ಪ್ರಿಯಾಂಕಾ ಛೋಪ್ರಾ ಪತಿ ನಿಕ್ ಲಕಲಕ ಹಲ್ಲಿನ ನಡುವೆ 'ಸೊಪ್ಪು' ತಂದ ಎಡವಟ್ಟು

62ನೇ ಗ್ರ್ಯಾಮಿ ಅವಾರ್ಡ್ಸ್ ಇತ್ತೀಚೆಗೆಷ್ಟೇ ಲಾಸ್ ಏಂಜಲೀಸ್ ನಲ್ಲಿ ನಡೆಯಿತು. ಗ್ರ್ಯಾಮಿ ಅವಾರ್ಡ್-2020 ಕಾರ್ಯಕ್ರಮದಲ್ಲಿ ಜೋನಸ್ ಸಹೋದರರು ಗಾನ ಸುಧೆ ಹರಿಸಿ ವೇದಿಕೆ ಮೇಲೆ ಕಿಚ್ಚು ಹಚ್ಚಿಸಿದರು.

ಅಸಲಿಗೆ, 'ಗ್ರ್ಯಾಮಿ ಅವಾರ್ಡ್-2020'ನಲ್ಲಿ ಪಾಲ್ಗೊಳ್ಳಲು ನಟಿ ಪ್ರಿಯಾಂಕಾ ಛೋಪ್ರಾ, ಪತಿ ನಿಕ್ ಜೋನಸ್ ಸೇರಿದಂತೆ ಇಡೀ ಜೋನಸ್ ಕುಟುಂಬ ಟಾಪ್ ಟು ಬಾಟಂ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ರೆಡಿ ಆಗಿದ್ದರು.

ಡಿಸೈನರ್ ಉಡುಪುಗಳನ್ನು ತೊಟ್ಟು ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಸ್ ಮಿರಿ ಮಿರಿ ಮಿಂಚುತ್ತಿದ್ದರು. ವೇದಿಕೆ ಮೇಲೆ ಗಾನ ಸುಧೆ ಹರಿಸಲು ನಿಕ್ ಜೋನಸ್ ಶುರು ಮಾಡುತ್ತಿದ್ದಂತೆಯೇ, ಲಕಲಕ ಹೊಳೆಯುತ್ತಿದ್ದ ನಿಕ್ ಜೋನಸ್ ಹಲ್ಲುಗಳ ನಡುವೆ ಸಿಲುಕಿದ್ದ 'ಸೊಪ್ಪು' ಕೂಡ ಪ್ರೇಕ್ಷಕರಿಗೆ ಕಾಣಿಸಿಬಿಡ್ತು.

Nick Jonas trolled for performing at the Grammys with food in his teeth

ಸೋಷಿಯಲ್ ಮೀಡಿಯಾದಲ್ಲಿ ನಿಕ್ ಜೋನಸ್ ಟ್ರೋಲ್ ಆಗಲು ಇಷ್ಟು ಸಾಕಿತ್ತು. ನಿಕ್ ಜೋನಸ್ ಹಲ್ಲಿನ ಮಧ್ಯೆ ಸೊಪ್ಪು ಸಿಲುಕಿದ್ದ ಕಾರಣ, ಟ್ವೀಟಿಗರೆಲ್ಲರೂ ನಿಕ್ ಜೋನಸ್ ಕಾಲೆಳೆದರು.

ಜನ ಆಡಿಕೊಂಡು ನಗ್ತಿರೋದು ತಮ್ಮ ಗಮನಕ್ಕೂ ಬಂದ ಮೇಲೆ, ನಿಕ್ ಜೋನಸ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ''ಈಗಲಾದರೂ ನಾನು ಸೊಪ್ಪು ತಿಂತೀನಿ ಅಂತ ಗೊತ್ತಾಯ್ತಲ್ವಾ'' ಎಂದು ಟ್ವೀಟ್ ಮಾಡಿದ್ದಾರೆ ನಿಕ್ ಜೋನಸ್.

ಅಂದ್ಹಾಗೆ, ನಿಕ್ ಜೋನಸ್ ಅಮೇರಿಕಾ ಗಾಯಕ, ಗೀತ ರಚನೆಕಾರ ಮತ್ತು ನಟ. 27 ವರ್ಷದ ನಿಕ್ ಜೋನಸ್ ಮತ್ತು ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

More from Filmibeat

English summary
Nick Jonas trolled for performing at the Grammys with food in his teeth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X