For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ಸ್ 2014: ಬೆಸ್ಟ್ ಚಿತ್ರ '12 Years a Slave'

  By Rajendra
  |

  ಕ್ಯಾಲಿಫೋರ್ನಿಯಾದ ನೋಕಿಯಾ ಥಿಯೇಟರ್ ನಲ್ಲಿ ನಡೆಯುತ್ತಿರುವ 2014ನೇ ಸಾಲಿನ ಆಸ್ಕರ್ ಪ್ರಶಸ್ತಿಗಳು ಘೋಷಣೆಯಾಗಿವೆ. ಈ ಬಾರಿಯ ಅತ್ಯುತ್ತಮ ಚಿತ್ರವಾಗಿ '12 Years a Slave' ಆಯ್ಕೆಯಾಗಿದೆ. 86ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.

  ಇನ್ನೊಂದು ಚಿತ್ರ 'ಗ್ರ್ಯಾವಿಟಿ' ಹಾಗೂ '12 Years a Slave' ಚಿತ್ರಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ. ವಾಷಿಂಗ್ಟನ್ ನಲ್ಲಿ ಅಪಹರಣಕ್ಕೆ ಒಳಗಾಗುವ ಹುಡುಗ ಗುಲಾಮಗಿರಿಗೆ ಮಾರಾಟವಾಗುವ ಮನಕಲಕುವ ಕಥೆಯನ್ನು 12 Year a Slave ಚಿತ್ರ ಒಳಗೊಂಡಿದೆ. [ಆಸ್ಕರ್ ಪ್ರಶಸ್ತಿ 2014 : ಪ್ರಶಸ್ತಿ ರೇಸಿನಲ್ಲಿ ಯಾರಿದ್ದಾರೆ?]

  12 ಈಯರ್ಸ್ ಎ ಸ್ಲೇವ್ ಚಿತ್ರವನ್ನು ಸ್ಟೀವ್ ಮ್ಯಾಕ್ ಕ್ವೀನ್ ಆಕ್ಷನ್ ಕಟ್ ಹೇಳಿದ್ದು ಬ್ರ್ಯಾಡ್ ಪಿಟ್ ಸೇರಿದಂತೆ ಹಲವರು ನಿರ್ಮಿಸಿದ್ದಾರೆ. ಆಸ್ಕರ್ಸ್ 2014ರ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

  ಅತ್ಯುತ್ತಮ ಚಿತ್ರ : '12 Years A Slave.'

  ಅತ್ಯುತ್ತಮ ನಟ: ಮ್ಯಾತ್ಯೂ ಮ್ಯಾಕ್ ಕನೋಗೆ (ಚಿತ್ರ: ಡಲ್ಲಾಸ್ ಬಯರ್ಸ್ ಕ್ಲಬ್)

  ಅತ್ಯುತ್ತಮ ನಟಿ: ಕೇಟ್ ಬ್ಲ್ಯಾನ್ ಚೆಟ್ (ಬ್ಲೂ ಜಾಸ್ಮಿನ್)

  ಅತ್ಯುತ್ತಮ ನಿರ್ದೇಶಕ: ಅಲ್ಫೊನ್ಸೋ ಕ್ಯೂರಾನ್ (ಗ್ರ್ಯಾವಿಟಿ)

  ಅತ್ಯುತ್ತಮ ಪೋಷಕ ನಟ: ಜರೇಡ್ ಲೇಟೋ (ಡಲ್ಲಾಸ್ ಬಯರ್ಸ್ ಕ್ಲಬ್)

  ಅತ್ಯುತ್ತಮ ಪೋಷಕ ನಟಿ: Lupita Nyong'o (12 ಈಯರ್ಸ್ ಎ ಸ್ಲೇವ್)

  ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ದಿ ಗ್ರೇಟ್ ಬ್ಯೂಟಿ, ಇಟಲಿ

  ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ ಪ್ಲೇ: 12 Years A Slave

  ಅತ್ಯುತ್ತಮ ಒರಿಜಿನಲ್ ಸ್ಕ್ರೀನ್ ಪ್ಲೇ: Her

  ಅತ್ಯುತ್ತಮ ಅನಿಮೇಟೆಡ್ ಚಿತ್ರ: ಫ್ರೋಜನ್

  ಅತ್ಯುತ್ತಮ ಸೌಂಡ್ ಮಿಕ್ಸಿಂಗ್: ಗ್ರ್ಯಾವಿಟಿ

  ಅತ್ಯುತ್ತಮ ಧ್ವನಿಗ್ರಹಣ: ಗ್ರ್ಯಾವಿಟಿ

  ಅತ್ಯುತ್ತಮ ಮೇಕಪ್ ಹಾಗೂ ಕೇಶವಿನ್ಯಾಸ: ಡಲ್ಲಾಸ್ ಬಯರ್ಸ್ ಕ್ಲಬ್

  ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ಮಿ.ಹಬ್ ಲಾಟ್

  ಅತ್ಯುತ್ತಮ ವಿಶುಯಲ್ ಎಫೆಕ್ಟ್ಸ್: ಗ್ರ್ಯಾವಿಟಿ

  ಅತ್ಯುತ್ತಮ ನಿರ್ಮಾಣ: ದಿ ಗ್ರೇಟ್ ಗಾಟ್ಸ್ ಬಿ

  ಅತ್ಯುತ್ತಮ ಛಾಯಾಗ್ರಹಣ: ಗ್ರ್ಯಾವಿಟಿ

  ಅತ್ಯುತ್ತಮ ಸಂಕಲನ: ಗ್ರ್ಯಾವಿಟಿ

  ಅತ್ಯುತ್ತಮ ಸಂಗೀತ: ಗ್ರ್ಯಾವಿಟಿ

  English summary
  The complete list of winners at Sunday's 86th annual Academy Awards presented by the Academy of Motion Picture Arts and Sciences. 
 Best Picture: '12 Years A Slave.' Best Actor: Matthew McConaughey, 'Dallas Buyers Club.' 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X