twitter
    For Quick Alerts
    ALLOW NOTIFICATIONS  
    For Daily Alerts

    Breaking: ಆಸ್ಕರ್‌ಗೆ ನಾಮಿನೇಟ್ ಆದ ಭಾರತದ ಡಾಕ್ಯುಮೆಂಟರಿ, 'ಜೈ ಭೀಮ್‌'ಗೆ ನಿರಾಸೆ

    |

    ಆಸ್ಕರ್‌ 2022ಕ್ಕೆ ಭಾರತದ ಡಾಕ್ಯುಮೆಂಟರಿ ಒಂದು ಅಂತಿಮ ಹಂತಕ್ಕೆ ಆಯ್ಕೆ ಆಗಿದೆ. ಆಸ್ಕರ್‌ 2022ರ ನಾಮಿನೇಷನ್ ಪಟ್ಟಿಯನ್ನು ಘೋಷಿಸಲಾಗಿದ್ದು, ಭಾರತದ 'ರೈಟಿಂಗ್ ವಿಥ್ ಫೈರ್' ಆಸ್ಕರ್‌ನ ಅಂತಿಮ ಹಂತಕ್ಕೆ ಆಯ್ಕೆಯಾಗಿದೆ.

    'ರೈಟಿಂಗ್ ವಿಥ್ ಫೈರ್' ಸಾಕ್ಷ್ಯಚಿತ್ರವನ್ನು ಸುಶ್ಮಿತಾ ಘೋಷ್, ರಿನು ಥಾಮಸ್ ನಿರ್ದೇಶನ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರೇ ನಡೆಸುವ ಪತ್ರಿಕೆ ಕುರಿತಾದ ಸಾಕ್ಷ್ಯಚಿತ್ರ ಇದಾಗಿದ್ದು, ಪತ್ರಿಕೆ ಪ್ರಾರಂಭಕ್ಕೆ ಕಾರಣ, ವರದಿ ತರಲು ಅವರು ಪಡುವ ಕಷ್ಟಗಳು, ವರದಿಗಾರಿಕೆ ವಿಧಾನ. ವರದಿಗಾರ್ತಿಯರ ವೈಯಕ್ತಿಕ ಜೀವನ, ಆದರ್ಶ ಇನ್ನಿತರೆ ವಿಷಯಗಳ ಮೇಲೆ ಈ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿದೆ.

    ಒಟ್ಟು 115 ಸಾಕ್ಷ್ಯಚಿತ್ರಗಳು ಈ ಬಾರಿ ಆಸ್ಕರ್‌ಗೆ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 15 ಸಾಕ್ಷ್ಯಚಿತ್ರಗಳಷ್ಟೆ ನಾಮಿನೇಷನ್‌ ರೇಸ್‌ನಲ್ಲಿ ಉಳಿದುಕೊಂಡವು ಅದರಲ್ಲಿ ಕೊನೆಯ ಹಂತಕ್ಕೆ ಐದು ಸಾಕ್ಷ್ಯಚಿತ್ರಗಳು ಆಯ್ಕೆಗೊಂಡಿದ್ದು ಅದರಲ್ಲಿ ಒಂದು ಭಾರತದ 'ರೈಟಿಂಗ್ ವಿಥ್ ಫೈರ್'.

    Oscars 2022: Indian Documentary Writing With Fire Gets Nominated
    ಆಸ್ಕರ್‌ನ ನಾಮಿನೇಷನ್ ರೇಸ್‌ನಲ್ಲಿ ತಮಿಳಿನ 'ಜೈ ಭೀಮ್' ಸಿನಿಮಾ ಹಾಗೂ ಮಲಯಾಳಂನ 'ಮರಕ್ಕರ್: ಅರಬ್ಬಿ ಕಡಲಿಂಟೆ ಸಿಂಹಂ' ಸಿನಿಮಾಗಳು ಇದ್ದವು. ಆದರೆ ಎರಡೂ ಸಿನಿಮಾಗಳು ಯಾವುದೇ ತಾಂತ್ರಿಕ ವಿಭಾಗದಲ್ಲಾಗಲಿ ಅಥವಾ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಾಗಲಿ ನಾಮಿನೇಟ್ ಆಗಲು ವಿಫಲವಾಗಿದೆ.

    'ರೈಟಿಂಗ್ ವಿತ್ ಫೈರ್' ಸಾಕ್ಷ್ಯಚಿತ್ರವನ್ನು ಸುಶ್ಮಿತ್ ಘೋಷ್ ಮತ್ತು ರಿಂಟು ಥಾಮಸ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಹಾಗೂ ಸಂಕಲನವೂ ಇವರದ್ದೆ. ಸಂಗೀತ ನೀಡಿರುವುದು ತಜ್ದಾರ್ ಜುನೈದ್ ಹಾಗೂ ಇಶಾನ್ ಚಬ್ರಾ.

    'ರೈಟಿಂಗ್ ವಿತ್ ಫೈರ್' ಡಾಕ್ಯುಮೆಂಟರಿಯು ಆಸ್ಕರ್ ಪಡೆಯಲು 'ಅಸೆಶನ್', 'ಅಟ್ಟಿಕಾ', 'ಫ್ಲೀ', 'ಸಮ್ಮರ್ ಆಫ್ ಸೋಲ್' ಸಾಕ್ಷ್ಯಚಿತ್ರಗಳೊಟ್ಟಿಗೆ ಸೆಣೆಸಬೇಕಿದೆ. ಆಸ್ಕರ್ಸ್‌ನಿಂದ ಗುರುತಿಸಲ್ಪಟ್ಟ ಡಾಕ್ಯುಮೆಂಟರಿ ವಿಭಾಗದ ಪರಿಣಿತರು ಈ ನಾಲ್ಕೂ ಡಾಕ್ಯುಮೆಂಟರಿಗಳನ್ನು ವೀಕ್ಷಿಸಿ ಮತ ಚಲಾಯಿಸುತ್ತಾರೆ. ಯಾವ ಡಾಕ್ಯುಮೆಂಟರಿ ಹೆಚ್ಚು ಮತ ಗಳಿಸುತ್ತದೆಯೋ ಆ ಡಾಕ್ಯುಮೆಮಂಟರಿಗೆ ಆಸ್ಕರ್ ನೀಡಲಾಗುತ್ತದೆ. ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭ ಮಾರ್ಚ್ 27 ರಂದು ನಡೆಯಲಿದೆ.

    English summary
    Oscars 2022: Indian documentary 'writing with fire' gets nominated. Writing with fire documentary is about Uttar Pradesh women group who runs news paper.
    Tuesday, February 8, 2022, 19:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X