twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆಗೊಂಡ ಮೂರು ದಿನದಲ್ಲಿ 'ನೋ ಟೈಮ್ ಟು ಡೈ' ಗಳಿಸಿದ್ದೆಷ್ಟು?

    |

    ಜೇಮ್ಸ್ ಬಾಂಡ್ ಸರಣಿಯ ಹೊಸ ಸಿನಿಮಾ 'ನೋ ಟೈಮ್ ಟು ಡೈ' ಮೂರು ದಿನದ (ಸೆಪ್ಟೆಂಬರ್ 29) ಹಿಂದಷ್ಟೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಭಾರತದಲ್ಲಿ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಿದೆ.

    ಹಲವು ಕಾರಣಗಳಿಗಾಗಿ ಈ ಸಿನಿಮಾ ವಿಶ್ವದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಬಾಂಡ್ ಸರಣಿಯ ಅತ್ಯಂತ ಜನಪ್ರಿಯ ಬಾಂಡ್ ಎಂದು ಹೆಸರು ಗಳಿಸಿಕೊಂಡಿರುವ ಡ್ಯಾನಿಯಲ್ ಕ್ರೇಗ್‌ರ ಕೊನೆಯ ಬಾಂಡ್ ಸಿನಿಮಾ ಇದು. ಬಿಡುಗಡೆಗಾಗಿ ಅತಿ ಹೆಚ್ಚು ಸಮಯ ಕಾದು, ನಿರೀಕ್ಷೆ ಹುಟ್ಟಿಸಿದ ಸಿನಿಮಾ ಸಹ ಇದೆಂಬ ಖ್ಯಾತಿ 'ನೋ ಟೈಮ್ ಟು ಡೈ' ಸಿನಿಮಾದ್ದು.

    ಈ ಸಿನಿಮಾದ ಮೇಲೆ ಹಾಲಿವುಡ್ ಸೇರಿ ಹಲವು ಪ್ರತಿಷ್ಟಿತ ವಿದೇಶಿ ಚಿತ್ರರಂಗಗಳು ಕಣ್ಣಿಟ್ಟಿವೆ. 'ನೋ ಟೈಮ್ ಟು ಡೈ' ಸಿನಿಮಾ ಎಷ್ಟು ಗಳಿಸುತ್ತದೆ ಎಂಬುದನ್ನು ಎಲ್ಲರ ಕುತೂಹಲದಿಂದ ಗಮನಿಸುತ್ತಿದ್ದಾರೆ. ಕೊರೊನಾ ಭೀತಿ ಇನ್ನೂ ಪೂರ್ಣವಾಗಿ ಅಳಿಯದೇ ಇರುವ ಸಮಯದಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾ ಎಷ್ಟರ ಮಟ್ಟಿಗೆ ಜನರನ್ನು ಸೆಳೆಯುತ್ತದೆ. ಜನ ಚಿತ್ರಮಂದಿರಕ್ಕೆ ಬರಲು ತಯಾರಿದ್ದಾರೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ 'ನೋ ಟೈಮ್ ಟು ಡೈ' ಸಿನಿಮಾದ ಮೂಲಕ ಉತ್ತರ ಕಂಡುಕೊಳ್ಳಲು ಯತ್ನಿಸಲಾಗುತ್ತಿದೆ. ಹಾಗಾಗಿಯೇ ಈ ಸಿನಿಮಾ ಎಷ್ಟು ಗಳಿಸಿದೆ ಎಂಬ ವಿಷಯಕ್ಕೆ ಮಹತ್ವ ದೊರಕಿದೆ.

    ಸೆಪ್ಟೆಂಬರ್ 29 ರಂದು ಬಿಡುಗಡೆ ಕಂಡ 'ನೋ ಟೈಮ್ ಟು ಡೈ' ಸಿನಿಮಾ ಸೆಪ್ಟೆಂಬರ್ 30 ರಂದು ಕೆಲವು ದೇಶಗಳಲ್ಲಿ ಬಿಡುಗಡೆ ಕಂಡಿದೆ. ಕೇವಲ ಮೂರು ದಿನಕ್ಕೆ ನೂರಾರು ಕೋಟಿ ರುಪಾಯಿಗಳನ್ನು ಸಿನಿಮಾ ಗಳಿಸಿದೆ. ಆದರೂ ಈ ಹಿಂದಿನ ಜೇಮ್ಸ್ ಬಾಂಡ್ ಸಿನಿಮಾಗಳಿಗೆ ಹೋಲಿಸಿದರೆ ಈ ಗಳಿಕೆ ಕಡಿಮೆ ಎಂದೇ ಹೇಳಲಾಗುತ್ತಿದೆ.

