ನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಹಾಲಿವುಡ್ ಖ್ಯಾತ ನಟಿ ನಯಾ ರಿವೇರಾ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ 6 ದಿನಗಳ ಹಿಂದೆ 4 ವರ್ಷದ ಪುತ್ರ ಜೋಸಿ ಜೊತೆ ಬೋಟ್ ನಲ್ಲಿ ತೆರಳಿದ್ದ ನಟಿ ನಯಾ ಕಣ್ಮರೆಯಾಗಿದ್ದರು. ನಯಾ ತೆರಳಿದ್ದ ಬೋಟ್ ಮತ್ತು ಪುತ್ರ ಪತ್ತೆಯಾಗಿದ್ರು, ಆದರೆ ನಯಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಸಲಾಗಿತ್ತು.

ಕ್ಯಾಲಿಫೋರ್ನಿಯಾದ ಪಿರು ಸರೋವರದಲ್ಲಿ ನಯಾ ನಾಪತ್ತೆಯಾಗಿದ್ದದ್ರು. ನಯಾಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು, ಆದರೂ ನಯಾ ಪತ್ತೆಯಾಗಿರಲಿಲ್ಲ. 6 ದಿನಗಳ ಬಳಿಕ ರಿಯಾ ಮೃತ ದೇಹ ಪತ್ತೆಯಾಗಿದೆ. ನಯಾ ತನ್ನ ಮಗನನ್ನು ಉಳಿಸಲು ಪ್ರಾಣ ತ್ಯಾಗಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಪುತ್ರ ಜೋಸಿ ಪತ್ತೆಯಾದಾಗ ಲೈಫ್ ಜಾಕೆಟ್ ಇತ್ತು. ಆದರೆ ನಯಾ ದೇಹದಲ್ಲಿ ಲೈಫ್ ಜಾಕೆಟ್ ಇರಲಿಲ್ಲ ಎಂದು ಹೇಳಲಾಗುತ್ತಿದೆ. ನಯಾ ಪುತ್ರನ ಜೊತೆ ಈಜಲು ತೆರಳಿದ್ದರಂತೆ. ನಯಾ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ.

Naya Rivera Body Found Six Days After Disappearance

ನಯಾ ನಿಧನಕ್ಕೆ ಹಾಲಿವುಡ್ ಸೆಲೆಬ್ರಿಟಿಗಳು ಕಂಬನಿ ಮಿಡಿಸಿದ್ದಾರೆ. ನಟಿ ನಯಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಜೊತೆಗೆ ಗ್ಲೀ ಎನ್ನುವ ಸಂಗೀತ ಸರಣಿ ಮೂಲಕ ಪ್ರಖ್ಯಾತಿಗಳಿಸಿದ್ದರು. ನಯಾ ಕೊನೆಯದಾಗಿ ಜುಲೈ 7 ರಂದು ಪುತ್ರನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ "ನಾವಿಬ್ಬರು" ಎನ್ನುವ ಕ್ಯಾಪ್ಷನ್ ನೀಡಿದ್ದಾರೆ.

More from Filmibeat

English summary
Hollywood Actress Naya Rivera body found six days after Disappearance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X