twitter
    For Quick Alerts
    ALLOW NOTIFICATIONS  
    For Daily Alerts

    ಪ್ರಿಯಾಂಕಾ ಛೋಪ್ರಾ ಪತಿ ನಿಕ್ ಲಕಲಕ ಹಲ್ಲಿನ ನಡುವೆ 'ಸೊಪ್ಪು' ತಂದ ಎಡವಟ್ಟು

    |

    62ನೇ ಗ್ರ್ಯಾಮಿ ಅವಾರ್ಡ್ಸ್ ಇತ್ತೀಚೆಗೆಷ್ಟೇ ಲಾಸ್ ಏಂಜಲೀಸ್ ನಲ್ಲಿ ನಡೆಯಿತು. ಗ್ರ್ಯಾಮಿ ಅವಾರ್ಡ್-2020 ಕಾರ್ಯಕ್ರಮದಲ್ಲಿ ಜೋನಸ್ ಸಹೋದರರು ಗಾನ ಸುಧೆ ಹರಿಸಿ ವೇದಿಕೆ ಮೇಲೆ ಕಿಚ್ಚು ಹಚ್ಚಿಸಿದರು.

    ಅಸಲಿಗೆ, 'ಗ್ರ್ಯಾಮಿ ಅವಾರ್ಡ್-2020'ನಲ್ಲಿ ಪಾಲ್ಗೊಳ್ಳಲು ನಟಿ ಪ್ರಿಯಾಂಕಾ ಛೋಪ್ರಾ, ಪತಿ ನಿಕ್ ಜೋನಸ್ ಸೇರಿದಂತೆ ಇಡೀ ಜೋನಸ್ ಕುಟುಂಬ ಟಾಪ್ ಟು ಬಾಟಂ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ರೆಡಿ ಆಗಿದ್ದರು.

    ಡಿಸೈನರ್ ಉಡುಪುಗಳನ್ನು ತೊಟ್ಟು ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಸ್ ಮಿರಿ ಮಿರಿ ಮಿಂಚುತ್ತಿದ್ದರು. ವೇದಿಕೆ ಮೇಲೆ ಗಾನ ಸುಧೆ ಹರಿಸಲು ನಿಕ್ ಜೋನಸ್ ಶುರು ಮಾಡುತ್ತಿದ್ದಂತೆಯೇ, ಲಕಲಕ ಹೊಳೆಯುತ್ತಿದ್ದ ನಿಕ್ ಜೋನಸ್ ಹಲ್ಲುಗಳ ನಡುವೆ ಸಿಲುಕಿದ್ದ 'ಸೊಪ್ಪು' ಕೂಡ ಪ್ರೇಕ್ಷಕರಿಗೆ ಕಾಣಿಸಿಬಿಡ್ತು.

    Nick Jonas trolled for performing at the Grammys with food in his teeth

    20 ವರ್ಷ ಹಿಂದಿನ ಬಟ್ಟೆಯನ್ನ ಕಾಪಿ ಮಾಡಿದ್ರಾ ಪ್ರಿಯಾಂಕಾ ಚೋಪ್ರಾ20 ವರ್ಷ ಹಿಂದಿನ ಬಟ್ಟೆಯನ್ನ ಕಾಪಿ ಮಾಡಿದ್ರಾ ಪ್ರಿಯಾಂಕಾ ಚೋಪ್ರಾ

    ಸೋಷಿಯಲ್ ಮೀಡಿಯಾದಲ್ಲಿ ನಿಕ್ ಜೋನಸ್ ಟ್ರೋಲ್ ಆಗಲು ಇಷ್ಟು ಸಾಕಿತ್ತು. ನಿಕ್ ಜೋನಸ್ ಹಲ್ಲಿನ ಮಧ್ಯೆ ಸೊಪ್ಪು ಸಿಲುಕಿದ್ದ ಕಾರಣ, ಟ್ವೀಟಿಗರೆಲ್ಲರೂ ನಿಕ್ ಜೋನಸ್ ಕಾಲೆಳೆದರು.

    ಪತಿಯ ತುಟಿಗೆ ಮುತ್ತಿಟ್ಟು ಲಿಪ್ ಸ್ಟಿಕ್ ಮಾರ್ಕ್ ಅಳಿಸಿದ ಪ್ರಿಯಾಂಕಾ ವಿಡಿಯೋ ವೈರಲ್.!ಪತಿಯ ತುಟಿಗೆ ಮುತ್ತಿಟ್ಟು ಲಿಪ್ ಸ್ಟಿಕ್ ಮಾರ್ಕ್ ಅಳಿಸಿದ ಪ್ರಿಯಾಂಕಾ ವಿಡಿಯೋ ವೈರಲ್.!

    ಜನ ಆಡಿಕೊಂಡು ನಗ್ತಿರೋದು ತಮ್ಮ ಗಮನಕ್ಕೂ ಬಂದ ಮೇಲೆ, ನಿಕ್ ಜೋನಸ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ''ಈಗಲಾದರೂ ನಾನು ಸೊಪ್ಪು ತಿಂತೀನಿ ಅಂತ ಗೊತ್ತಾಯ್ತಲ್ವಾ'' ಎಂದು ಟ್ವೀಟ್ ಮಾಡಿದ್ದಾರೆ ನಿಕ್ ಜೋನಸ್.

    ಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾ

    ಅಂದ್ಹಾಗೆ, ನಿಕ್ ಜೋನಸ್ ಅಮೇರಿಕಾ ಗಾಯಕ, ಗೀತ ರಚನೆಕಾರ ಮತ್ತು ನಟ. 27 ವರ್ಷದ ನಿಕ್ ಜೋನಸ್ ಮತ್ತು ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    English summary
    Nick Jonas trolled for performing at the Grammys with food in his teeth.
    Tuesday, January 28, 2020, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X