For Quick Alerts
  ALLOW NOTIFICATIONS  
  For Daily Alerts

  ಪುಸ್ತಕದ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ನಟಿಗೆ ನೆಟ್ಟಿಗರ ತರಾಟೆ

  |

  ಅಮೇರಿಕದ ಖ್ಯಾತ ಗಾಯಕಿ ಮತ್ತು ನಟಿ ಸೆಲೆನಾ ಗೋಮ್ಸ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ಸೆಲೆನಾ ಮಾಡಿಸಿರುವ ಫೋಟೋಶೂಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಟಿ ಸೆಲೆನಾ ಇತ್ತೀಚಿಗೆ ಶೂ ಬ್ರ್ಯಾಂಡ್ ಒಂದರ ಜಾಹಿರಾತಿಗೆ ಫೋಟೋಶೂಟ್ ಮಾಡಿಸಿದ್ದಾರೆ.

  ಈ ಫೋಟೋಶೂಟ್ ನಲ್ಲಿ ನಟಿ ಸೆಲೆನಾ ಪುಸ್ತಕದ ಭಂಡಾರದ ಮೇಲೆ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ನಟಿಯ ಈ ಪೋಸ್ ಗೆ ವಿರೋಧ ವ್ಯಕ್ತವಾಗುತ್ತಿದೆ. ಭಾರತ ಪುಸ್ತಕವನ್ನು ಸರಸ್ವತಿ ಎಂದು ಪೂಜಿಸುತ್ತೆ. ಜ್ಞಾನಭಂಡಾರವನ್ನು ಆರಾಧಿಸುತ್ತೆ. ಪುಸ್ತಕದ ಮೇಲೆ ನಿಲ್ಲುವುದು ಭಾರತೀಯರಿಗೆ ಪಾಪದ ಕೆಲಸ. ಆದರೆ ಭಾರತೀಯರಲ್ಲದವರಿಗೆ ಇದರಲ್ಲಿ ಯಾವುದೆ ತಪ್ಪು ಕಾಣುತ್ತಿಲ್ಲ.

  ಇವರೇ ನೋಡಿ ಭಾರತ ಮೂಲದ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಭಾವಿ ಪತಿ.!ಇವರೇ ನೋಡಿ ಭಾರತ ಮೂಲದ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಭಾವಿ ಪತಿ.!

  ಭಾರತೀಯರಿಗೆ ಇದು ತಪ್ಪಾಗಿ ಕಾಣುತ್ತಿದೆ. ಹಾಗಾಗಿ ನೆಟ್ಟಿಗರು ಇದನ್ನು ವಿರೋಧಿಸುತ್ತಿದ್ದಾರೆ. ನಟಿಯ ವಿರುದ್ದ ತರಹೇವಾರಿ ಕಮೆಂಟ್ ಗಳು ಹರಿದು ಬರುತ್ತಿವೆ. ಸರಸ್ವತಿ ಮೇಲೆ ನಿಂತಿದ್ದಾಳೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

  ಇತ್ತೀಚಿಗೆ ಅಮೆರಿಕದ ಸಂಗೀತ ಅವಾರ್ಡ್ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಿರುವಾಗ ತಲೆ ತಿರುಗಿ ಬಿದ್ದು ಸುದ್ದಿಯಾಗಿದ್ದರು. ಅಲ್ಲದೆ ಇತ್ತೀಚಿಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಹಾಗಾಗಿ ಸೆಲೆನಾ ಕೆಲವು ಸಮಯ ರೆಸ್ಟ್ ನಲ್ಲಿ ಇದ್ದರು. ಆದರೀಗ ಮತ್ತೆ ಸಂಗೀತ ಕ್ಷೇತ್ರಕ್ಕೆ ಮರಳಿದ್ದಾರೆ.

  English summary
  Netizens outraged against Selena Gomez for Photoshoot standing on book.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X