For Quick Alerts
  ALLOW NOTIFICATIONS  
  For Daily Alerts

  Oscars: ಆಸ್ಕರ್ ಗೆದ್ದ ಮೂಗನ 'ಮಾತುಗಳ' ನೀವೂ ಕೇಳಿ

  |

  ಭಾನುವಾರ ರಾತ್ರಿ ಲಾಸ್ ಎಂಜಲ್ಸ್‌ನಲ್ಲಿ ನಡೆದ 94ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಕುಳಿತಿದ್ದವರೆಲ್ಲ ಎದ್ದುನಿಂತು ಎರಡು ಕೈಗಳನ್ನು ಮೇಲಕ್ಕೆತ್ತಿ ಗಾಳಿಯಲ್ಲಿ ಅಲ್ಲಾಡಿಸಲು ಆರಂಭಿಸಿದರು. ಆಗ ವೇದಿಕೆಯತ್ತ ಸೂಟು ಧರಿಸಿ, ಹ್ಯಾಟ್ ಧರಿಸಿ ವಿನಯದಿಂದ ಸಣ್ಣ ಕಿರುನಗೆ ಬೀರುತ್ತಾ ವ್ಯಕ್ತಿಯೊಬ್ಬರು ಹೆಜ್ಜೆ ಹಾಕಿದರು ಅವರ ಹೆಸರು ಟ್ರಾಯ್ ಕೊಟ್ಸರ್.

  ಟ್ರಾಯ್ ಕೊಟ್ಸರ್, 'ಕೋಡಾ' ಸಿನಿಮಾದಲ್ಲಿನ ತಮ್ಮ ಅತ್ಯುತ್ತಮ ನಟನೆಗೆ ಆಸ್ಕರ್ ಗೆದ್ದಿದ್ದರು. ಪ್ರತಿ ವರ್ಷವೂ ಹಲವರು ಆಸ್ಕರ್ ಗೆಲ್ಲುತ್ತಾರೆ ಅದರಲ್ಲಿ ವಿಶೇಷತೆ ಏನಿಲ್ಲ, ಆದರೆ ಟ್ರಾಯ್ ಕೊಟ್ಸರ್ ಆಸ್ಕರ್‌ ಗೆದ್ದಿದ್ದು ಸಾಮಾನ್ಯ ಸಂಗತಿಯಲ್ಲ. ಏಕೆಂದರೆ ಟ್ರಾಯ್ ಕೊಟ್ಸರ್ಗೆ ಮಾತನಾಡಲು ಬಾರದು, ಕಿವಿಯೂ ಕೇಳದು.

  Oscars 2022: ಹಲ್ಲೆ ಮಾಡಿದ್ದಕ್ಕೆ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ ನಟ ಸ್ಮಿತ್Oscars 2022: ಹಲ್ಲೆ ಮಾಡಿದ್ದಕ್ಕೆ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ ನಟ ಸ್ಮಿತ್

  ಆಸ್ಕರ್ ಪ್ರಶಸ್ತಿಯನ್ನು ಪಡೆದ ಟ್ರಾಯ್ ಕೊಟ್ಸರ್ ಈ ಸಾಧನೆ ಮಾಡಿದ ಮೊದಲ ಕಿವುಡ ಮತ್ತು ಮೂಗ ಪುರುಷ. ಈ ಮೊದಲು ಮಾತು ಬಾರದ, ಕಿವಿ ಕೇಳದ ಮಹಿಳೆಯೊಬ್ಬರು ಈ ಸಾಧನೆ ಮಾಡಿದ್ದರು. ಆಸ್ಕರ್ ಪಡೆದ ಬಳಿಕ ಟ್ರಾಯ್ ಕೊಟ್ಸರ್ ಮಾಡಿದ 'ಭಾಷಣ' ಇಡೀ ಕಾರ್ಯಕ್ರಮದ ಅತಿ ಭಾವುಕ ಕ್ಷಣ. ಮಾತು ಬಾರದ ವ್ಯಕ್ತಿ ಆಡಿದ 'ಮಾತು'ಗಳು ಇಡೀ ಸಭಾಂಗಣವನ್ನು ಎರಡು ನಿಮಿಷಗಳ ಕಾಲ ಮಂತ್ರಮುಗ್ಧಗೊಳಿಸಿಬಿಟ್ಟಿತು. ಟ್ರಾಯ್ ಮಾತುಗಳು ನಗಿಸಿತು, ಅಳಿಸಿತು, ಜಾಗೃತಗೊಳಿಸಿತು. ಟ್ರಾಯ್ ಕೊಟ್ಸರ್ ಭಾಷಣದ ಅಕ್ಷರ ರೂಪ ಇಲ್ಲಿ ನಿಮಗಾಗಿ...

