ಮೂತ್ರ ವಿಸರ್ಜನೆ ದೃಶ್ಯದಲ್ಲಿ ಹಾಟ್ ತಾರೆ ನಿಕೋಲ್

By ರವಿಕಿಶೋರ್

The Paperboy still
ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಹ್ಯಾಟ್ರಿಕ್ ಹೊಡಿಮಗ' (ವಿಮರ್ಶೆ ಓದಿರಿ) ಚಿತ್ರದಲ್ಲಿ ಖಳನಟ ಶಿವರಾಜ್ ಮೇಲೆ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಇರುವ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈಗ ಅದೇ ರೀತಿಯ ದೃಶ್ಯವೊಂದರಲ್ಲಿ ಹಾಟ್ ತಾರೆಯೊಬ್ಬರು ಕಾಣಿಸಿಕೊಂಡಿರುವ ಬಗ್ಗೆ ಹಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಹಾಲಿವುಡ್ ನ 'ದಿ ಪೇಪರ್ ಬಾಯ್' ಎಂಬ ಚಿತ್ರದಲ್ಲಿ ತಾರೆ ನಿಕೋಲ್ ಕಿಡ್ ಮನ್ ಮೂತ್ರ ವಿಸರ್ಜನೆ ದೃಶ್ಯವಿದೆಯಂತೆ. ಈಗಾಗಲೆ ಚಿತ್ರದ ಟ್ರೇಲರ್ ಗಳು ಬಿಡುಗಡೆಯಾಗಿದ್ದು ಅತೀವ ಸಂಚಲನ ಸೃಷ್ಟಿಸಿದೆ. ಆದರೆ ಟ್ರೇಲರ್ ನಲ್ಲಿ ಈ ದೃಶ್ಯ ಇಲ್ಲದಿರುವುದು ಆಕೆಯ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದೆ.

ವಿಶೇಷ ಎಂದರೆ 45ರ ಹರೆಯದ ನಿಕೋಲ್ ಅವರನ್ನು ಹಾಟ್ ಬಿಕಿನಿ ಸೀನ್ ಗಳಲ್ಲಿ ತೋರಿಸಿ ಆಕೆಯ ಅಭಿಮಾನಿಗಳ ಮನತಣಿಸಿದ್ದಾರೆ. ಚಿತ್ರದಲ್ಲಿನ ಸನ್ನಿವೇಶಗಳೂ ಮೈನವಿರೇಳಿಸುವಂತಿದ್ದು, ಅಭಿಮಾನಿಗಳು ಕಣ್ಣು ಬಾಯಿ ಬಿಟ್ಟುಕೊಂಡು ನೋಡುವಂತಿವೆ. ಸತ್ಯ ಘಟನೆಯಾಧಾರಿತ ಈ ಚಿತ್ರದಲ್ಲಿ ಹಲವಾರು ರೋಚಕ ಸಂಗತಿಗಳೂ ಇವೆಯಂತೆ.

ಕೊಲೆ ಘಟನೆಯೊಂದನ್ನು ಭೇದಿಸುವ ಯುವ ವರದಿಗಾರನೊಬ್ಬನ ತನಿಖೆಯ ಸುತ್ತ ಕತೆ ಸುತ್ತುತ್ತದೆ. ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕ ನಟ ಜಾಕ್ ಎಫ್ರಾನ್ ಮೇಲೆ ನಾಯಕಿ ನಿಕೋಲ್ ಮೂತ್ರ ವಿಸರ್ಜನೆ ಮಾಡುತ್ತಾರೆ. ಚಿತ್ರದಲ್ಲಿನ ಈ ಸನ್ನಿವೇಶ ಈಗ ಬಿರುಸಿನ ಚರ್ಚೆಗೆ ಕಾರಣವಾಗಿದೆ.

ಚಿತ್ರದಲ್ಲಿ ಅಭಿನಯಿಸಿರುವ ನಾಯಕ ನಟ ಜಾಕ್ ವಯಸ್ಸು ಕೇವಲ 24 ವರ್ಷಗಳು. ಇವರಿಬ್ಬರೂ ಈ ಸನ್ನಿವೇಶದಲ್ಲಿ ಅಭಿನಯಿಸಬೇಕಾದರೆ ಸಿಕ್ಕಾಪಟ್ಟೆ ಮುಜುಗರ ಅನುಭವಿಸಿದರಂತೆ. ಆದರೆ ಏನು ಮಾಡುವುದು ಚಿತ್ರದ ಕತೆ ಈ ರೀತಿಯ ಸನ್ನಿವೇಶವನ್ನು ಬಯಸಿತ್ತು ಎನ್ನುತ್ತಾರೆ ಇಬ್ಬರೂ.

ಈ ರೀತಿಯ ಸನ್ನಿವೇಶಗಳಲ್ಲಿ ಅಭಿನಯಿಸುವುದು ನಿಜಕ್ಕೂ ಚಾಲೆಂಜ್ ಎಂದಿದ್ದಾನೆ ಜಾಕ್. ಪೀಟರ್ ಡೆಕ್ಸ್ ಟರ್ ಅವರ ಕಾದಂಬರಿ ಆಧಾರಿತ ಚಿತ್ರವಿದು. ಲೀ ಡೇನಿಯಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಅಕ್ಟೋಬರ್ 5ರಂದು ತೆರೆಗೆ ಅಪ್ಪಳಿಸುತ್ತಿದೆ. (ಏಜೆನ್ಸೀಸ್)

More from Filmibeat

English summary
Actress Nicole Kidman urinate on Zac Efron in the newly released "The Paperboy" trailer will be left disappointed. Although that much talked about scene in the film is not included in the clip, fans will, however, get a glimpse of 24-year-old Efron dancing with Kidman in his underwear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X