ಲೈಂಗಿಕ ದೌರ್ಜನ್ಯ ಆರೋಪ: ಆಸ್ಕರ್ ವಿಜೇತ ನಿರ್ದೇಶಕನ ಬಂಧನ

ಲೈಂಗಿಕ ದೌರ್ಜನ್ಯ ಆರೋಪದಡಿ ಆಸ್ಕರ್ ವಿಜೇತ ನಿರ್ದೇಶಕ ಪಾಲ್ ಹಾಗಿಸ್ ಅನ್ನು ದಕ್ಷಿಣ ಇಟಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆನಡಾ ಮೂಲದ ಪಾಲ್ ಹಾಗಿಸ್, ಆಸ್ತುನಿಯಲ್ಲಿ ನಡೆಯಲಿರುವ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲೆಂದು ಇಟಲಿಗೆ ತೆರಳಿದ್ದರು. ಅಲ್ಲಿ ಯುವ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.

ಯುವ ವಿದೇಶಿ ಮಹಿಳೆಯನ್ನು ಆಕೆಯ ಇಚ್ಛೆಯ ವಿರುದ್ಧವಾಗಿ ಸತತ ಎರಡು ದಿನ ಅತ್ಯಾಚಾರ ಮಾಡಿರುವ ಆರೋಪವನ್ನು ಪಾಲ್ ಹಾಗಿಸ್ ಮೇರೆ ಹೇರಲಾಗಿದ್ದು, ಆತನ ಬಂಧನ ಸಹ ಆಗಿದೆ. ಮಹಿಳೆಯ ಮೇಲೆ ಒತ್ತಾಯದ ಲೈಂಗಿಕ ದೌರ್ಜನ್ಯ ನಡೆಸಿರುವುದಲ್ಲದೆ ಆಕೆಯನ್ನು ವೈದ್ಯಕೀಯ ಚಿಕಿತ್ಸೆಗೆ ಪೌಲ್ ಒತ್ತಾಯಿಸಿದ್ದರು ಎನ್ನಲಾಗಿದೆ.

Oscar Winner Screenwriter Paul Haggis Arrested In Italy

ಪೌಲ್, ಆ ವಿದೇಶಿ ಮಹಿಳೆಯನ್ನು ಹೋಟೆಲ್ ಒಂದರಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎನ್ನಲಾಗುತ್ತಿದೆ. ಪೌಲ್ ಅನ್ನು ವಿಚಾರಣೆ ನಡೆಸುತ್ತಿದ್ದು, ಪೌಲ್ ಸೂಕ್ತವಾಗಿ ಪೊಲೀಸರಿಗೆ ಸಹಕಾರ ನೀಡುತ್ತಿಲ್ಲ ಎನ್ನಲಾಗಿದೆ. 2006ರಲ್ಲಿ ಬಿಡುಗಡೆ ಆದ 'ಕ್ರಾಶ್' ಸಿನಿಮಾದ ಚಿತ್ರಕತೆಗಾಗಿ ಪಾಲ್ ಹಾಗಿಸ್‌ಗೆ ಆಸ್ಕರ್.

ಕಳೆದ ತಿಂಗಳು 'ಹೌಸ್ ಆಫ್ ಕಾರ್ಡ್ಸ್', 'ಸೂಪರ್ ಮ್ಯಾನ್ ರಿಟರ್ನ್ಸ್' 'ಎಲ್‌ಎ ಕಾನ್ಫಿಡೆನ್ಶಿಯಲ್' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಆಸ್ಕರ್ ವಿಜೇತ ನಟ ಕೆವಿನ್ ಸ್ಪೇಸಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

62 ವರ್ಷದ ಕೆವಿನ್ ಸ್ಪೇಸಿ ಮೂವರು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬ್ರಿಟನ್‌ನಲ್ಲಿ ದೂರು ದಾಖಲಾಗಿದೆ. 'ದಿ ಯೂಶ್ಯುಲ್ ಸಸ್ಪೆಕ್ಟ್', 'ಅಮೆರಿಕನ್ ಬ್ಯೂಟಿ' ಸಿನಿಮಾಗಳಿಗಾಗಿ ಆಸ್ಕರ್ ಪಡೆದಿರುವ ಕೆವಿನ್ ಸ್ಪೇಸಿ ಮೂವರು ಪುರುಷರ ವಿರುದ್ಧ ಗಂಭೀರವಾದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಪ್ರಕರಣ ದಾಖಲಾಗಿತ್ತು. ಲಂಡನ್‌ನ ಮೆಟ್ರೊಪಾಲಿಟಿನ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೆವಿನ್, ಮೂವರು ಪುರುಷರ ವಿರುದ್ಧ ದೌರ್ಜನ್ಯ ಎಸಗಿದ್ದಾರಲ್ಲದೆ, ಅವರಲ್ಲಿ ಒಬ್ಬರ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾರೆ ಎನ್ನಲಾಗಿದೆ.

More from Filmibeat

English summary
Oscar winner screenwriter Paul Haggis arrested in Italy on sexual charges. Paul Haggis won Oscar 2006.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X