎಲಿಫೆಂಟ್ ಬಾಯ್ ಹಿಟ್ ಆದ ನಂತರ, 'ದಿ ಥೀಫ್ ಆಫ್ ಬಾಗ್ದಾದ್', 'ಅರೇಬಿಯನ್ ನೈಟ್ಸ್', 'ದಿ ಡ್ರಮ್' ಹೀಗೆ ಸಿನಿಮಾಗಳ ಮೇಲೆ ಸಿನಿಮಾಗಳನ್ನು ಮಾಡಿದರು. ಜಗತ್‌ ಪ್ರಸಿದ್ಧ 'ದಿ ಜಂಗಲ್ ಬುಕ್' ಮೊದಲ ಸಿನಿಮಾದಲ್ಲಿ ಮೋಗ್ಲಿ ಪಾತ್ರ ಮಾಡಿದವರು ಇದೇ ಸಾಬು ದಸ್ತಗಿರ್.

    1940 ರ ಸಮಯದಲ್ಲಿ ಹಾಲಿವುಡ್ ಪ್ರವೇಶ

    1940 ರ ಸಮಯದಲ್ಲಿ ಹಾಲಿವುಡ್ ಪ್ರವೇಶ

    1940 ರ ವೇಳೆಗೆ ಎರಡನೇ ಮಹಾಯುದ್ಧದ ಬಳಿಕ ಸಾಬು ಹಾಗೂ ಇನ್ನೂ ಹಲವಾರು ಲಂಡನ್‌ನ ಚಿತ್ರಕರ್ಮಿಗಳು ಇಂಗ್ಲೆಂಡ್ ತೊರೆದು ಹಾಲಿವುಡ್‌ಗೆ ಸ್ಥಳಾಂತರಗೊಂಡರು. ಅಲ್ಲಿಯೂ ಬೇಡಿಕೆ ಕಳೆದುಕೊಳ್ಳಲಿಲ್ಲ ಸಾಬು, ಹಾಲಿವುಡ್‌ನಲ್ಲಿ ಅವಕಾಶಗಳ ಸುರಿಮಳೆಯೇ ಸಾಬು ಮೇಲಾಯಿತು. ಸಾಬು ಆ ಕಾಲದ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿಬಿಟ್ಟರು.

    ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಜೊತೆ ಸ್ನೇಹ

    ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಜೊತೆ ಸ್ನೇಹ

    ಅತ್ಯಂತ ಕಡಿಮೆ ಅವಧಿಯಲ್ಲಿ 23 ಸಿನಿಮಾಗಳಲ್ಲಿ ನಟಿಸಿದ ಸಾಬು, ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿದ್ದರು. ಆಗ ನಟರಾಗಿದ್ದ, ನಂತರ ಅಮೆರಿಕದ ಅಧ್ಯಕ್ಷರೂ ಆದ ರೊನಾಲ್ಡ್ ರೇಗನ್ ಜೊತೆಗೆ ಆತ್ಮೀಯ ಗೆಳೆತನ ಹೊಂದಿದ್ದರು ಸಾಬು. ಅದೇ ಸಮಯದಲ್ಲಿ ನಟಿ ಮಾರ್ಲಿನ್ ಕೂಪರ್ ಜೊತೆಗೆ ವಿವಾಹವೂ ಆದ ಸಾಬು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

    ಸಾಬು ಮಗ ಪಾಲ್ ಖ್ಯಾತ ಸಂಗೀತಗಾರ

    ಸಾಬು ಮಗ ಪಾಲ್ ಖ್ಯಾತ ಸಂಗೀತಗಾರ

    ಸಾಬುನ ಮಗ ಪಾಲ್ ಸಾಬು ವಿಖ್ಯಾತ ಸಂಗೀತಗಾರ, ಮಡೊನಾ ಜೊತೆಗೆ ಸಂಗೀತದ ಆಲ್ಬಮ್ ಮಾಡಿರುವ ಪಾಲ್ ಸಾಬು, ಖ್ಯಾತ ಟಿವಿ ಶೋ ಸೆಕ್‌ ಆಂಡ್ ಸಿಟಿಗೂ ಸಂಗೀತ ನೀಡಿದ್ದರು. ಸಾಬುನ ಮಗಳು ಮೋಷನ್ ಪಿಕ್ಚರ್ಸ್‌ಗಾಗಿ ಪ್ರಾಣಿ ತರಬೇತದಾರಳಾಗಿ ಕೆಲಸ ನಿರ್ವಹಿಸಿದ್ದರು.

