Oscars 2021: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

2021ನೇ ಸಾಲಿನ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ. ಲಾಸ್ ಏಂಜಲೀಸ್ ನ ಯೂನಿಯನ್ ಸ್ಟೇಷನ್ ಮತ್ತು ಡಾಲ್ಬಿ ಥಿಯೇಟರ್ ಎರಡು ಕಡೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. 'ನೋಮಡ್ ಲ್ಯಾಂಡ್' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ನಟ ಪ್ರಶಸ್ತಿ ಆಂಟನಿ ಹಾಪ್ಕಿನ್ಸ್ ಪಾಲಾಗಿದೆ. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿ ಫ್ರಾನ್ಸಿಸ್ ಮೆಕ್ ಡಾರ್ಮಂಡ್ ಗೆದ್ದು ಬೀಗಿದ್ದಾರೆ.

ವಿಶೇಷ ಎಂದರೆ ಈ ಬಾರಿ 'ನೋಮಡ್ ಲ್ಯಾಂಡ್' ಸಿನಿಮಾ ಮೂರು ಪ್ರಮುಖ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಅತ್ಯುತ್ತಮ ಸಿನಿಮಾ ವಿಭಾಗ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಿರ್ದೇಶನ ಈ ಮೂರು ವಿಭಾಗದಲ್ಲಿ ನೋಮಡ್ ಲ್ಯಾಂಡ್ ಪ್ರಶಸ್ತಿ ಪಡೆದಿದೆ.

ನೋಮಡ್ ಲ್ಯಾಂಡ್ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಗೆದ್ದ ಚೀನಾ ಮೂಲದ ಕ್ಲೋಯಿ ಜಾವ್ ದಾಖಲೆ ನಿರ್ಮಿಸಿದ್ದಾರೆ. ಆಸ್ಕರ್ ಗೆದ್ದ ಏಷಿಯಾದ ಮೊದಲ ನಿರ್ದೇಶಕಿ ಎಂದು ಖ್ಯಾತಿಗಳಿಸಿದ್ದಾರೆ.

Oscars 2021: Full list of Oscars Academy Award 2021

ಆಸ್ಕರ್ 2021 ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅತ್ಯುತ್ತಮ ಸಿನಿಮಾ: ನೋಮಡ್ ಲ್ಯಾಂಡ್

ಅತ್ಯುತ್ತಮ ನಿರ್ದೇಶಕಿ: ಕ್ಲೋಯಿ ಜಾವ್ (ನೋಮಡ್ ಲ್ಯಾಂಡ್)

ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್ ಡಾರ್ಮಂಡ್ ( ನೋಮಡ್ ಲ್ಯಾಂಡ್)

ಅತ್ಯುತ್ತಮ ನಟ: ಆಂಟನಿ ಹಾಪ್ಕಿನ್ಸ್ (ಮಾಂಕ್)

ಅತ್ಯುತ್ತಮ ಪೋಷಕ ನಟ: ಡೇನಿಯಲ್ ಕಲುಯಾ (ಜುದಾಸ್ ಅಂಡ್ ದಿ ಬ್ಲ್ಯಾಕ್ ಮೆಸ್ಸಿಹ್)

ಅತ್ಯುತ್ತಮ ಪೋಷಕ ನಟಿ: ಯಾನ್ ಯು ಜಂಗ್ (ಮಿನಾರಿ)

ಅತ್ಯುತ್ತಮ ಕಾಸ್ಟ್ಯಾಮ್ ಡಿಸೈನರ್: ಅನ್ ರೋತ್ (ಮಾ ರೈನಿಸ್ ಬ್ಲ್ಯಾಕ್ ಬಾಟಮ್)

ಅತ್ಯುತ್ತಮ ಅಂತರರಾಷ್ಟ್ರೀಯ ಫ್ಯೂಚರ್ ಸಿನಿಮಾ: ಅನದರ್ ರೌಂಡ್ (ಡ್ಯಾನಿಷ್ ಭಾಷೆ)

ಅತ್ಯುತ್ತಮ ಸಾಕ್ಷ್ಯಚಿತ್ರ: ಮೈ ಆಕ್ಟೋಪಸ್ ಟೀಚರ್

ಅತ್ಯುತ್ತಮ ಅನಿಮೇಟೆಡ್ ಫ್ಯೂಚರ್ ಸಿನಿಮಾ; ಸೋಲ್

ಅತ್ಯುತ್ತಮ ವಿಶ್ವಲ್ ಎಫೆಕ್ಟ್ ಸಿನಿಮಾ: ಟೆನೆಂಟ್

ಅತ್ಯುತ್ತಮ ಛಾಯಾಗ್ರಾಹಣ: ಎರಿಕ್ ಮೆಸ್ಸರ್ಸ್ ಮಿಡ್ಟ್ (ಮಾಂಕ್)

ಅತ್ಯುತ್ತಮ ಹಿನ್ನಲೆ ಸಂಗೀತ: ಸೋಲ್

Recommended Video

ಕೊರೊನಾದಿಂದ ಜನ ಸಾಯ್ತಿಲ್ಲ ಸರ್ಕಾರದ ವ್ಯವಸ್ಥೆಯಿಂದ ಜನ ಸಾಯ್ತಿದ್ದಾರೆ | Oneindia Kannada

ಅತ್ಯುತ್ತಮ ಹಾಡು: ಜುದಾಸ್ ಅಂಡ್ ದಿ ಬ್ಲ್ಯಾಕ್ ಮೆಸ್ಸಿಹ್ ಸಿನಿಮಾದ ಫೈಟ್ ಫಾರ್ ಯೂ

More from Filmibeat

English summary
Oscars 2021: Full list of Oscars Academy Award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X