twitter
    For Quick Alerts
    ALLOW NOTIFICATIONS  
    For Daily Alerts

    Oscars 2022 Winners: ಆಸ್ಕರ್ 2022: ಪ್ರಶಸ್ತಿ ಪಡೆದ ಚಿತ್ರಗಳ ಪಟ್ಟಿ, ಇತಿಹಾಸ ನಿರ್ಮಿಸಿದ ಟ್ರಾಯ್ ಕಾಟ್ಸರ್

    |

    ಸಿನಿಮಾಕ್ಕೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗುವ ಆಸ್ಕರ್ಸ್ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗುತ್ತಿದೆ.

    ಆಸ್ಕರ್ಸ್ 2022 ಪ್ರಶಸ್ತಿ ವಿತರಣೆ ಕಾರ್ಯಕ್ರಮವು ಲಾಸ್ ಎಂಜಲ್ಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಚಾಲ್ತಿಯಲ್ಲಿದೆ. ಕೆಲವು ಸಿನಿಮಾಗಳಿಗೆ ಈಗಾಗಲೇ ಪ್ರಶಸ್ತಿ ವಿತರಣೆ ಮಾಡಲಾಗಿದೆ. ನಟ ಟ್ರಾಯ್ ಕಾಟ್ಸರ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದ್ದು, ಆ ಮೂಲಕ ಇತಿಹಾಸ ಸೃಷ್ಟಿಯಾಗಿದೆ.

    KGFverse: ಮಾರ್ಚ್ 30ಕ್ಕೆ 'KGF verse' ರಿಲೀಸ್: ಕೆಜಿಎಫ್ ತಂಡದ ಹೊಸ ಸಾಹಸವೇನು? KGFverse: ಮಾರ್ಚ್ 30ಕ್ಕೆ 'KGF verse' ರಿಲೀಸ್: ಕೆಜಿಎಫ್ ತಂಡದ ಹೊಸ ಸಾಹಸವೇನು?

    'ಡೂನ್' ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಟ್ರಾಯ್ ಕಾಟ್ಸರ್ ಪಡೆದುಕೊಂಡಿದ್ದಾರೆ. ಸಿನಿಮಾ ಇತಿಹಾಸದಲ್ಲಿ ಆಸ್ಕರ್ ಪಡೆದ ಎರಡನೇ ಮಾತುಬಾರದ ಮೂಕ ವ್ಯಕ್ತಿ ಅವರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ವೇದಿಕೆ ಮೇಲೆ ನಿಂತು ಸಂಜ್ಞೆ ಭಾಷೆಯಲ್ಲಿ ಅವರು ಮಾಡಿದ ಭಾಷಣ ಆಸ್ಕರ್ ಕಾರ್ಯಕ್ರಮದಲ್ಲಿರುವವರನ್ನು ಆರ್ದ್ರಗೊಳಿಸಿದೆ.

    Oscars 2022: Here Is The Winners List Update

    ಭಾರತದ 'ರೈಟಿಂಗ್ ವಿಥ್ ಫೈರ್' ಡಾಕ್ಯುಮೆಂಟರಿ ಸಿನಿಮಾವು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಆದರೆ ಅದಕ್ಕೆ ಪ್ರಶಸ್ತಿ ದೊರೆತಿಲ್ಲ. ಅತ್ಯುತ್ತಮ ಡಾಕ್ಯುಮೆಂಟರಿ ವಿಭಾಗದಲ್ಲಿ 'ದಿ ಸಮ್ಮರ್ ಆಫ್‌ ಸೋಲ್' ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಬಾಚಿಕೊಂಡಿದೆ.

    ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯು ಅರಿಯಾನಾ ಡಿಬೋಸ್ ಪಡೆದುಕೊಂಡಿದ್ದಾರೆ. 'ವೆಸ್ಟ್ ಸೈಡ್ ಸ್ಟೋರಿಸ್' ಸಿನಿಮಾಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

    ಅತ್ಯುತ್ತಮ ಶಬ್ದ ಹಾಗೂ ಸಂಗೀತ ಎರಡೂ ವಿಭಾಗದಲ್ಲಿ 'ಡೂನ್' ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. 'ಡೂನ್' ಸಿನಿಮಾವು ಹಲವು ಪ್ರಶಸ್ತಿಗಳನ್ನು ಇಂದು ಬಾಚಿಕೊಂಡಿದೆ. 'ದಿ ಪವರ್ ಆಫ್ ಡಾಗ್' ಸಿನಿಮಾ 12 ವಿಭಾಗದಲ್ಲಿ ನಾಮಿನೇಟ್ ಆಗಿತ್ತು ಆದರೆ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲಲು ವಿಫಲವಾಗಿದೆ.

    ಅತ್ಯುತ್ತಮ ಅಡಾಪ್ಟೆಡ್ ಚಿತ್ರಕತೆ ಪ್ರಶಸ್ತಿಯನ್ನು 'ಕೋಡಾ' ಸಿನಿಮಾ ಪಡೆದುಕೊಂಡಿತು. ಅತ್ಯುತ್ತಮ ಒರಿಜಿನಲ್ ಚಿತ್ರಕತೆ ಪ್ರಶಸ್ತಿಯನ್ನು 'ಬೆಲ್‌ಫಾಸ್ಟ್' ಸಿನಿಮಾ ಪಡೆದುಕೊಂಡಿದೆ.

    ಅತ್ಯುತ್ತಮ ಸಿನಿಮಾ ಎಡಿಟಿಂಗ್ ಪ್ರಶಸ್ತಿಯನ್ನು 'ಡ್ಯೂನ್' ಸಿನಿಮಾ ಪಡೆದುಕೊಂಡಿತು. ಅತ್ಯುತ್ತಮ ಸಂಗೀತ ಪ್ರಶಸ್ತಿ ಸಹ 'ಡ್ಯೂನ್' ಸಿನಿಮಾಕ್ಕೆ ನೀಡಲಾಯಿತು. ಅತ್ಯುತ್ತಮ ಲೈವ್ ಆಕ್ಷನ್ ಕಿರು ಚಿತ್ರ ಪ್ರಶಸ್ತಿಯನ್ನು ರಿಜ್ ಅಹ್ಮದ್ ಪಡೆದುಕೊಂಡರು ತಮ್ಮ 'ದಿ ಲಾಂಗ್ ಗುಡ್‌ ಬೈ' ಸಿನಿಮಾಕ್ಕೆ. ಅತ್ಯುತ್ತಮ ಅನಿಮೇಟೆಡ್ ಕಿರು ಸಿನಿಮಾ ಪ್ರಶಸ್ತಿಯನ್ನು 'ದಿ ವಿಂಡ್‌ಶೀಲ್ಡ್ ವೈಪರ್' ಸಿನಿಮಾ ಪಡೆದುಕೊಂಡಿದೆ. ಅತ್ಯುತ್ತಮ ಅನಿಮೇಟೆಡ್ ಸಿನಿಮಾ ಪ್ರಶಸ್ತಿಯು 'ಎಂಕಾಂಟೊ' ಸಿನಿಮಾಕ್ಕೆ ನೀಡಲಾಗಿದೆ.

    ಅತ್ಯುತ್ತಮ ವಿದೇಶಿ ಸಿನಿಮಾ ಪ್ರಶಸ್ತಿಯನ್ನು ಜಪಾನ್‌ನ 'ಡ್ರೈವ್ ಮೈ ಕಾರ್' ಪಡೆದುಕೊಂಡಿತು. ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿಯನ್ನು ಜೆನ್ನಿ ಬಿಯೆನ್ ಪಡೆದುಕೊಂಡಿದ್ದು 'ಕ್ರುಯೆಲ್' ಸಿನಿಮಾಕ್ಕೆ.

    English summary
    Oscars 2022: Here is the list of winners list and movies list that won Oscars 2022.
    Monday, March 28, 2022, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X