Oppenheimer: ಬ್ಯಾನ್ ವಿರೋಧದ ನಡುವೆಯೂ ಭಾರತ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಗಳಿಸಿದ ಆಪನ್‌ಹೈಮರ್

ಜುಲೈ 21ರ ಶುಕ್ರವಾರದಂದು ವಿಶ್ವ ವಿಖ್ಯಾತ ನಿರ್ದೇಶಕ ಕ್ರಿಸ್ಟಫರ್ ನೋಲನ್ ನಿರ್ದೇಶನದ ಮಾಸ್ಟರ್‌ಪೀಸ್ ಸಿನಿಮಾ 'ಆಪನ್‌ಹೈಮರ್' ಬಿಡುಗಡೆಗೊಂಡಿತ್ತು. ಸಿನಿ ರಸಿಕರ ತಲೆಗೆ ತನ್ನ ಈವರೆಗಿನ ವಿಭಿನ್ನ ಜಾಣ್ಮೆಯ ಸ್ಕ್ರೀನ್‌ಪ್ಲೇನಿಂದ ಹುಳಬಿಟ್ಟು ದಿನಗಳಗಟ್ಟಲೆ ತನ್ನ ಚಿತ್ರಗಳ ಬಗ್ಗೆ ಮಾತನಾಡುವ ಹಾಗೆ ಮಾಡಿದ್ದ ಕ್ರಿಸ್ಟೊಫರ್ ನೋಲನ್ ಈ ಬಾರಿ ಆಟೋಮಿಕ್ ಬಾಂಬ್‌ನ ಜನಕ ಜೂನಿಯರ್ ರಾಬರ್ಟ್ ಆಪನ್‌ಹೈಮರ್‌ನ ಭಾವನಾತ್ಮಕ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ.

ಹೌದು, ಆಟೋಮಿಕ್ ಬಾಂಬ್‌ನ ಜನಕ ಆಪನ್‌ಹೈಮರ್‌ನ ಆಟೋಗ್ರಫಿಯನ್ನು ಕ್ರಿಸ್ಟಫರ್ ನೋಲನ್ ಬೆಳ್ಳಿ ಪರದೆ ಮೇಲೆ ತೋರಿಸಿದ್ದು, ಹಿರೋಶಿಮಾ ಹಾಗೂ ನಾಗಸಾಕಿ ಮೇಲೆ ಅಣುಬಾಂಬ್ ತಯಾರಿಕೆ ಹೇಗೆ ನಡೆಯಿತು, ಹೇಗೆಲ್ಲಾ ಅದನ್ನು ಬಳಕೆ ಮಾಡಲಾಯಿತು, ಅದರಿಂದ ಆಪನ್‌ಹೈಮರ್‌ಗೆ ಬಂದ ಸ್ಥಿತಿ ಏನು ಎಂಬೆಲ್ಲಾ ಅಂಶಗಳನ್ನು ಕ್ರಿಸ್ಟಫರ್ ನೋಲನ್ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

Oppenheimer: Christopher Nolans movie grossed 100 crore in Indian box office

ಹೀಗೆ ವಿಭಿನ್ನ ಕಥೆಯನ್ನು ಹೊಂದಿರುವ ಆಪನ್‌ಹೈಮರ್ ಚಿತ್ರ ಬಿಡುಗಡೆಯಾದ ಮೇಲೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಕೆಲವರು ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ ಎಂಬ ಅಭಿಪ್ರಾಯ ತಿಳಿಸಿದ್ದರೆ, ಇನ್ನೂ ಕೆಲವರು ಚಿತ್ರ ಅದ್ಭುತವಾಗಿದೆ, ನಡೆದ ಘಟನೆ ಹಾಗೂ ಅದರ ಪ್ರಭಾವವನ್ನು ನಿರ್ದೇಶಕರು ಸರಿಯಾಗಿ ತೆರೆ ಮೇಲೆ ತಂದಿದ್ದಾರೆ ಎಂದು ನೋಲನ್ ನಿರ್ದೇಶನವನ್ನು ಕೊಂಡಾಡಿದ್ದಾರೆ.