  ''ಅಮೆರಿಕ ಅಧ್ಯಕ್ಷರಿಗೆ ಬೈಗುಳದ ಸಂಜ್ಞೆ ಕಲಿಸುವ ಹುಮ್ಮಸ್ಸಿನಲ್ಲಿದ್ದೆ''

  ''ಅಮೆರಿಕ ಅಧ್ಯಕ್ಷರಿಗೆ ಬೈಗುಳದ ಸಂಜ್ಞೆ ಕಲಿಸುವ ಹುಮ್ಮಸ್ಸಿನಲ್ಲಿದ್ದೆ''

  ಮಾತು ಬಾರದ ಟ್ರಾಯ್ ಕೊಟ್ಸರ್ ಸಂಜ್ಞಾ ವಿಧಾನದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಅದನ್ನು ಅನುವಾದಕರೊಬ್ಬರು ಮಾತಿನ ಮೂಲಕ ಹೇಳಿದರು. ''ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾನಿಂದು ನಿಮ್ಮ ಮುಂದೆ ನಿಲ್ಲುವುದು ಬಹಳ ಗೌರವ, ಆನಂದ ತಂದಿದೆ. ನಮ್ಮ ಸಿನಿಮಾ 'ಕೋಡಾ' ವಿಶ್ವದೆಲ್ಲೆಡೆ ಪಸರಿಸಿರಿದೆ, ನಮ್ಮ ಸಿನಿಮಾ ವೈಟ್ ಹೌಸ್‌ ಅನ್ನು ಪ್ರವೇಶ ಮಾಡಿದೆ. ನಮ್ಮನ್ನೆಲ್ಲ ವೈಟ್ ಹೌಸ್‌ಗೆ ಆಹ್ವಾನಿಸಲಾಗಿತ್ತು. ನಾವು ಅಲ್ಲಿಗೆ ಹೋಗಿ ಅಧ್ಯಕ್ಷ ಜೋ ಬಿಡನ್ ಅನ್ನು ಭೇಟಿ ಮಾಡಿದೆವು. ನಾನು ಅವರಿಗೆ ನನ್ನ ಮೂಗ ಸಂಜ್ಞೆಗಳಲ್ಲಿ ಕೆಲವು ಬೈಗುಳದ ಸಂಜ್ಞೆ ಕಲಿಸಲು ಉತ್ಸುಕನಾಗಿದ್ದೆ. ಆದರೆ ನಮ್ಮ ನಿರ್ದೇಶಕರು ನನ್ನನ್ನು ತಡೆದುಬಿಟ್ಟರು'' ಎಂದು ಜೋಕ್ ಮಾಡಿದರು.

  Oscars 2022 winners list: : ಆಸ್ಕರ್ 2022: ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ!Oscars 2022 winners list: : ಆಸ್ಕರ್ 2022: ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ!