    ಲಂಡನ್‌ ಮೃಗಾಲಯದಲ್ಲಿ ಕಾಲ ಕಳೆಯುತ್ತಿದ್ದ ಸಾಬು

    ಲಂಡನ್‌ ಮೃಗಾಲಯದಲ್ಲಿ ಕಾಲ ಕಳೆಯುತ್ತಿದ್ದ ಸಾಬು

    ಹಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ಆಗಿ ಮೆರೆದರೂ ಸಾಬು ಮೈಸೂರನ್ನು ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದರಂತೆ. ಆಗೆಲ್ಲಾ ಅವರು, ಲಂಡನ್‌ನ ಪ್ರಖ್ಯಾತ ಜೂ ಗೆ ಹೋಗಿ ಪ್ರಾಣಿಗಳೊಂದಿಗೆ ವಿಶೇಷವಾಗಿ ಆನೆಗಳೊಂದಿಗೆ ಕಾಲ ಕಳೆಯುತ್ತಿದ್ದರಂತೆ. ಲಂಡನ್‌ ಜೂ ನಲ್ಲಿ ಈಗಲೂ ಸಾಬು ಅವರ ಚಿತ್ರಗಳಿವೆ.

    Recommended Video

    ಲವ್ ಇಲ್ಲ ಅಂದ್ರೆ ನಮ್ ಹುಡುಗ್ರು ಬಿಡಬೇಕಲ್ಲ ಅಂದ್ರು ಧನ್ವೀರ್ | Filmibeat Kannada
    ಹಾಲ್‌ ಆಫ್‌ ಫೇಮ್‌ ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ

    ಹಾಲ್‌ ಆಫ್‌ ಫೇಮ್‌ ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ

    ಸಾಬು ಕೇವಲ 39 ವರ್ಷದವರಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಅವರನ್ನು ಕ್ಯಾಲಿಫೋರ್ನಿಯಾದ ಖ್ಯಾತ ಫಾರೆಸ್ಟ್ ಲಾನ್ ಮೆಮೋರಿಯಲ್ ಪಾರ್ಕ್‌ನಲ್ಲಿ ಸಕಲ ಗೌರವಗಳೊಂದಿಗೆ, ಹಾಲಿವುಡ್‌ನ ದಂತಕತೆಗಳಾದ ವಾಲ್ಟ್ ಡಿಸ್ನಿ, ಎಲಿಜಬೆತ್ ಟೈಲರ್ ಅವರುಗಳ ಸಮಾಧಿ ಪಕ್ಕದಲ್ಲಿಯೇ ಮಣ್ಣು ಮಾಡಲಾಯಿತು. ಇಷ್ಟೇ ಅಲ್ಲ, ಹಾಲಿವುಡ್‌ನ ಪ್ರತಿಷ್ಠಿತ 'ವಾಕ್ ಆಫ್ ಫೇಮ್‌' ನಲ್ಲಿ ಸಾಬುಗೆ ಸ್ಥಾನ ನೀಡಲಾಗಿದೆ. ವಾಕ್‌ ಆಫ್ ಫೇಮ್‌ನಲ್ಲಿರುವ ಏಕೈಕ ಭಾರತೀಯ ನಟ ಸಾಬು ದಸ್ತಗಿರ್.

    English summary
    Mysuru born Sabu Dastagir become star actor in Hollywood. He worked in 23 movies, his name in Hollywood walk of fame.
    Thursday, September 10, 2020, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X