ಇನ್ನು ಕ್ರಿಸ್ಟಫರ್ ನೋಲನ್ ಭಾರತದಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಭಾರತದ ಸಿನಿ ರಸಿಕರು ದೊಡ್ಡ ಮಟ್ಟದಲ್ಲಿಯೇ ಆಪನ್‌ಹೈಮರ್ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದಾರೆ. ಪರಿಣಾಮವಾಗಿ ಆಪನ್‌ಹೈಮರ್ ಭಾರತ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ಹೌದು, ಆಪನ್‌ಹೈಮರ್ ಕೇವಲ 10 ದಿನಗಳಲ್ಲಿ ನೂರು ಕೋಟಿ ಗಳಿಕೆಯನ್ನು ಮಾಡಿ ಮುಗಿಸಿದೆ. ಈ ಮೂಲಕ ಚಿತ್ರ ಭಾರತ ಬಾಕ್ಸ್ ಆಫೀಸ್‌ನಲ್ಲಿ ಬೃಹತ್ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಚಿತ್ರದಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಅಂಶಗಳನ್ನು ಕೆಟ್ಟ ಸಂದರ್ಭದಲ್ಲಿ ಹೇಳಲಾಗಿದೆ ಎಂದು ಕಿಡಿಕಾರಿದ್ದ ಹಲವರು ಈ ಚಿತ್ರವನ್ನು ಭಾರತದಲ್ಲಿ ಬ್ಯಾನ್ ಮಾಡಬೇಕು ಎಂದಿದ್ದರು. ಹೀಗೆ ಬ್ಯಾನ್ ವಿರೋಧದ ನಡುವೆಯೂ ಸಹ ಆಪನ್‌ಹೈಮರ್ ಭಾರತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ನಡೆಸಿದೆ.

ಇನ್ನು ಆಪನ್‌ಹೈಮರ್ ಚಿತ್ರ ಬಿಡುಗಡೆಯಾದ ದಿನವೇ ಮತ್ತೊಂದು ಹಾಲಿವುಡ್ ಚಿತ್ರ ಬಾರ್ಬಿ ಸಹ ತೆರೆಗೆ ಬಂದಿತ್ತು. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಆಪನ್‌ಹೈಮರ್‌ಗಿಂತ ಬಾರ್ಬಿ ಚಿತ್ರ ಹೆಚ್ಚಿನ ಗಳಿಕೆಯನ್ನು ಮಾಡಿದ್ದು, ಭಾರತ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಆಪನ್‌ಹೈಮರ್ನ ಎದುರು ಮಂಕಾಗಿದೆ. ಹತ್ತು ದಿನಗಳಲ್ಲಿ ಬಾರ್ಬಿ ಭಾರತದಲ್ಲಿ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.

ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿಯೂ ಸಹ ಬಾರ್ಬಿಗಿಂತ ಆಪನ್‌ಹೈಮರ್‌ನ ಅಬ್ಬರ ಜೋರಾಗಿದೆ. ಸದ್ಯ ಈ ಎರಡೂ ಚಿತ್ರಗಳು ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರ ಗಳಿಕೆ ಮಾಡಿದ ಕಲೆಕ್ಷನ್ ವಿವರ ಹೊರಬಿದ್ದಿದ್ದು, ಬಾರ್ಬಿ ಮೊದಲ ವಾರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 5.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದರೆ, ಆಪನ್‌ಹೈಮರ್ ಚಿತ್ರ ಮೊದಲ ವಾರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 16.1 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.

ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಆಪನ್‌ಹೈಮರ್ ಎದುರು ಬಾರ್ಬಿ ಚಿತ್ರ ಮಂಕಾಗಿದೆ. ಹೀಗೆ ಆಪನ್‌ಹೈಮರ್ ಅಬ್ಬರ ಜೋರಾಗಿದ್ದು, ಈ ಎರಡೂ ಚಿತ್ರಗಳು ಬಿಡುಗಡೆಗೊಂಡ ದಿನವೇ ಕನ್ನಡದ ಹೊಸಬರ ಚಿತ್ರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಬಿಡುಗಡೆಯಾಗಿದ್ದು, ಈ ಚಿತ್ರ ಬಾರ್ಬಿ ಹಾಗೂ ಆಪನ್‌ಹೈಮರ್ ಎರಡೂ ಚಿತ್ರಗಳಿಗೂ ಸಹ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಟಕ್ಕರ್ ನೀಡುತ್ತಿದೆ.

More from Filmibeat

English summary
Oppenheimer: Christopher Nolan's movie grossed 100 crore in Indian box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X