ಹಿಂದೂ ಧರ್ಮಕ್ಕೆ ಅಪಮಾನ: ಹಾಲಿವುಡ್ ನಟಿಯ ಮೇಲೆ ನೆಟ್ಟಿಗರ ಕಿಡಿ
ವಿಶ್ವದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಕಿಮ್ ಕರ್ದಾಶಿಯನ್ ವಿರುದ್ಧ ಭಾರತದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಾಗ್ಗೆ ವಿವಾದಗಳಿಂದಲೇ ಸುದ್ದಿಗೆ ಬರುವ ನಟಿ, ಮಾಡೆಲ್ ಕಿಮ್ ಕರ್ದಾಶಿಯನ್‌ರ ಇತ್ತೀಚಿನ ಕೆಲವು ಚಿತ್ರಗಳು ಭಾರತೀಯ ನೆಟ್ಟಿಗರಿಗೆ ಹಿಡಿಸಿಲ್ಲ. 'ಹಿಂದು ಧರ್ಮಕ್ಕೆ ಅಪಮಾನ ಎಸಗಿದ್ದೀರಿ' ಎಂದು ಹಲವರು ಕಿಮ್ ಕರ್ದಾಶಿಯನ್ ಹಂಚಿಕೊಂಡಿರುವ ಚಿತ್ರಗಳಿಗೆ ಕಮೆಂಟ್ ಮಾಡಿದ್ದಾರೆ.
ಕಿಮ್ ಕರ್ದಾಶಿಯನ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಿವಿಗೆ ಹಾಕಿಕೊಂಡಿರುವ ವಜ್ರದ ಓಲೆಗಳು ಈಗ ವಿವಾದದ ಕೇಂದ್ರ ಬಿಂದು. ಕಿಮ್ ಧರಿಸಿರುವ ಓಲೆಗಳು ಹಿಂದು ಧಾರ್ಮಿಕ ಚಿಹ್ನೆ 'ಓಂ' ಆಕಾರದಲ್ಲಿವೆ.
ಕಿಮ್, 'ಓಂ' ಆಕಾರದ ಓಲೆ ಧರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ನೆಟ್ಟಿಗರು, 'ನೀವು ಹಿಂದು ಧರ್ಮಕ್ಕೆ ಅಪಮಾನ ಎಸಗಿದ್ದೀರಿ. ನಮ್ಮ ಧರ್ಮವನ್ನು ಲಘುವಾಗಿ ಪ್ರೆಸೆಂಟ್ ಮಾಡುತ್ತಿದ್ದೀರಿ. ನಮ್ಮ ಧರ್ಮವನ್ನು ಅದರ ಪಾಡಿಗೆ ಬಿಟ್ಟುಬಿಡಿ' ಎಂದಿದ್ದಾರೆ.

ನಿಮ್ಮ ಚಿತ್ರಗಳನ್ನು ತೆಗೆಯಿರಿ: ರಾಜನ್
ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಸಂಘಟನೆಯ ಮುಖಂಡ ರಾಜನ್ ಜೆದ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, 'ಓಂ' ಸಂಜ್ಞೆಯು ಹಿಂದು ಧರ್ಮದ ಪವಿತ್ರ ಸಂಕೇತ. ಇದನ್ನು ಫ್ಯಾಷನ್ ಉದ್ಧೇಶಕ್ಕೆ ಬಳಸಿರುವುದು ತಪ್ಪು. ಈ ಕೂಡಲೇ ನೀವು ಅಪ್‌ಲೋಡ್ ಮಾಡಿರುವ ಮೂರು ಚಿತ್ರಗಳನ್ನು ತೆಗೆಯಿರಿ' ಎಂದಿದ್ದಾರೆ ರಾಜನ್.

'ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ಕೊಡುತ್ತಾರೆ ಹಿಂದುಗಳು'
'ಇತರರಿಗಿಂತಲೂ ಹಿಂದುಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ಕೊಡುತ್ತಾರೆ. ಆದರೆ ಅವರ ಪವಿತ್ರವಾದ ಧಾರ್ಮಿಕ ನಂಬಿಕೆಯನ್ನು ಅಪಮಾನಗೊಳಿಸುವ ಕ್ಷುಲ್ಲಕ ಯತ್ನಗಳನ್ನು ಅವರನ್ನು ಘಾಸಿಗೀಡು ಮಾಡುತ್ತದೆ. ಎಂದಿದ್ದಾರೆ ರಾಜನ್ ಜೆದ್.

ಕಾರ್ಡಿ ಬಿ, ರಿಹಾನಾರಿಂದಲೂ ಧರ್ಮಕ್ಕೆ ಅಪಮಾನ
ಈ ಹಿಂದೆ ನಟಿ ಕಾರ್ಡಿ ಬಿ ಮ್ಯಾಗಜೀನ್ ಒಂದಕ್ಕೆ ದುರ್ಗಾ ಮಾತೆಯಂತೆ ಫೋಸ್ ನೀಡಿ ವಿವಾದ ಹುಟ್ಟುಹಾಕಿದ್ದರು. ಆ ನಂತರ ನಟಿ ರಿಹಾನಾ ತಮ್ಮ ಬೆತ್ತಲೆ ದೇಹದ ಮೇಲೆ ಗಣೇಶನ ಡಾಲರ್ ಅನ್ನು ಧರಿಸಿದ್ದನ್ನು ಸಹ ನೆಟ್ಟಿಗರು ಖಂಡಿಸಿದ್ದರು. ಈಗ ಕಿಮ್ ಅದೇ ಕಾರ್ಯ ಪುನರಾವರ್ತಿಸಿದ್ದಾರೆ.
Recommended Video

ಕಿಮ್ ಕರ್ದಾಶಿಯನ್ ಯಾರು?
'ಸೆಕ್ಸ್ ಟೇಪ್' ಹೆಸರಿನ ನೀಲಿ ಚಿತ್ರದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಬಂದ ಕಿಮ್ ಕರ್ದಾಶಿಯನ್, 'ಕೀಪಿಂಗ್ ಅಪ್ ವಿತ್ ಕರ್ದಾಶಿಯನ್ಸ್' ಹೆಸರಿನ ರಿಯಾಲಿಟಿ ಶೋ ಮೂಲಕ ಭಾರಿ ಯಶಸ್ಸು ಗಳಿಸಿದರು. ನಟಿಯಾಗಿ, ನಿರ್ಮಾಪಕಿಯಾಗಿ, ನಿರೂಪಕಿಯಾಗಿ ಸಾಕಷ್ಟು ಖ್ಯಾತಿ ಮತ್ತು ಹಣ ಗಳಿಸಿರುವ ಕಿಮ್‌ರ ಒಟ್ಟು ಆಸ್ತಿ ಮೌಲ್ಯ 7000 ಕೋಟಿಗೂ ಹೆಚ್ಚು.


Click it and Unblock the Notifications











