For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 26ರ ಬೆಳಗ್ಗೆ ಆಸ್ಕರ್ 2021 ವಿಜೇತರ ಪಟ್ಟಿ ಪ್ರಕಟ

  |

  93ನೇ ಸಾಲಿನ ಆಸ್ಕರ್ ಪ್ರಶಸ್ತಿ ಯಾರೆಲ್ಲ ಗೆದ್ದಿದ್ದಾರೆ ಎಂದು ತಿಳಿಯಲು ಕೆಲವೇ ಗಂಟೆಗಳು ಬಾಕಿಯಿದೆ. ಸಾಮಾನ್ಯವಾಗಿ ಆಸ್ಕರ್ ಪ್ರಶಸ್ತಿ ಸಮಾರಂಭವು ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿತ್ತು. ಈ ವರ್ಷ ವಿಶ್ವದ ವಿವಿಧ ಸ್ಥಳಗಳಿಂದ ಆಸ್ಕರ್ ಸಮಾರಂಭ ನೇರ ಪ್ರಸಾರವಾಗಲಿದೆ.

  ಮಾರ್ಚ್ ತಿಂಗಳಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ದಂಪತಿ ಒಟ್ಟು 23 ವಿಭಾಗಗಳಿಗೆ ಆಸ್ಕರ್ 2021 ಗೆ ನಾಮನಿರ್ದೇಶನವಾಗಿದ್ದ ಪಟ್ಟಿಯನ್ನು ಘೋಷಿಸಿದ್ದರು. ಈ ಪೈಕಿ ಯಾರಿಗೆಲ್ಲಾ ಪ್ರಶಸ್ತಿ ಲಭಿಸಲಿದೆ ಎನ್ನುವುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

  93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ

  ಪ್ರತಿವರ್ಷದಂತೆ ಸಂಭ್ರಮ ಹಾಗೂ ಮುಕ್ತವಾಗಿ ಈ ಸಲ ಕಾರ್ಯಕ್ರಮ ನಡೆಯುವುದಿಲ್ಲ. ಆಸ್ಕರ್ ನಾಮಿನೇಷನ್ ಆದ ಸಿನಿಮಾಗಳ ನಟ, ನಿರ್ದೇಶಕರು ಇರುವ ದೇಶಗಳಿಗೆ ತೆರಳಿ ಅಲ್ಲಿಂದಲೇ ಲೈವ್ ಮಾಡಿ, ಅಲ್ಲಿಯೇ ಗೆದ್ದವರ ಭಾಷಣಗಳನ್ನು ರೆಕಾರ್ಡ್ ಮಾಡಿ ಲೈವ್ ಮಾಡಲಾಗುತ್ತದೆ.

  ಆಸ್ಕರ್ 2021 ಕಾರ್ಯಕ್ರಮ ಭಾನುವಾರ (ಏಪ್ರಿಲ್ 25) ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಅಂದರೆ ಭಾರತೀಯ ಕಾಲಮಾನದಲ್ಲಿ ಸೋಮವಾರ (ಏಪ್ರಿಲ್ 26) ಬೆಳಿಗ್ಗೆ 5.30ಕ್ಕೆ ಪ್ರಸಾರವಾಗಲಿದೆ.

  ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ವಿಭಿನ್ನ: ಹಲವು ದೇಶಗಳಿಂದ ಲೈವ್ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭ ವಿಭಿನ್ನ: ಹಲವು ದೇಶಗಳಿಂದ ಲೈವ್

  ಆಸ್ಕರ್ 2021 ಸಮಾರಂಭವನ್ನು ಸ್ಟಾರ್ ಮೂವೀಸ್, ಸ್ಟಾರ್ ಮೂವೀಸ್ ಎಚ್‌ಡಿ ಮತ್ತು ಸ್ಟಾರ್ ವರ್ಲ್ಡ್ ನಲ್ಲಿ ಹಾಗೂ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ನೇರ ಪ್ರಸಾರ ಮಾಡಲಾಗುವುದು. ಅಕಾಡೆಮಿಯ ಸಾಮಾಜಿಕ ಮಾಧ್ಯಮ ಪುಟಗಳು ಲೈವ್ ಅಪ್ಡೇಟ್ ನೀಡಲಿದೆ.

  ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada

  ಸ್ಟಾರ್ ಮೂವೀಸ್ ಮತ್ತು ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ಸೋಮವಾರ ರಾತ್ರಿ 8: 30ಕ್ಕೆ ಸಮಾರಂಭವನ್ನು ಮತ್ತೆ ಪ್ರಸಾರ ಮಾಡಲಿದೆ.

  English summary
  Oscar 2021 Winners List will Be Announced On Monday Morning 5.30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X