ಆಸ್ಕರ್ ರೇಸ್ ನಲ್ಲಿ ಶ್ರೇಷ್ಠ ಸಿನಿಮಾವಾಗಿ ಹೊರಹೊಮ್ಮಿದ 'ದಿ ಶೇಪ್ ಆಫ್ ವಾಟರ್'
2018ರ ಆಸ್ಕರ್ ನಲ್ಲಿ 'ದಿ ಶೇಪ್ ಆಪ್ ವಾಟರ್' ಚಿತ್ರ ಅತ್ಯುತ್ತಮ ಸಿನಿಮಾವಾಗಿದೆ. ಈ ಬಾರಿ 13 ಸಿನಿಮಾಗಳು ನಾಮಿನೇಟ್ ಆಗಿದ್ದವು. ಅವುಗಳಲ್ಲಿ 'ದಿ ಶೇಪ್ ಆಫ್ ವಾಟರ್', 'ಡಂಕಿರ್ಕ್' ಮತ್ತು 'ತ್ರಿ ಬಿಲ್ ಬೋರ್ಡ್' ಪ್ರಶಸ್ತಿ ಪಡೆಯುವ ರೇಸ್ ನಲ್ಲಿ ಮುಂಚುಣಿಯಲ್ಲಿದ್ದವು. ಕೊನೆಗೆ 'ದಿ ಶೇಪ್ ಆಫ್ ವಾಟರ್' ಸಿನಿಮಾಗೆ ಪ್ರಶಸ್ತಿಯ ಗೌರವ ಸಿಕ್ಕಿದೆ.
'ದಿ ಶೇಪ್ ಆಫ್ ವಾಟರ್' ಅಮೇರಿಕಾದ ಫ್ಯಾಂಟಸಿ ಡ್ರಾಮಾ ಚಿತ್ರವಾಗಿದೆ. ಆಗಸ್ಟ್ 31, 2017 ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಗುಲ್ಲೆರ್ಮೋ ಡೆಲ್ ಟೊರೊ (Guillermo del Toro) ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಹಿಂದೆ ಸಾಕಷ್ಟು ಫಿಲ್ಮ್ಸ್ ಫೆಸ್ಟಿವಲ್ ಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದ ಈ ಸಿನಿಮಾ ಈಗ ಆಸ್ಕರ್ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ.
ಉಳಿದಂತೆ, 2018ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಸಿನಿಮಾ : ಗುಲ್ಲೆರ್ಮೋ ಡೆಲ್ ಟೊರೊ (Guillermo del Toro)
ಅತ್ಯುತ್ತಮ ನಟ : ಗ್ಯಾರಿ ಓಲ್ಡ್ ಮ್ಯಾನ್ (Gary Oldman)
ಸಿನಿಮಾ : Darkest Hour
ಅತ್ಯುತ್ತಮ ನಟಿ : ಫ್ರಾನ್ಸಿಸ್ ಎಂಸಿದೋರ್ಮ್ಯಾಂಡ್ (Frances McDormand )
ಸಿನಿಮಾ : Three Billboards Outside Ebbing, missouri
ಪೋಷಕ ನಟ : ಸ್ಯಾಮ್ ರಾಕ್ವೆಲ್ (Sam Rockwell)
ಸಿನಿಮಾ : Three Billboards Outside Ebbing, Missouri
ಪೋಷಕ ನಟಿ : ಆಲಿಸನ್ ಜನ್ನಿ (Allison Janney)

ಸಿನಿಮಾ : I Tonya
ತಾಂತ್ರಿಕ ವರ್ಗದ ಪ್ರಮುಖ ಪ್ರಶಸ್ತಿಗಳು
ಸಿನಿಮಾಟೊಗ್ರಾಫಿ : Roger A. Deaking (Blade runner 2029)
ಸ್ಕ್ರೀನ್ ಪ್ಲೇ : James Ivory (Call Me By Your Name)
ಫಿಲ್ಮ್ಸ್ ಎಡಿಟಿಂಗ್ : Lee Smith (Dunkirk)
ವಿಶ್ಯೂವಲ್ ಎಫೆಕ್ಟ್ : John Nelson, Ger Nefzer (Blade Runner 2029)
ಪ್ರೊಡಕ್ಷನ್ ಡಿಸೈನ್ : Paul Denham Austerberry (The Shape Of Water)
ಸೌಂಡ್ ಎಡಿಟಿಂಗ್ : Richard King And Alex Gibson (Dunkirk)
ಕಾಸ್ಟೂಮ್ : Mark Bridges (Phantom Thread)
ಮೇಕಪ್ ಮತ್ತು ಹೇರ್ ಸ್ಟೈಲ್ : Kazuhiro Tsuji, David Malinowski (Darkest Hour)


Click it and Unblock the Notifications











