twitter
    For Quick Alerts
    ALLOW NOTIFICATIONS  
    For Daily Alerts

    ನಿಜವಾಯ್ತು ನಿರೀಕ್ಷೆ: ಜೋಕರ್ ಗೆ ಸಿಕ್ತು 11 ಆಸ್ಕರ್ ನಾಮಿನೇಷನ್

    By ಜೇಮ್ಸ್ ಮಾರ್ಟಿನ್
    |

    ಹಾಲಿವುಡ್ ನ ಸ್ಟಾರ್ ನಟ ಜಾಕ್ವಿನ್ ಫೀನಿಕ್ಸ್ ಅವರು ಜೋಕರ್ ಚಿತ್ರದ ಅಭಿನಯಕ್ಕಾಗಿ ಇತ್ತೀಚೆಗೆ ಗೋಲ್ಡನ್ ಗ್ಲೋಬ್ಸ್ ಉತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈಗ ಆಸ್ಕರ್ ರೇಸಿನಲ್ಲೂ ಮುಂಚೂಣಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಆಸ್ಕರ್ ನಾಮಾಂಕಣ ಪಟ್ಟಿಯಲ್ಲಿ ಜೋಕರ್ ಚಿತ್ರ 11 ವಿಭಾಗದಲ್ಲಿ ನಾಮಿನೇಷನ್ ಪಡೆದು ಅಭಿಮಾನಿಗಳ ನಿರೀಕ್ಷೆಯನ್ನು ನಿಜವಾಗಿಸಿದೆ.

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಹಲವು ಚಿತ್ರಗಳು ಆಸ್ಕರ್ ಅಂಗಳದಲ್ಲೂ ಮಿಂಚುವ ಸಾಧ್ಯತೆಯಿದೆ. ಒಟ್ಟಾರೆ, 92ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್) ನಾಮಿನೇಷನ್ ಪಡೆದ ಚಿತ್ರಗಳ ಪಟ್ಟಿ ಇಂದು ಪ್ರಕಟವಾಗಿದೆ.

    ಆಸ್ಕರ್ 2019 : ಶ್ರೇಷ್ಠ ಚಿತ್ರ ಗ್ರೀನ್ ಬುಕ್, ನಟಿ ಒಲಿವಿಯಾ, ನಟ ರಾಮಿ ಮಲೇಕ್ ಆಸ್ಕರ್ 2019 : ಶ್ರೇಷ್ಠ ಚಿತ್ರ ಗ್ರೀನ್ ಬುಕ್, ನಟಿ ಒಲಿವಿಯಾ, ನಟ ರಾಮಿ ಮಲೇಕ್

    ಜೋಕರ್, ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್, ಮ್ಯಾರೇಜ್ ಸ್ಟೋರಿ, ದಿ ಐರಿಷ್ ಮ್ಯಾನ್, 1917 ಚಿತ್ರಗಳು ಆಸ್ಕರ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿದ ಚಿತ್ರಗಳೆನಿಸಿಕೊಂಡಿವೆ. ಆದರೆ, ಈ ಎಲ್ಲಾ ಚಿತ್ರಗಳ ನಡುವೆ ದಕ್ಷಿಣ ಕೊರಿಯಾ ಚಿತ್ರವೊಂದು ಉತ್ತಮ ಚಿತ್ರ ವಿಭಾಗದಲ್ಲಿ ನಾಮಿನೇಟ್ ಆಗಿ ಇತಿಹಾಸ ನಿರ್ಮಿಸಿದೆ. ಪ್ಯಾರಸೈಟ್ ಚಿತ್ರವು ಅಂತಾರಾಷ್ಟ್ರೀಯ ಫೀಚರ್ ಚಿತ್ರವಿಭಾಗದಲ್ಲಿ ಜೋಕರ್ ಸೇರಿದಂತೆ ಘಟಾನುಘಟಿ ಚಿತ್ರಗಳ ಸಾಲಿನಲ್ಲಿ ರೇಸಿಗೆ ನಿಂತಿದ್ದು, ಈ ವಿಭಾಗಕ್ಕೆ ಆಯ್ಕೆಯಾದ ಮೊದಲ ದಕ್ಷಿಣ ಕೊರಿಯನ್ ಚಿತ್ರ ಎನಿಸಿಕೊಂಡಿದೆ.

    ಯಾವ ಚಿತ್ರಕ್ಕೆ ಎಷ್ಟು ನಾಮಿನೇಷನ್ ಸಿಕ್ಕಿದೆ?

    ಯಾವ ಚಿತ್ರಕ್ಕೆ ಎಷ್ಟು ನಾಮಿನೇಷನ್ ಸಿಕ್ಕಿದೆ?

    ಜೋಕರ್: 11
    ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್: 10
    ದಿ ಐರಿಷ್ ಮ್ಯಾನ್: 10
    1917:10
    ಪ್ಯಾರಸೈಟ್: 6
    ಮ್ಯಾರೇಜ್ ಸ್ಟೋರಿ: 6
    ಲಿಟ್ಲ್ ವುಮೆನ್: 6
    ಬಾಂಬ್ ಶೆಲ್: 3

    ಉತ್ತಮ ಚಿತ್ರ

    ಜೋಕರ್
    ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್
    ದಿ ಐರಿಷ್ ಮ್ಯಾನ್
    1917
    ಪ್ಯಾರಸೈಟ್
    ಮ್ಯಾರೇಜ್ ಸ್ಟೋರಿ
    ಲಿಟ್ಲ್ ವುಮೆನ್
    ಜೋಜೋ ರಾಬಿಟ್
    ಫೋರ್ಡ್ ವರ್ಸಸ್ ಫೆರಾರಿ

