Just In
Don't Miss!
- Sports
ಕೊನೆಯಲ್ಲಿ ಗೌರವದೊಂದಿಗೆ ನಿರ್ಗಮಿಸಿದ ಒಡಿಶಾ
- Automobiles
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Lifestyle
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಣೇಶ ಪೆಂಡೆಂಟ್ ಧರಿಸಿ ಟಾಪ್ ಲೆಸ್ ಆದ ರಿಹಾನ್ನಾ ವಿರುದ್ಧ ನೆಟ್ಟಿಗರ ಆಕ್ರೋಶ
ಖ್ಯಾತ ಪಾಪ್ ಗಾಯಕಿ ಮತ್ತು ನಟಿ ರಿಹಾನ್ನಾ ಇತ್ತೀಚಿಗೆ ಭಾರತ ರೈತರ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ರಿಹನ್ನಾ 'ನಾವೇಕೆ ಈ ಬಗ್ಗೆ ಮಾತನಾಡುತ್ತಿಲ್ಲ...' ಎಂದು ಒಂದೇ ಒಂದು ವಾಕ್ಯ ಟ್ವೀಟ್ ಮಾಡುವ ಮೂಲಕ ರೈತ ಹೋರಾಟದ ದಿಕ್ಕನ್ನೇ ಬದಲಾಯಿಸಿದ್ದರು.
ರಿಹನ್ನಾ ಟ್ವೀಟ್ ಮಾಡುತ್ತಿದ್ದಂತೆ ರೈತ ಹೋರಾಟ ಜಾಗತಿಕ ಮಟ್ಟದ ಗಮನ ಸೆಳೆಯಿತು. ರಿಹನ್ನಾ ಪ್ರಕ್ರಿಯೆ ನೀಡಿದ ಬೆನ್ನಲ್ಲೇ ಅನೇಕ ಜಾಗತಿಕ ಗಣ್ಯರು ರೈತ ಹೋರಾಟಕ್ಕೆ ಬೆಂಬಲ ನೀಡಿದ್ದರು. ರಿಹಾನ್ನಾ ಟ್ಟೀಟ್ ಭಾರತೀಯರನ್ನು ಕೆರಳಿಸಿತ್ತು. ಬಾಲಿವುಡ್ ಕಲಾವಿದರು ನಮ್ಮ ದೇಶದ ವಿಚಾರಕ್ಕೆ ಬರಬೇಡಿ ಎನ್ನುವ ಸಂದೇಶ ನೀಡುವ ಟ್ವೀಟ್ ಮಾಡಿ ರಿಹಾನ್ನಾಗಿ ತಿರುಗೇಟು ನೀಡಿದ್ದರು. ಇದೀಗ ರಿಹನ್ನಾ ಮತ್ತೆ ಸುದ್ದಿಯಲ್ಲಿದ್ದಾರೆ. ಹಿಂದೂ ಪವಿತ್ರ ದೇವರು ಗಣೇಶನನ್ನು ಧರಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದೆ ಓದಿ
'ರಿಹಾನ್ನ ಪರಿಣಾಮ', ಅಖಾಡಕ್ಕಿಳಿದ ಬಾಲಿವುಡ್ ಸೆಲೆಬ್ರಿಟಿಗಳು: ಡ್ಯಾಮೇಜ್ ಕಂಟ್ರೋಲ್?

ಅರೆ ಬೆತ್ತಲಾಗಿ ಗಣೇಶ ಪೆಂಡೆಂಟ್ ಧರಿಸಿದ ರಿಹನ್ನಾ
ಪಾಪ್ ಗಾಯಕಿ ರಿಹನ್ನಾ ಟಾಪ್ ಲೆಸ್ ಆಗಿ, ಗಣೇಶ ಪೆಂಡೆಂಟ್ ಇರುವ ಉದ್ದವಾದ ಸರ ಧರಿಸಿರುವ ಫೋಟೋ ಭಾರತೀಯ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ರಿಹನ್ನಾ ಪೋಸ್ಟ್ ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೆಟ್ಟಿಗರ ಆಕ್ರೋಶ
ಗಣೇಶ ಫೋಟೋ ಹಾಕಿ ಪೋಸ್ ನೀಡಿರುವ ರಿಹಾನ್ನಾಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. 'ಹಿಂದೂ ಧರ್ಮವನ್ನು ನಿಮ್ಮ ಸೌಂದರ್ಯಕ್ಕೆ ಬಳಸುವುದನ್ನು ನಿಲ್ಲಿಸಿ. ಇದು ನಿಜಕ್ಕೂ ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ' ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಸೌಂದರ್ಯಕ್ಕೆ ನಮ್ಮ ಸಂಸ್ಕೃತಿ-ಧರ್ಮ ಬಳಸಬೇಡಿ ಎಂದ ನೆಟ್ಟಿಗರು
'ಪ್ರತಿವರ್ಷ ಗಣೇಶ ಚತುರ್ಥಿ ಆಚರಣೆ ಮಾಡುವ ಮಿಲಿಯನ್ ಗಟ್ಟಲೆ ಜನರಿಗೆ ಪವಿತ್ರ ಭಾವನೆ ಇದೆ. ನೀವು ಅವರ ಭಾವನೆಗೆ ದಕ್ಕೆ ತರುತ್ತಿದ್ದೀರಿ' ಎಂದು ಮತ್ತೊಬ್ಬ ನೆಟ್ಟಿಗ ಕಾಮಂಟ್ ಮಾಡಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಸೌಂದರ್ಯಕ್ಕಾಗಿ ಬಳಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಹೇಳುತ್ತಿದ್ದಾರೆ.
ಗಾಯಕಿ ನೊಂದ ರೈತರ ಪರ ಒಂದು ಸಾಲು ಬರೆದ ಕೂಡಲೇ ದೇಶದ ಸಾರ್ವಭೌಮತ್ವ ನೆನಪಾಯಿತಾ? ಕವಿರಾಜ್ ಪ್ರಶ್ನೆ

ಉಳ ಉಡುಪಿನ ಬ್ರಾಂಡ್ ಗೆ ರಿಹನ್ನಾ ಪೋಸ್
ಅಷ್ಟಕ್ಕೂ ರಿಹಾನ್ನಾ ಹೀಗೆ ಟಾಪ್ ಲೆಸ್ ಆಗಿ ಪೋಸ್ ನೀಡಿರುವುದು ಉಳ ಉಡುಪಿನ ಬ್ರಾಂಡ್ ಪ್ರಮೋಷನ್ ಗಾಗಿ. ಹಾಟ್ ಫೋಟೋ ಶೇರ್ ಮಾಡಿ, 'ಇವತ್ತು ನನಗೋಸ್ಕರ ಯಾವುದೇ ಒಳ ಉಡುಪು ಧರಿಸಬೇಡ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಅರೆಬೆತ್ತಲಾಗಿ ಕ್ಯಾಮರಾಗೆ ಪೋಸ್ ನೀಡಿರುವ ರಿಹಾನ್ನಾ ಮೈ ಮೇಲೆ ಗಣೇಶ ಇರುವುದು ಭಾರತೀಯ ಹಿಂದೂಗಳನ್ನು ಕೆರಳಿಸಿದೆ.