    ಹಲವು ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ

    ಹಲವು ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ

    'ನೋ ಟೈಮ್ ಟು ಡೈ' ಸಿನಿಮಾವು ದಕ್ಷಿಣ ಕೊರಿಯಾ, ಬ್ರೆಜಿಲ್, ಐರ್ಲೆಂಡ್, ಜರ್ಮನಿ, ಬ್ರಿಟನ್, ಇಟಲಿ, ನೆದರ್ಲೆಂಡ್, ಭಾರತ, ಜರ್ಮನಿ, ರಷ್ಯಾ, ಫ್ರಾನ್ಸ್ ಇನ್ನೂ ಹಲವು ದೇಶಗಳಲ್ಲಿ ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನ ದಕ್ಷಿಣ ಕೊರಿಯಾ ಒಂದರಲ್ಲೇ 4 ಕೋಟಿ ಹಣ ಗಳಿಸಿದೆ. ಎರಡನೇ ದಿನವೂ 4.37 ಕೋಟಿ ಹಣ ಗಳಿಸಿದೆ. ಬ್ರಿಟನ್‌ನಲ್ಲಿ ಮೊದಲ ದಿನ 45 ಕೋಟಿ ಹಣ ಗಳಿಸಿದರೆ ಐರ್ಲೆಂಡ್‌ನಲ್ಲಿ 50 ಕೋಟಿಗೂ ಹೆಚ್ಚು ಹಣ ಗಳಿಸಿದೆ.

    ಮೊದಲೆರಡು ದಿನದಲ್ಲಿ ಗಳಿಸಿದ್ದೆಷ್ಟು?

    ಮೊದಲೆರಡು ದಿನದಲ್ಲಿ ಗಳಿಸಿದ್ದೆಷ್ಟು?

    'ನೋ ಟೈಮ್ ಟು ಡೈ' ಸಿನಮಾ ತನ್ನ ಮೊದಲ ವೀಕೆಂಡ್‌ಗೆ ಮುನ್ನವೇ ಸರಿಸುಮಾರು 150 ಕೋಟಿ ಹಣವನ್ನು ವಿಶ್ವದಾದ್ಯಂತ ಸಂಗ್ರಹಿಸಿದೆ. ಈ ವೀಕೆಂಡ್‌ನಲ್ಲಿ 600 ರಿಂದ 800 ಕೋಟಿ ಹಣ ಗಳಿಸುವ ಲೆಕ್ಕಾಚಾರವನ್ನು ಯೂನಿವರ್ಸಲ್ ಸಂಸ್ಥೆ ಹಾಕಿಕೊಂಡಿದೆ. ಆದರೆ ಈ ಮೊತ್ತ ಕಡಿಮೆ ಎಂದೇ ಹೇಳಲಾಗುತ್ತಿದೆ. ಯೂನಿವರ್ಸಲ್ ಸಂಸ್ಥೆಯು ಇದೇ ಮೊದಲ ಬಾರಿಗೆ ಸಿನಿಮಾವನ್ನು ವಿಶ್ವದಾದ್ಯಂತ ವಿತರಣೆ ಮಾಡಿದೆ.

    ಈ ಹಿಂದಿನ ಬಾಂಡ್‌ ಸಿನಿಮಾಗಳು ಎಷ್ಟು ಗಳಿಸಿವೆ?

    ಈ ಹಿಂದಿನ ಬಾಂಡ್‌ ಸಿನಿಮಾಗಳು ಎಷ್ಟು ಗಳಿಸಿವೆ?

