ಆಸ್ಕರ್ 2021: ಪ್ರಶಸ್ತಿಗೆ ಮುತ್ತಿಟ್ಟ ಏಷ್ಯಾದ ಮೊದಲ ಮಹಿಳಾ ನಿರ್ದೇಶಕಿ ಕ್ಲೋಯಿ ಜಾವ್
2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿದೆ. ಯೂನಿಯನ್ ಸ್ಟೇಷನ್ ಮತ್ತು ಡಾಲ್ಬಿ ಥಿಯೇಟರ್ ಎರಡು ಕಡೆ ನಡೆಯುತ್ತಿದೆ. ಅತ್ಯುತ್ತಮ ನಿರ್ದೇಶಕಿಯಾಗಿ ಚೀನಾ ಮೂಲದ ಕ್ಲೋಯಿ ಜಾವ್ ಗೆದ್ದುಕೊಂಡಿದ್ದಾರೆ. ಈ ಮೂಲಕ ಆಸ್ಕರ್ ಗೆ ಮುತ್ತಿಟ್ಟ ಏಷಿಯಾ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ದಾಖಲೆ ಬರೆದಿದ್ದಾರೆ.
'ನೋಮಡ್ ಲ್ಯಾಂಡ್' ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ಕ್ಲೋಯಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 93 ವರ್ಷದ ಅಕಾಡೆಮಿ ಅವಾರ್ಡ್ ಇತಿಹಾಸದಲ್ಲಿ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಎರಡನೇ ಮಹಿಳೆ ಕ್ಲೋಯಿ ಜಾವ್ ಆಗಿದ್ದಾರೆ.
ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು 'ಮಿನಾರಿ' ಚಿತ್ರದ ನಟನೆಗೆ ಯೂನ್ ಯುಹ್ ಜಂಗ್ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಡೇನಿಯಲ್ ಕಲುಯಾ ಪಾಲಾಗಿದೆ.

Recommended Video
ಇನ್ನು ಅತ್ಯುತ್ತಮ ಸಾಕ್ಷ್ಯಚಿತ್ರ, 'ಮೈ ಆಕ್ಟೋಪಸ್ ಟೀಚರ್' ಪಾಲಾಗಿದೆ. ಅತ್ಯುತ್ತಮ ಅನಿಮೇಟೆಡ್ ಸಿನಿಮಾ ವಿಭಾಗದಲ್ಲಿ 'ಸೋಲ್' ಚಿತ್ರ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ವಿಭಾಗದಲ್ಲಿ ಅನ್ ರೋತ್ ಪ್ರಶಸ್ತಿ ಪಡೆದ್ದಾರೆ. ಅನ್ ರೋತ್ ಎರಡನೇ ಬಾರಿ ಆಸ್ಕರ್ ಎತ್ತಿ ಹಿಡಿದಿದ್ದಾರೆ. ಇನ್ನೂ ಪ್ರಶಸ್ತಿ ಪಟ್ಟಿ ಪ್ರಕಟವಾಗುತ್ತಿದ್ದು, ಈ ಬಾರಿಯ ಅತ್ಯುತ್ತಮ, ಸಿನಿಮಾ, ನಟ, ನಟಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.


Click it and Unblock the Notifications