  ''ನಮ್ಮ ಪ್ರಪಂಚವನ್ನು, ಕೇಳುಗ ಪ್ರಪಂಚಕ್ಕೆ ಹತ್ತಿರ ತಂದಿದ್ದೀರಿ''

  ''ನಮ್ಮ ಪ್ರಪಂಚವನ್ನು, ಕೇಳುಗ ಪ್ರಪಂಚಕ್ಕೆ ಹತ್ತಿರ ತಂದಿದ್ದೀರಿ''

  ''ಈ ಅದ್ಭುತ ಸಂದರ್ಭವನ್ನು ನಾನು ವಿಶ್ವದ ಎಲ್ಲ ಮೂಗ-ಕಿವುಡ ಕಲಾವಿದರಿಗೆ ವೇದಿಕೆ ಕಲ್ಪಿಸಿರುವ ರಂಗಭೂಮಿಗೆ ಧನ್ಯವಾದ ಹೇಳಲು ಬಳಸುತ್ತೇನೆ. ನಾನು ನನ್ನ ನಟನೆಯನ್ನು ಉತ್ತಮಪಡಿಸಿಕೊಳ್ಳಲು ರಂಗಭೂಮಿ ನನಗೆ ಬಹಳ ಸಹಾಯ ಮಾಡಿದೆ'' ಎಂದರು. ಮುಂದುವರೆದು, ''ಇತ್ತೀಚೆಗೆ ನಾನು ನಿರ್ದೇಶಕ ಸ್ಟಿಫನ್ ಸ್ಪೀಲ್‌ಬರ್ಗ್ ಅವರ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು ಬರೆದಿದ್ದು, ಉತ್ತಮ ಸಿನಿಮಾ ನಿರ್ದೇಶಕನಿಗೆ ಇರಬೇಕಾದ ಮೊದಲ ಗುಣ ಒಳ್ಳೆಯ ಸಂವಹನ ಅಂತೆ. ನಮ್ಮ ನಿರ್ದೇಶಕ ಶಾನ್ ಹೇಡರ್ ಅತ್ಯುತ್ತಮ ಸಂವಹನಕಾರ. ಏಕೆಂದರೆ ಅವರು ಮೂಗ-ಕಿವುಡ ಪ್ರಪಂಚವನ್ನು ಕಿವಿ ಇರುವ, ಮಾತು ಬರುವ ಪ್ರಪಂಚಕ್ಕೆ ತಂದಿದ್ದಾರೆ. ನೀವು ನಮ್ಮ ನಡುವಿನ ಸೇತುವೆ ಆಗಿದ್ದೀರಿ. ಆ ಸೇತುವೆಗೆ ನಿಮ್ಮದೇ ಹೆಸರಿಡಲಾಗುತ್ತದೆ. ಶಾನ್ ಹೇಡರ್ ಬ್ರಿಡ್ಜ್ ಎಂದು ಹಾಲಿವುಡ್‌ನ ಜನ ಆ ಸೇತುವೆಯನ್ನು ಕರೆಯಲಿದ್ದಾರೆ'' ಎಂದು 'ಕೋಡಾ' ನಿರ್ದೇಶಕರನ್ನು ಹೊಗಳಿದರು ಟ್ರಾಯ್ ಕೊಟ್ಸರ್.

