ಯಾರ ಮುಡಿಗೆ ಆಸ್ಕರ್..? ಹೊರ ಬೀಳಲಿದೆ ನಾಮ ನಿರ್ದೇಶನ ಪಟ್ಟಿ..!
ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಕೌಂಟ್ ಡೌನ್ ಆರಂಭವಾಗಲಿದೆ. ಕಣದಲ್ಲಿ ಯಾರೆಲ್ಲ ಇದ್ದಾರೆ ಅನ್ನುವ ಪ್ರಶ್ನೆಗೆ ಉತ್ತರ ಇನ್ನೇನು ಕೆಲವೇ ಘಂಟೆಯಲ್ಲಿ ಸಿಗಲಿದೆ. ಲಾಸ್ ಏಜಂಲಿಸ್ ನಲ್ಲಿ ಮಾರ್ಚ್ ಹತ್ತರಂದು ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತು ಇಂಚಿಂಚೂ ಮಾಹಿತಿ ಇಂದು ಹೊರ ಬೀಳಲಿದೆ.
ಆಸ್ಕರ್ ರೇಸ್ ನಲ್ಲಿ ಯಾರೆಲ್ಲ ಇದ್ದಾರೆ..? ತಿಳಿದುಕೊಳ್ಳುವುದು ಹೇಗೆ..?
ಆಸ್ಕರ್ ನಾಮ ನಿರ್ದೇಶನ ಸಮಾರಂಭವನ್ನ ದಿ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಆಸಕ್ತ ಸಿನಿ ಪ್ರೇಮಿಗಳು, ಇಂದು ಸಂಜೆ 07 ಘಂಟೆಯಿಂದ ನೋಡಬಹುದು. ಝಾಜಿ ಬೀಟ್ಜ್ ಹಾಗೂ ಜ್ಯಾಕ್ ಕ್ವೈಡ್ ಅದೃಷ್ಟಶಾಲಿಗಳ ಹೆಸರನ್ನ ಪ್ರಕಟಿಸಲಿದ್ದಾರೆ.

ಭಾರತಕ್ಕೆ ಈ ಬಾರಿಯೂ ಸಿಗಲಿದೆಯಾ ಆಸ್ಕರ್..?
ದೇಶ ವಿದೇಶದ ಒಟ್ಟು 264 ಸಿನಿಮಾಗಳು ಆಸ್ಕರ್ ನ ರೇಸ್ ನಲ್ಲಿವೆ. ಆ ಪೈಕಿ ಭಾರತದಿಂದ ವಿಧು ವಿನೋದ್ ಚೋಪ್ರಾ ನಿರ್ದೇಶನದಲ್ಲಿ ಬಂದು ಎಲ್ಲರ ಮನ ಗೆದ್ದ12th Fail ಹಾಗೂ ಎಲ್ಲರ ಹುಬ್ಬೇರಿಸಿದ್ದ ಟೋವಿನೋ ಥಾಮಸ್ ಅಭಿನಯದ ಮಲಯಾಳಂ ಸಿನಿಮಾ 2018 ಅಂತಿಮ ಹಂತ ತಲುಪುವ ನಿರೀಕ್ಷೆ ಇತ್ತು. ಭಾರತಕ್ಕೆ ಮತ್ತೊಂದು ಆಸ್ಕರ್ ಸಿಗುವ ಆಸೆ ಅನೇಕರಲ್ಲಿತ್ತು. ಆದರೆ ದುರಾದೃಷ್ಟ ಎರಡು ಸಿನಿಮಾ ಕೂಡ ಆಸ್ಕರ್ ನ ಅಂಗಳದಿಂದ ಹೊರ ಬಿದ್ದಿವೆ.
10 ವಿಭಾಗದಲ್ಲಿ ಜಿದ್ದಾಜಿದ್ದಿನ ಹೋರಾಟ..!
ಡಾಕ್ಯುಮೆಂಟರಿ ಫೀಚರ್ ಫಿಲ್ಮ್.. ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ .. ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್.. ಮೇಕಪ್ ಹಾಗೂ ಕೇಶವಿನ್ಯಾಸ.. ಹಿನ್ನಲೆ ಸಂಗೀತ.. ಸಂಗೀತಆನಿಮೇಟಡ್ ಶಾರ್ಟ್ ಫಿಲ್ಮ್.. ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ .. ಸೌಂಡ್ ಹಾಗೂ ವಿಶ್ಯುವಲ್ ಎಫೆಕ್ಟ್ ಹೀಗೆ ಹತ್ತು ವಿಭಾಗದಲ್ಲಿ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ತಿದ್ದಾರೆ
ಅಂತಿಮ ಫಲಿತಾಂಶ ಯಾವತ್ತು..?
ಮಾರ್ಚ್ ಹತ್ತರಂದು 96ನೇ ಅಕಾಡೆಮಿ ಪ್ರಶಸ್ತಿ ವಿಜೇತರ ಹೆಸರು ಬಹಿರಂಗವಾಗಲಿದೆ. ಭಾರತದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನ ಮಾರ್ಚ್ ಹನ್ನೊಂದರಂದು ಬೆಳಗಿನ ಜಾವ ಐದು ಘಂಟೆಯಿಂದ ನೋಡಬಹುದು.


Click it and Unblock the Notifications











