Naatu Naatu wins Oscars : ಇತಿಹಾಸ ಸೃಷ್ಟಿಸಿದ 'ನಾಟು ನಾಟು': ತೆಲುಗು ಗೀತೆಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ
ಭಾರತೀಯ ಸಿನಿರಸಿಕರ ಪ್ರಾರ್ಥನೆ ಫಲಿಸಿದೆ. 'ನಾಟು ನಾಟು' ಸಾಂಗ್‌ಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಒಲಿದಿದೆ. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಡು ಗೀತ ಸಾಹಿತಿ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿದ್ದಾರೆ. RRR ಚಿತ್ರದ 'ನಾಟು ನಾಟು' ಸಾಂಗ್ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಹಾಲಿವುಡ್ ಹಿಟ್ ಸಾಂಗ್‌ಗಳನ್ನು ಹಿಂದಿಕ್ಕಿ ಇತಿಹಾಸ ನಿರ್ಮಿಸಿದೆ.
ಭಾರತದಿಂದ 'ನಾಟು ನಾಟು' ಸಾಂಗ್ ಕೊನೆ ಹಂತಕ್ಕೆ ತಲುಪಿತ್ತು. ಅಮೇರಿಕಾದ 'ಟೆಲ್ ಇಟ್ ಲೈಕ್ ಎ ವುಮೆನ್' ಚಿತ್ರದ 'ಅಪ್ಲಾಜ್' ಸಾಂಗ್ ಕೂಡ ರೇಸ್‌ನಲ್ಲಿತ್ತು. 'ಟಾಪ್‌ಗನ್: ಮ್ಯಾವರಿಕ್' ಚಿತ್ರದಿಂದ 'ಹೋಲ್ಡ್ ಮೈ ಹ್ಯಾಂಡ್' ಸಾಂಗ್ ಕೂಡ ನಾಮಿನೇಟ್ ಆಗಿತ್ತು. ಇದನ್ನು ಲೇಡಿ ಗಾಗಾ ಹಾಡಿದ್ದಾರೆ. ಇನ್ನು 'ಬ್ಲಾಕ್‌ಫ್ಯಾಂಥರ್: ವಕಾಂಡ ಫರೆವರ್' ಚಿತ್ರದ 'ಲಿಫ್ಟ್ ಮಿ ಅಪ್' ಹಾಗೂ 'ಎವ್ರೀಥಿಂಗ್ ಎವ್ರೀ ವೇರ್ ಆಲ್ ಎಟ್ ವನ್ಸ್' ಸಿನಿಮಾದ 'ದಿಸ್ ಈಸ್ ಎ ಲೈಫ್' ಸಾಂಗ್ಸ್ ಅಂತಿಮ ಸುತ್ತಿನಲ್ಲಿತ್ತು. ಈ ಸಾಂಗ್‌ಗಳನ್ನು ಮೀರಿ 'ನಾಟು ನಾಟು' ಗೆದ್ದಿದೆ.

ಕಳೆ ವರ್ಷ ಬಿಡುಗಡೆಯಾಗಿದ್ದ RRR ಸಿನಿಮಾ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆಸ್ಕರ್ ವೇದಿಕೆಯಲ್ಲಿ 'ನಾಟು ನಾಟು' ಸಾಂಗ್ ಲೈವ್ ಪರ್ಫಾರ್ಮೆನ್ಸ್ ಕೂಡ ಇತ್ತು. ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವ ಸಾಂಗ್ ಕೇಳಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇನ್ನು ಈ ಅಪರೂಪದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಸಿನಿರಸಿಕರು, ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ರಾಜಮೌಳಿ ಮತ್ತವರ ತಂಡವನ್ನು ಅಭಿನಂದಿಸುತ್ತಿದ್ದಾರೆ.
'ಬ್ಲಾಕ್‌ಫ್ಯಾಂಥರ್: ವಕಾಂಡ ಫರೆವರ್' ಚಿತ್ರದ 'ಲಿಫ್ಟ್ ಮಿ ಅಪ್' ಹಾಡು 'ನಾಟು ನಾಟು' ಗೀತೆಗೆ ಆಸ್ಕರ್‌ನಲ್ಲಿ ಪ್ರಬಲ ಪೈಪೋಟಿ ನೀಡಿತ್ತು. ಹಾಲಿವುಡ್ ಮಂದಿ ಕೂಡ ಈ ಹಾಡಿಗೆ ಬೆಂಬಲ ಸೂಚಿಸಿದ್ದರು. ಹಾಲಿವುಡ್ ಪಾಪ್ ಗಾಯಕಿ ರಿಹಾನ್ನಾ ಈ ಹಾಡು ಹಾಡಿದ್ದಾರೆ. ಹಾಲಿವುಡ್ ಮಾಧ್ಯಮಗಳು ಕೂಡ ಈ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಸಿಗುತ್ತದೆ ಎಂದು ಹೇಳಿದ್ದವು. ಆದರೆ ಅವರೆಲ್ಲರ ಲೆಕ್ಕಾಚಾರ ತಲೆ ಕೆಳಗೆ ಮಾಡಿ 'ನಾಟು ನಾಟು' ಅದ್ಭುತ ಸಾಧನೆ ಮಾಡಿದೆ. ಇನ್ನು ಆಸ್ಕರ್‌ಗೂ ಮುನ್ನ ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ಸ್ ಅವಾರ್ಡ್ ಪಡೆದುಕೊಂಡಿತ್ತು. ಹಾಗಾಗಿ ಈ ಬಾರಿ ತೆಲುಗು ಸಿನಿಮಾ ಇತಿಹಾಸ ನಿರ್ಮಿಸುವ ಸುಳಿವು ಸಿಕ್ಕಿತ್ತು.

ಎಂ. ಎಂ ಕೀರವಾಣಿ ಸಂಗೀತದ ಹಾಡಿಗೆ ಪ್ರೇಮ್ ರಕ್ಷಿತ್ ಕೊರಿಯೋಗ್ರಫಿ ಇದೆ. ಸೀತಾರಾಮರಾಜು ಆಗಿ ರಾಮ್‌ಚರಣ್ ಹಾಗೂ ಕೋಮುರಂ ಭೀಮ್ ಮಾಡಿ ತಾರಕ್ ಜಬರ್ದಸ್ತ್ ಡ್ಯಾನ್ಸ್ ಮತ್ತೊಂದು ಹೈಲೆಟ್. ಇನ್ನು ಹಾಡಿನ ಹುಕ್ ಸ್ಟೆಪ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಹೊರ ದೇಶಗಳಲ್ಲಿ ಪ್ರೇಕ್ಷಕರು ಸ್ಕ್ರೀನ್ ಮುಂದೆ ಹೋಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದರು. RRR ಕ್ರೇಜ್ ಹೇಗಿದೆ ಅಂದರೆ ಕಳೆದ ವಾರ ಅಮೆರಿಕಾದಲ್ಲಿ ಸಿನಿಮಾ ಮತ್ತೆ ರಿಲೀಸ್ ಆಗಿದೆ. ಪ್ರೇಕ್ಷಕರು ಕ್ಯೂನಿಂತು ಸಿನಿಮಾ ನೋಡಿದ್ದಾರೆ.


Click it and Unblock the Notifications











