Oscars 2022 winners list: : ಆಸ್ಕರ್ 2022: ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ!
ಸಿನಿಮಾಗಳಿಗೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗುವ ಆಸ್ಕರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಆಸ್ಕರ್ 2022 ಪ್ರಶಸ್ತಿ ವಿತರಣೆ ಕಾರ್ಯಕ್ರಮವು ಲಾಸ್ ಎಂಜಲ್ಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಜರುಗಿದೆ. ಆಸ್ಕರ್ ರೇಸ್‌ಗೆ ಇಳಿದ ಹಲವು ಚಿತ್ರಗಳು ಪ್ರಶಸ್ತಿ ಪಡೆದುಕೊಂಡು ಬೀಗಿವೆ. ಇನ್ನು ಕೆಲವೊಂದು ನಿರೀಕ್ಷೆ ಮಾಡಿದ ಸಿನಿಮಾಗಳು ನಾಮಿನೇಟ್ ಆಗಿ ಅಚ್ಚರಿ ಮೂಡಿಸಿವೆ.
ಇನ್ನು ಪ್ರಶಸ್ತಿ ಗೆದ್ದವರು ಸಂತಸದಲ್ಲಿ ತೇಲಿದ್ದಾರೆ. 'ಡೂನ್' ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು 'ಟ್ರಾಯ್ ಕಾಟ್ಸರ್' ಪಡೆದುಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ವೇದಿಕೆ ಮೇಲೆ ನಿಂತು ಸಂಜ್ಞೆ ಭಾಷೆಯಲ್ಲಿ ಅವರು ಮಾಡಿದ ಭಾಷಣ ಆಸ್ಕರ್ ಕಾರ್ಯಕ್ರಮದಲ್ಲಿ ಗಮನಾರ್ಹವಾಗಿತ್ತು. 94ನೇ ಆಸ್ಕರ್ ಪ್ರಶಸ್ತಿ 'ಕೊಡ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡು ಈ ಮೂಲಕ ದೊಡ್ಡ ಮಟ್ಟದ ಗೆಲುವು ಸಾಧಿಸಿದೆ. ಅತ್ಯುತ್ತಮ ಪೋಷಕ ನಟನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಶ್ರವಣದೋಷವುಳ್ಳ 'ಟ್ರಾಯ್ ಕಾಟ್ಸರ್.'
ಹಲವು ಚಿತ್ರಗಳು ಆಸ್ಕರ್‌ಗೆ ನಾಮಿನೇಟ್ ಆಗಿದ್ದು, ಕೆಲವು ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿದೆ. ಹಾಗಿದ್ದರೆ ಈ ಬಾರಿಯ ಆಸ್ಕರ್ ರೇಸ್‌ನಲ್ಲಿ ಯಾವೆಲ್ಲಾ ಸಿನಿಮಾಗಳು ಪ್ರಶಸ್ತಿಗೆ ಗೆದ್ದು ಬೀಗಿವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಆಸ್ಕರ್‌ನಲ್ಲಿ ಅತ್ಯುತ್ತಮ ಚಲನಚಿತ್ರವಾಗಿ ಹೊರ ಹೊಮ್ಮಿದೆ 'ಕೊಡಾ'. ಇನ್ನು ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿದ್ದಾರೆ 'ಜೇನ್ ಕ್ಯಾಂಪಿಯನ್' 'ದಿ ಪವರ್ ಆಫ್ ದಿ ಡಾಗ್' ಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಟಯಾಗಿ 'ದಿ ಐಸ್ ಆಫ್ ಟ್ಯಾಮಿ ಫಾಯೆ' ಚಿತ್ರಕ್ಕೆ ಜೆಸ್ಸಿಕಾ ಚಾಸ್ಟೈನ್ ಪ್ರಶ್ತಿ ಬಾಚಿ ಕೊಂಡಿದ್ದಾರೆ. ಅತ್ಯುತ್ತಮ ನಟನ ಪ್ರಶಸ್ತಿ 'ವಿಲ್ ಸ್ಮಿತ್' ಮುಡಿಗೇರಿದೆ. ಅದು 'ಕಿಂಗ್ ರಿಚರ್ಡ್' ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ!
ಅತ್ಯುತ್ತಮ ಚಲನಚಿತ್ರ: 'ಕೊಡಾ'
ಅತ್ಯುತ್ತಮ ನಿರ್ದೇಶಕ: ಜೇನ್ ಕ್ಯಾಂಪಿಯನ್ (ದಿ ಪವರ್ ಆಫ್ ದಿ ಡಾಗ್)
ಅತ್ಯುತ್ತಮ ನಟಿ: ಜೆಸ್ಸಿಕಾ ಚಾಸ್ಟೈನ್ (ದಿ ಐಸ್ ಆಫ್ ಟ್ಯಾಮಿ ಫಾಯೆ)
ಅತ್ಯುತ್ತಮ ನಟ: ವಿಲ್ ಸ್ಮಿತ್ (ಕಿಂಗ್ ರಿಚರ್ಡ್)
ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್ (ವೆಸ್ಟ್ ಸೈಡ್ ಸ್ಟೋರಿ)
ಅತ್ಯುತ್ತಮ ಪೋಷಕ ನಟ: ಟ್ರಾಯ್ ಕಾಟ್ಸೂರ್ (ಕೋಡಾ)
ಅತ್ಯುತ್ತಮ ಮೂಲ ಚಿತ್ರಕಥೆ: ಬೆಲ್‌ಫಾಸ್ಟ್
ಅತ್ಯುತ್ತಮ ಚಿತ್ರಕಥೆ ಅಳವಡಿಕೆಯ ಸಿನಿಮಾ: ಕೋಡಾ
ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ: ಡ್ರೈವ್ ಮೈ ಕಾರ್ (ಜಪಾನ್)
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಎನ್ಕಾಂಟೊ
ಅತ್ಯುತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ದಿ ಕ್ವೀನ್ ಆಫ್ ಬಾಸ್ಕೆಟ್‌ಬಾಲ್
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ದಿ ವಿಂಡ್‌ಶೀಲ್ಡ್ ವೈಪರ್
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ: ದಿ ಲಾಂಗ್ ಗುಡ್‌ಬೈ
ಅತ್ಯುತ್ತಮ ಮೂಲ ಸಂಗೀತ: ಡ್ಯೂನ್
ಅತ್ಯುತ್ತಮ ಮೂಲ ಹಾಡು: ನೋ ಟೈಮ್ ಟು ಡೈ (ನೋ ಟೈಮ್ ಟು ಡೈ)
ಅತ್ಯುತ್ತಮ ಛಾಯಾಗ್ರಹಣ: ಡ್ಯೂನ್
ಅತ್ಯುತ್ತಮ ವಸ್ತ್ರ ವಿನ್ಯಾಸ: ಕ್ರುಯೆಲ್ಲಾ
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಡ್ಯೂನ್
ಅತ್ಯುತ್ತಮ ಮೇಕಪ್ ಮತ್ತು ಕೂದಲು: ದಿ ಐಸ್ ಆಫ್ ಟಮ್ಮಿ ಫಾಯೆ
ಅತ್ಯುತ್ತಮ ಶಬ್ಧ ನಿರ್ವಹಣೆ: ಡ್ಯೂನ್
ಅತ್ಯುತ್ತಮ ಚಲನಚಿತ್ರ ಸಂಕಲನ: ಡ್ಯೂನ್


Click it and Unblock the Notifications