    ಡ್ಯಾನಿಯಲ್ ಕ್ರೇಗ್‌ ನಾಯಕನಾಗಿ ನಟಿಸಿದ್ದ ಈ ಹಿಂದಿನ ಬಾಂಡ್ ಸಿನಿಮಾ 'ಸ್ಪೆಕ್ಟರ್' (2015ರಲ್ಲಿ ಬಿಡಗುಡೆ) ಮೊದಲ ವೀಕೆಂಡ್‌ನಲ್ಲಿ 123 ಮಿಲಿಯನ್ ಡಾಲರ್ ಅಂದರೆ 911 ಕೋಟಿ ಹಣ ಗಳಿಸಿತ್ತು, 2012 ರಲ್ಲಿ ಬಿಡುಗಡೆ ಆಗಿದ್ದ 'ಸ್ಕೈಫಾಲ್' ಸಿನಿಮಾ 807 ಕೋಟಿ ಹಣವನ್ನು ಮೊದಲ ವೀಕೆಂಡ್‌ನಲ್ಲಿ ಗಳಿಸಿತ್ತು. ಅವೆರಡಕ್ಕೂ ಹೋಲಿಸಿದರೆ ಈ ಮೊತ್ತ 600 ಕೋಟಿ ಬಹಳ ಕಡಿಮೆ.

    ಚೀನಾ, ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಇಲ್ಲ

    ಚೀನಾ, ಆಸ್ಟ್ರೇಲಿಯಾದಲ್ಲಿ ಬಿಡುಗಡೆ ಇಲ್ಲ

    ಆದರೆ 'ನೋ ಟೈಮ್ ಟು ಡೈ' ಸಿನಿಮಾವು ಹಲವು ದೊಡ್ಡ ರಾಷ್ಟ್ರಗಳಲ್ಲಿ ಇನ್ನೂ ಬಿಡುಗಡೆ ಆಗಿಲ್ಲ. ಭಾರತದಲ್ಲಿ ಚಿತ್ರಮಂದಿರ ಪೂರ್ಣ ತೆಗೆಯದ ಸಮಯದಲ್ಲಿ ಬಿಡುಗಡೆ ಆಗಿದೆ. ವಿಶ್ವದ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಯಾದ ಚೀನಾದಲ್ಲಿ ಸಿನಿಮಾ ಬಿಡುಗಡೆಯೇ ಆಗಿಲ್ಲ. ಆಸ್ಟ್ರೇಲಿಯಾದಲ್ಲಿ ನವೆಂಬರ್‌ ತಿಂಗಳವರೆಗೆ ಚಿತ್ರಮಂದಿರಗಳು ತೆರೆಯುವಂತೆಯೇ ಇಲ್ಲ. ಇನ್ನೂ ಹಲವು ಪ್ರಮುಖ ದೇಶಗಳಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ. ಹಾಗಾಗಿ 'ನೋ ಟೈಮ್ ಟು ಡೈ' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಿಲ್ಲ.

    2000 ಕೋಟಿ ಖರ್ಚು ಮಾಡಲಾಗಿದೆ

    2000 ಕೋಟಿ ಖರ್ಚು ಮಾಡಲಾಗಿದೆ

    600-800 ಕೋಟಿ ಗಳಿಸಿದರೆ ಸಿನಿಮಾ ತೀವ್ರ ನಷ್ಟಕ್ಕೆ ಸಿಲುಕುತ್ತದೆ. 'ನೋ ಟೈಮ್ ಟು ಡೈ' ಸಿನಿಮಾಕ್ಕೆ ಅಂದಾಜು 2000 ಕೋಟಿ ಹಣ ಖರ್ಚು ಮಾಡಲಾಗಿದೆ. ಈ ಮೊತ್ತಕ್ಕೆ ಹೋಲಿಸಿದರೆ ಸಿನಿಮಾದ ಈಗಿನ ಕಲೆಕ್ಷನ್ ಬಹಳ ಕಡಿಮೆ. ಆದರೆ ಒಮ್ಮೆ ಚೀನಾ, ಆಸ್ಟ್ರೇಲಿಯಾ ಹಾಗೂ ಇತರೆ ರಾಷ್ಟ್ರಗಳಲ್ಲಿ ಬಿಡುಗಡೆ ಆದರೆ ದೊಡ್ಡ ಮೊತ್ತದ ಹಣ ಮರಳಲಿದೆ. ಆ ನಂತರ ಒಟಿಟಿಗೆ ಮಾರಾಟ ಮಾಡುವುದು ಇದ್ದೇ ಇದೆ.

    English summary
    James Bond movie series's new movie 'No Time To Die' collected good money on first two days of its release. Expected to make more than 90 million dollars on this weekend.
    Friday, October 1, 2021, 19:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X