For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಗಂಭೀರ ಗಾಯ: ಪ್ರಿಯಾಂಕಾ ಪತಿ ಆಸ್ಪತ್ರೆಗೆ ದಾಖಲು

  |

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಶೂಟಿಂಗ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

  ಮೇ 15 ರಂದು ಟಿವಿ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಿಕ್ ಜೋನಸ್ ಗಂಭೀರ ಗಾಯಕ್ಕೆ ತುತ್ತಾದರು, ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

  ಭಾರತಕ್ಕೆ ಸಹಾಯ ಮಾಡಿ: ಪ್ರಿಯಾಂಕಾ ಪತಿ ನಿಕ್ ಜೋನಸ್ ಮನವಿಭಾರತಕ್ಕೆ ಸಹಾಯ ಮಾಡಿ: ಪ್ರಿಯಾಂಕಾ ಪತಿ ನಿಕ್ ಜೋನಸ್ ಮನವಿ

  ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಪ್ರಿಯಾಂಕಾ ಪತಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರು. ಪ್ರಸ್ತುತ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಗಾಯ ಹೇಗಾಯಿತು ಮತ್ತು ದೇಹದ ಯಾವ ಭಾಗಕ್ಕೆ ಗಾಯವಾಗಿದೆ ಎಂದು ಸ್ಪಷ್ಟವಾಗಿ ತಿಳಿದಿಲ್ಲ.

  ಲಾಸ್ ಏಂಜಲೀಸ್‌ನಲ್ಲಿ ನಿಕ್ ಜೋನಸ್ ಟಿವಿ ಕಾರ್ಯಕ್ರಮದ ಚಿತ್ರೀಕರಣದಲ್ಲಿದ್ದರು. ಈ ಕಡೆ ಪ್ರಿಯಾಂಕಾ ಚೋಪ್ರಾ ಲಂಡನ್‌ನಲ್ಲಿ ತಮ್ಮ ಹೊಸ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ.

  ಕೊರೊನಾ ಸಂಕಷ್ಟದಲ್ಲಿರುವ ಭಾರತಕ್ಕೆ ನೆರವು

  ಅಣ್ಣಾವ್ರನ್ನ 108 ದಿನ ಕಾಡಿನಲ್ಲಿ ಕಾಪಾಡಿದ್ದು ಯಾರು ಅನ್ನೋ ಕಥೆ ಹೇಳಿದ ಚಂದ್ರಚೂಡ್

  ಕೊರೊನಾ ವೈರಸ್‌ನಲ್ಲಿ ತೀವ್ರವಾಗಿ ಸಂಕಷ್ಟದಲ್ಲಿರುವ ಭಾರತಕ್ಕೆ ಸಹಾಯ ಮಾಡಿ ಎಂದು ನಟಿ ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ಸಹಾಯ ಮಾಡಿ ಎಂದು ಕರೆ ನೀಡಿದ್ದರು. ಇದರ ಪರಿಣಾಮ ಏಳು ಕೋಟಿವರೆಗೂ ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

  English summary
  Priyanka Chopra Husband Nick Jonas Hospitalized after getting seriously injured on sets of his New Show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X