ಬೈಕ್ ಅಪಘಾತ: ಗಾಯದ ಬಗ್ಗೆ ಮಾಹಿತಿ ನೀಡಿದ ನಿಕ್ ಜೋನಸ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಶೂಟಿಂಗ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿತ್ತು. ನಿಖರವಾಗಿ ನಿಕ್ ಅವರಿಗೆ ಏನಾಗಿದೆ ಎನ್ನುವುದು ತಿಳಿದಿರಲಿಲ್ಲ. ಇದು ಸಹಜವಾಗಿ ನಿಕ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಇದೀಗ, ನಿಕ್ ಜೋನಸ್ ಖುದ್ದು ಈ ಬಗ್ಗೆ ವಿವರಣೆ ನೀಡಿದ್ದಾರೆ.

ಸೋಮವಾರ 'ದಿ ವಾಯ್ಸ್' ಟಿವಿ ಕಾರ್ಯಕ್ರಮಕ್ಕೆ ಮರಳಿದ ಗಾಯಕ ನಿಕ್ ಜೋನಸ್ ''ನಾನು ಆರೋಗ್ಯವಾಗಿದ್ದೇನೆ, ನನಗೆ ಗಂಭೀರವಾಗಿ ಏನು ಆಗಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

''ಬೈಕ್‌ನಲ್ಲಿ ಅಪಘಾತ ಆಯಿತು, ಪಕ್ಕೆಲುಬಿಗೆ ಪೆಟ್ಟು ಬಿದ್ದ ಕಾರಣ ನೋವು ಉಂಟಾಗಿತ್ತು. ಈಗ ಆರಾಮಾಗಿದ್ದೇನೆ'' ಎಂದು ಟಿವಿ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.

Nick Jonas reveals about his Bike Accident

ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಿಕ್ ಜೋನಸ್ ಗಂಭೀರ ಗಾಯಕ್ಕೆ ತುತ್ತಾದರು, ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಗಾಯ ಹೇಗಾಯಿತು ಮತ್ತು ದೇಹದ ಯಾವ ಭಾಗಕ್ಕೆ ಗಾಯವಾಗಿದೆ ಎಂದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ವರದಿ ಆಗಿದ್ದವು.

ಸದ್ಯ, ಲಾಸ್ ಏಂಜಲೀಸ್‌ನಲ್ಲಿ ನಿಕ್ ಜೋನಸ್ ಟಿವಿ ಕಾರ್ಯಕ್ರಮದ ಚಿತ್ರೀಕರಣದಲ್ಲಿದ್ದಾರೆ. ಈ ಕಡೆ ಪ್ರಿಯಾಂಕಾ ಚೋಪ್ರಾ ಲಂಡನ್‌ನಲ್ಲಿ ತಮ್ಮ ಹೊಸ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ.

ಕೊರೊನಾ ಸಂಕಷ್ಟದಲ್ಲಿರುವ ಭಾರತಕ್ಕೆ ನೆರವು

ಕೊರೊನಾ ವೈರಸ್‌ನಲ್ಲಿ ತೀವ್ರವಾಗಿ ಸಂಕಷ್ಟದಲ್ಲಿರುವ ಭಾರತಕ್ಕೆ ಸಹಾಯ ಮಾಡಿ ಎಂದು ನಟಿ ಪ್ರಿಯಾಂಕಾ ಚೋಪ್ರಾ ಮನವಿ ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ಸಹಾಯ ಮಾಡಿ ಎಂದು ಕರೆ ನೀಡಿದ್ದರು. ಇದರ ಪರಿಣಾಮ ಏಳು ಕೋಟಿವರೆಗೂ ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

Recommended Video

Kotigobba3: ಸಿನಿಮಾದಲ್ಲಿ Sudeep ತಾಯಿ ಪಾತ್ರದಲ್ಲಿ ಅಭಿರಾಮಿ | Filmibeat Kannada

More from Filmibeat

English summary
Priyanka Chopra Husband Nick Jonas reveals about his Bike Accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X