ಧಗಧಗ ಹೊತ್ತಿ ಉರಿದ ಲಾಸ್ ಏಂಜಲೀಸ್, ಬೆಂಕಿಯ ಜ್ವಾಲೆಗಳಿಂದ ಪಾರಾದ ನೋರಾ ಫತೇಹಿ..!

ಅಂಗೈನಲ್ಲಿಯೇ ಆಕಾಶ ತೋರಿಸುವರು ಹಾಲಿವುಡ್‌ನ ತಾರೆಯರು. ತಂತ್ರಜ್ಞಾನದ ಸಹಾಯದ ಮೂಲಕ ತಮ್ಮ ಚಿತ್ರಗಳ ಮೂಲಕ ನಾನಾ ಚಮತ್ಕಾರವನ್ನು ಮಾಡುವ ಹಾಲಿವುಡ್‌ನವರು ಸದ್ಯ ಬೆಚ್ಚಿ ಬಿದ್ದಿದ್ದಾರೆ. ಹಾಲಿವುಡ್‌ ಬೌಲೆವಾರ್ಡ್‌ನಿಂದ ನೂರು ಮೀಟರ ದೂರದಲ್ಲಿ ಬಿದ್ದ ಬೆಂಕಿಯಿಂದ ಹಾಲಿವುಡ್ ಸೆಲೆಬ್ರಿಟಿಗಳು ತಲ್ಲಣಗೊಂಡಿದ್ಧಾರೆ.

ಹೌದು, ಅಸಲಿಗೆ ಅಮೆರಿಕಾದ ಲಾಸ್ ಎಂಜಲ್ಸ್‌ನಲ್ಲಿ ಹಬ್ಬಿದ ಕಾಡ್ಗಿಚ್ಚು 15.832 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಹಾಲಿವುಡ್‌ ಹಿಲ್‌ಗೆ ಕೂಡ ಬೆಂಕಿ ವ್ಯಾಪಿಸಿದೆ. ಈ ಹಾಲಿವುಡ್‌ ಹಿಲ್‌ನಲ್ಲಿ ಅನೇಕ ಹಾಲಿವುಡ್ ನಾಯಕ ನಾಯಕಿಯರು ವಾಸ ಮಾಡುತ್ತಾರೆ. ಇವರಲ್ಲದೇ ವಿಶ್ವದ ಶ್ರೀಮಂತ ಉದ್ಯಮಿಗಳು ಮತ್ತು ಕ್ರೀಡಾ ತಾರೆಯರು ಕೂಡ ಇಲ್ಲಿಯೇ ಮನೆ ಮಾಡಿಕೊಂಡಿದ್ದಾರೆ.

Nora Fatehi Escapes LA Wildfires Priyanka Chopra Thanks Rescue Workers

ಹೀಗಾಗಿಯೇ ಹಾಲಿವುಡ್‌ ಹಿಲ್‌ಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಹಾಲಿವುಡ್ ನಗರದಲ್ಲಿರುವ ಬಹುತೇಕರನ್ನು ಸ್ಥಳಾಂತರ ಮಾಡಲಾಗಿದೆ. ಕಾಡ್ಗಿಚ್ಚು ಹಬ್ಬಿರುವ ಪ್ರದೇಶವನ್ನು ಕಾನೂನುಬದ್ದವಾಗಿ ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲಾಗಿದೆ. ಇನ್ನು, ಈ ಭೀಕರ ಕಾಡ್ಗಿಚ್ಚನ್ನು ಲಾಸ್ ಏಂಜಲಿಸ್ ಇತಿಹಾಸದಲ್ಲಿಯೇ ಅತ್ಯಂತ ವಿನಾಶಕಾರಿ ಎಂದು ಹೇಳಲಾಗಿದ್ದು ಇಲ್ಲಿಯವರೆಗೆ ಸುಮಾರು 137,000ಕ್ಕಿಂತ ಹೆಚ್ಚಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ.

ಸದ್ಯ 1000ಕ್ಕೂ ಅಧಿಕ ಬಿಲ್ಡಿಂಗ್‌ಗಳು ಬೆಂಕಿಗೆ ಆಹುತಿಯಾಗಿದ್ದು ಬಾಲಿವುಡ್‌ನ ಸ್ಟಾರ್ ನೋರಾ ಫತೇಹಿ ಕೂಡ ಈ ಕಾಡ್ಗಚ್ಚಿನ ಮಧ್ಯೆ ಸಿಕ್ಕಿ ಬಿದ್ದಿದ್ದು ಅಲ್ಲಿಂದ ಪಾರಾಗಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ನೋರಾ ನಾನು ಲಾಸ್ ಏಜಂಲೀಸ್‌ನಲ್ಲಿದ್ದೇನೆ. ಇಲ್ಲಿ ಭೀಕರ ಕಾಳ್ಗಿಚ್ಚು ವ್ಯಾಪಿಸಿದೆ. ನಾನು ನನ್ನ ಜೀವನದಲ್ಲಿ ಈ ರೀತಿಯ ಬೆಂಕಿಯ ಕೆನ್ನಾಲೆಗಳನ್ನು ಕಂಡಿಲ್ಲ. ಐದು ನಿಮಿಷದ ಹಿಂದೆ ಸ್ಥಳಾಂತರದ ಕರೆ ಬಂದ ಹಿನ್ನೆಲೆ ತ್ವರಿತಗತಿಯಲ್ಲಿ ನಾನು ನನ್ನ ಎಲ್ಲ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಇಲ್ಲಿಂದ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಂದುವರೆದು ವಿಮಾನ ನಿಲ್ದಾಣದ ಬಳಿಯೇ ತಂಗುವ ಯೋಜನೆ ಇದ್ದು, ಆದಷ್ಟು ಬೇಗ ಟಿಕೆಟ್ ಬುಕ್ ಮಾಡಿಕೊಂಡು ನಾನು ಮರಳಿ ಬರುತ್ತೇನೆ, ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿರುವ ನೋರಾ ಲಾಸ್ ಏಂಜಲೀಸ್‌ನಲ್ಲಿ ಜನ ಸುರಕ್ಷಿತರಾಗಿದ್ದಾರೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ. ನೋರಾ ಫತೇಹಿ ಅವರ ಈ ವಿಡಿಯೋ ನೋಡಿದ ಇವರ ಅನೇಕ ಅಭಿಮಾನಿಗಳು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಹಾಲಿವುಡ್‌ನಲ್ಲಿಯೇ ಬದುಕು ಕಟ್ಟಿಕೊಂಡ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೂಡ ಲಾಸ್ ಏಂಜಲೀಸ್‌ನ ತಮ್ಮ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಬೆಟ್ಟಗಳಿಗೆ ಕಾಡ್ಗಿಚ್ಚು ವ್ಯಾಪಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದಣಿಯದೇ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೆಲಸ ಮಾಡುತ್ತಿರುವ ರಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

More from Filmibeat

Read more about: nora fatehi priyanka chopra fire
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X