For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ಪ್ರಶಸ್ತಿ ವಿಜೇತ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ

  |

  ಆಸ್ಕರ್ ವಿಜೇತ ಹಾಲಿವುಡ್ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ ಹೊಂದಿದ್ದಾರೆ. ಕೆನಡಾ ಮೂಲದ ಈ ನಟನಿಗೆ 91 ವರ್ಷ ವಯಸ್ಸಾಗಿತ್ತು.

  1965 ರ ಸಾರ್ವಕಾಲಿಕ ಸಿನಿಮಾ 'ದಿ ಸೌಂಡ್ ಆಫ್ ಮ್ಯೂಸಿಕ್' ನಲ್ಲಿ ಕ್ಯಾಪ್ಟನ್ ವೋನ್ ಟ್ರಾಪ್ ಪಾತ್ರದಲ್ಲಿ ನಟಿಸಿದ್ದ ಕ್ರಿಸ್ಟೋಫರ್ ಪ್ಲಮ್ಮರ್, ಇನ್ನೂ ಹಲವಾರು ಸಿನಿಮಾಗಳಲ್ಲಿ ಐಕಾನಿಕ್ ಪಾತ್ರಗಳನ್ನು ನಿರ್ವಹಿಸಿದ್ದರು.

  ಸುಮಾರು ಐದು ದಶಕಗಳ ಕಾಲ ಸಿನಿಮಾಗಳಲ್ಲಿ ನಟಿಸಿದ ಕ್ರಿಸ್ಟೋಫರ್ ಪ್ಲಮ್ಮರ್ ಹಲವಾರು ಅತ್ಯುತ್ತಮ ಸಿನಿಮಾಗಳಲ್ಲಿ ನೆನಪುಳಿವ ಪಾತ್ರಗಳಲ್ಲಿ ನಟಿಸಿದ್ದಾರೆ.

  2012 'ಬಿಗಿನರ್ಸ್' ಸಿನಿಮಾಕ್ಕಾಗಿ ಕ್ರಿಸ್ಟೋಫರ್ ಗೆ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ದೊರಕಿತು. ಆ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ನಟ ಎಂಬ ಖ್ಯಾತಿಗೂ ಕ್ರಿಸ್ಟೊಫರ್ ಪಾತ್ರರಾದರು. ಆಸ್ಕರ್ ಬಂದಾಗ ಕ್ರಿಸ್ಟೋಫರ್ ಗೆ 82 ವರ್ಷ ವಯಸ್ಸು. ಮತ್ತೆ 2018 ರಲ್ಲಿ 'ಆಲ್ ದಿ ಮನಿ ಇನ್‌ ದಿ ವರ್ಲ್ಡ್' ಸಿನಿಮಾಕ್ಕಾಗಿ ಆಸ್ಕರ್ ಗೆ ನಾಮಿನೇಟ್ ಆಗಿದ್ದರು ಆದರೆ ಪ್ರಶಸ್ತಿ ಬರಲಿಲ್ಲ.

  ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada

  ಕ್ರಿಸ್ಟೋಫರ್ ನಿಧನದ ನಂತರ ಅವರ ಮ್ಯಾನೇಜರ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, 'ಕ್ರಿಸ್ಟೋಫರ್ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದರು. ತಮ್ಮ ವೃತ್ತಿಯನ್ನು ಅವರು ಅತಿಯಾಗಿ ಪ್ರೀತಿಸುತ್ತಿದ್ದರು. ಅವರ ಸ್ವವಿಮರ್ಶೆಯ ಹಾಸ್ಯ ಮತ್ತು ಅವರ ಮಾತಿನಲ್ಲಿದ್ದ ಸಂಗೀತ ಅದ್ಭುತವಾದುದು. ಅವರು ರಾಷ್ಟ್ರದ ನಿಧಿಯಾಗಿದ್ದರು. ಅವರು ಕೆನಡಾದ ಮೂಲವನ್ನು ಎಂದೂ ಬಿಟ್ಟಿರಲಿಲ್ಲ್. ಕ್ರಿಸ್ಟೋಫರ್, ತಮ್ಮ ಕಲೆ ಹಾಗೂ ಮಾನವೀಯತೆ ಮೂಲಕ ನಮ್ಮೆಲ್ಲರ ಹೃದಯಗಳನ್ನು ಸ್ಪರ್ಷಿಸಿದ್ದಾರೆ' ಎಂದು ಹೇಳಿದ್ದಾರೆ.

  English summary
  Oscar award winner actor Christopher Plummer died. He is well known for his character in 'Sound Of Music' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X