  ತಂದೆಯನ್ನು ನೆನಪಿಸಿಕೊಂಡ ಟ್ರಾಯ್

  ತಂದೆಯನ್ನು ನೆನಪಿಸಿಕೊಂಡ ಟ್ರಾಯ್

  ''ನನ್ನ ತಂದೆ, ನಮ್ಮ ಕುಟುಂಬದ ಅತ್ಯುತ್ತಮ ಸಂಜ್ಞೆಕಾರರಾಗಿದ್ದರು. ಅದ್ಭುತವಾಗಿ ಅವರು ಸಂಜ್ಞೆಗಳ ಮೂಲಕ ಮಾತನಾಡುತ್ತಿದ್ದರು. ಆದರೆ ಅವರಿಗೆ ಆದ ಅಪಘಾತದಲ್ಲಿ ಅವರ ದೇಹದ ಬಹುಭಾಗ ಪಾರ್ಶ್ವವಾಯುವಿಗೆ ತುತ್ತಾಗಿ ಸಂಜ್ಞೆ ಮಾಡಲಾಗದಂತಾಯಿತು. ನಾನು ನಮ್ಮ ತಂದೆಯಿಂದ ಸಾಕಷ್ಟು ಕಲಿತಿದ್ದೇನೆ. ಅವರನ್ನು ನಾನು ಸದಾ ಪ್ರೀತಿಸುತ್ತೇನೆ. ನೀವು ನನ್ನ ಹೀರೋ. ಜೊತೆಗೆ ನನ್ನ ಅಭಿಮಾನಿಗಳಾದ ನನ್ನ ಪತ್ನಿ ಮತ್ತು ನನ್ನ ಇಬ್ಬರು ಮಕ್ಕಳಿಗೆ ಧನ್ಯವಾದ ಮತ್ತು ನನ್ನ ಊರಿನ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ'' ಎಂದು ಭಾವುಕರಾದರು ಟ್ರಾಯ್.

  Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್Oscars 2022 : ಆಸ್ಕರ್ಸ್ ವೇದಿಕೆ ಮೇಲೆ ಸಹ ನಟನ ಮೇಲೆ ಹಲ್ಲೆ ಮಾಡಿದ ವಿಲ್ ಸ್ಮಿತ್

  ಆಕಾಶಕ್ಕೆ ಆಸ್ಕರ್ ತೋರಿಸಿದ ಟ್ರಾಯ್

  ಆಕಾಶಕ್ಕೆ ಆಸ್ಕರ್ ತೋರಿಸಿದ ಟ್ರಾಯ್

  ''ನನಗೆ ಸಿಕ್ಕಿರುವ ಈ ಪ್ರಶಸ್ತಿ ಇಡೀ ಮೂಗ ಮತ್ತು ಕಿವುಡು ಸಮುದಾಯಕ್ಕೆ, 'ಕೋಡಾ' ಸಮುದಾಯಕ್ಕೆ ಮತ್ತು ಅಂಗವಿಕಲ ಸಮುದಾಯಕ್ಕೆ ಅರ್ಪಿಸುತ್ತೇನೆ. ಇದು ನಮ್ಮ ಕ್ಷಣ. ನನ್ನ ತಾಯಿ, ತಂದೆ ನನ್ನ ಸಹೋದರ ಮಾರ್ಕ್‌ ಇವರುಗಳು ಇಂದು ಈ ಭೂಮಿಯ ಮೇಲೆ ಇಲ್ಲ. ಆದರೆ ಅವರು ನನ್ನನ್ನು ನೋಡುತ್ತಿದ್ದಾರೆ. ನೋಡಿ ನಾನು ಎಷ್ಟು ಎತ್ತರಕ್ಕೆ ಏರಿದ್ದೇನೆ. ಎಲ್ಲಿಗೆ ಬಂದು ನಿಂತಿದ್ದೇನೆ'' ಎಂದ ಟ್ರಾಯ್ ಆಸ್ಕರ್ ಪ್ರಶಸ್ತಿ ಹಿಡಿದು ಆಕಾಶದೆಡೆಗೆ ತೋರಿಸಿದರು. ಟ್ರಾಯ್ ಭಾಷಣ ಮುಗಿದ ಮೇಲೆ ಮತ್ತೆ ಎದ್ದು ನಿಂತ ಸಭಿಕರು ಭಾರಿ ಕರತಾಡನ ಮಾಡಿದರು. ಟ್ರಾಯ್ ನಟಿಸಿರುವ 'ಕೋಡಾ' ಸಿನಿಮಾ ಈ ವರ್ಷದ ಅತ್ಯುತ್ತಮ ಸಿನಿಮಾ ಆಗಿಯೂ ಆಯ್ಕೆ ಆಗಿದೆ.

  English summary
  Deaf actor Troy Kotsur heart touching Oscar acceptance speech. He is the first male deaf actor to receive Oscar award.
  Tuesday, March 29, 2022, 11:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X