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಜಾಕ್ವಿನ್ ಫೀನಿಕ್ಸ್, ಬ್ರಾಡ್ ಪಿಟ್ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಜಾಕ್ವಿನ್ ಫೀನಿಕ್ಸ್, ಬ್ರಾಡ್ ಪಿಟ್

    ಉತ್ತಮ ನಟಿ

    ರೇನಿ ಜೆಲ್ವೆಗೆರ್- ಜ್ಯೂಡಿ
    ಚಾರ್ಲಿಜ್ ಥೆರಾನ್-ಬಾಬ್ ಶೆಲ್
    ಸ್ಕಾರ್ಲೆಟ್ ಜಾನ್ಸನ್-ಮ್ಯಾರೇಜ್ ಸ್ಟೋರಿ
    ಸಯಿರ್ಸ್ ರೊನಾನ್-ಲಿಟ್ಲ್ ವುಮೆನ್
    ಸಿಂಥಿಯಾ ಎರಿವೊ -ಹ್ಯಾರಿ

    'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು

    ಉತ್ತಮ ನಟ

    ಜಾಕ್ವಿನ್ ಫೀನಿಕ್ಸ್: ಜೋಕರ್
    ಆಡಂ ಡ್ರೈವರ್: ಮ್ಯಾರೇಜ್ ಸ್ಟೋರಿ
    ಲಿಯೋನಾರ್ಡೋ ಡಿ ಕಾಪ್ರಿಯೋ: ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್
    ಅಂಟೋನಿಯೋ ಬಂಡಾರಸ್-ಪೇನ್ ಅಂಡ್ ಗ್ಲೋರಿ
    ಜೊನಾಥನ್ ಪಿರಿಸ್- ದಿ ಟು ಪೋಪ್ಸ್

    ಶ್ರೇಷ್ಠ ನಿರ್ದೇಶಕ

    ಮಾರ್ಟಿನ್ ಸ್ಕೊರ್ಸೆಸೆ- ದಿ ಐರಿಷ್ ಮ್ಯಾನ್
    ಕ್ವೆನ್ಟಿನ್ ಟಾರಾಂಟಿನೋ- ಒನ್ ಅಪನ್ ಎ ಟೈಮ್ ಇನ್ ಹಾಲಿವುಡ್
    ಬಾಂಗ್ ಜೂನ್ ಹೊ- ಪ್ಯಾರಸೈಟ್
    ಟಾಡ್ ಫಿಲಿಫ್-ಜೋಕರ್
    ಸ್ಯಾಮ್ ಮೆಂಡೆಸ್-1917

    ಪೋಷಕ ಪಾತ್ರ ನಟ

    ಬ್ರಾಡ್ ಪಿಟ್ -ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್
    ಅಲ್ ಪಾಸಿನೊ-ದಿ ಐರಿಷ್ ಮ್ಯಾನ್
    ಜೋ ಪೆಸಿ-ದಿ ಐರಿಷ್ ಮ್ಯಾನ್
    ಟಾಮ್ ಹಂಕ್ಸ್- ಎ ಬ್ಯೂಟಿಫುಲ್ ಡೇ ಇನ್ ದಿ ನೈಬರ್ ವುಡ್
    ಅಂಥೋಣಿ ಹಾಪ್ಕಿನ್ಸ್- ದಿ ಟು ಪೋಪ್ಸ್

    ಪೋಷಕ ಪಾತ್ರ ನಟಿ

    ಲಾರಾ ಡೆರ್ನ್ -ಮ್ಯಾರೇಜ್ ಸ್ಟೋರಿ
    ಮಾರ್ಗೊ ರೊಬಿ-ಬಾಂಬ್ ಶೆಲ್
    ಫ್ಲೋರೆನ್ಸ್ ಪುಹ್- ಲಿಟ್ಲ್ ವುಮೆನ್
    ಸ್ಕಾರ್ಲೆಟ್ ಜಾನ್ಸನ್-ಜೋಜೋ ರಾಬಿಟ್
    ಕ್ಯಾಥಿ ಬೇಟ್ಸ್-ರಿಚರ್ಡ್ ಜೆವೆಲ್

    ಅಂತಾರಾಷ್ಟ್ರೀಯ ಫೀಚರ್ ಚಿತ್ರ

    ದಕ್ಷಿಣ ಕೊರಿಯಾದ ಪ್ಯಾರಸೈಟ್
    ಸ್ಪೇನಿನ ಪೇನ್ ಅಂಡ್ ಗ್ಲೋರಿ
    ಫ್ರಾನ್ಸ್- ಲೆಸ್ ಮಿಸೆರೆಬಲ್ಸ್
    ನಾರ್ಥ್ ಮೆಸೆಡೊನಿಯಾದ ಹನಿಲ್ಯಾಂಡ್
    ಪೋಲೆಂಡ್ ನ ಕಾರ್ಪಸ್ ಕ್ರಿಸ್ಟಿ

    ಶ್ರೇಷ್ಠ ಅನಿಮೇಷನ್ ಚಿತ್ರ

    ಟಾಯ್ ಸ್ಟೋರಿ 4
    ಹೌಟು ಟ್ರೈನ್ ಯುವರ್ ಡ್ರ್ಯಾಗನ್ : ದಿ ಹಿಡನ್ ವರ್ಲ್ಡ್
    ಮಿಸ್ಸಿಂಗ್ ಲಿಂಕ್
    ಐ ಲಾಸ್ಟ್ ಮೈ ಬಾಡಿ
    ಕ್ಲಾಸ್

    English summary
    The nominations for the 92nd Academy Awards were announced The Oscar voters loves “Joker” as much as Golden Globes voters did.
    Monday, February 10, 2020, 12:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X