twitter
    For Quick Alerts
    ALLOW NOTIFICATIONS  
    For Daily Alerts

    'ಜೈ ಭೀಮ್' ಪಡೆಯುತ್ತದೆಯೇ ಆಸ್ಕರ್ ಎಂಟ್ರಿ: ನಾಮಿನೇಷನ್ ಹಂತದ ನಿರೀಕ್ಷೆ

    |

    ಆಸ್ಕರ್‌ 2022 ಭಾರತೀಯರ ಮಟ್ಟಿಗೆ ತುಸು ನಿರೀಕ್ಷೆ ಹುಟ್ಟಿಸಿದೆ. ಈ ಬಾರಿಯ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಕಳಿಸಲ್ಪಟ್ಟಿದ್ದ ತಮಿಳು ಸಿನಿಮಾ 'ಕೂಳಂಗಳ್' ಸಿನಿಮಾ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ ಭಾರತದ ಮೂರು ಸಿನಿಮಾಗಳು ಮುಂದಿನ ಹಂತಕ್ಕೆ ಆಯ್ಕೆ ಆಗಿವೆ.

    ಇಂದು ಆಸ್ಕರ್ 2022ಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಭಾರತದ ಎರಡು ಫೀಚರ್ ಸಿನಿಮಾ ಹಾಗೂ ಒಂದು ಸಾಕ್ಷ್ಯ ಚಿತ್ರ ಸ್ಪರ್ಧೆಯಲ್ಲಿದ್ದು ಒಂದಾದರೂ ಸಿನಿಮಾ ನಾಮಿನೇಷನ್ ಹಂತ ತಲುಪುವ ನಿರೀಕ್ಷೆ ಇದೆ.

    ಇಂದು ಸಂಜೆ 6:30 (ಭಾರತೀಯ ಕಾಲಮಾನ)ಕ್ಕೆ ಆಸ್ಕರ್‌ 2022ರ ನಾಮಿನೇಷನ್ ಸಿನಿಮಾಗಳನ್ನು ಘೋಷಿಸಲಾಗುತ್ತದೆ. ನಟರಾದ ಟ್ರೇಸ್ ಎಲ್ಲಿಸ್ ರೋಸ್ ಮತ್ತು ಲೆಸ್ಲಿ ಜೋರ್ಡನ್ ಅವರುಗಳು ಸಿನಿಮಾಗಳ ಪಟ್ಟಿಯನ್ನು ಘೋಷಿಸಲಿದ್ದಾರೆ.

    Oscars 2022 Nominations Will Be Announced On February 08
    ಸೂರ್ಯ ನಟಿಸಿ ನಿರ್ಮಾಣ ಮಾಡಿರುವ ತಮಿಳು ಸಿನಿಮಾ 'ಜೈ ಭೀಮ್', ಮೋಹನ್‌ಲಾಲ್ ನಟನೆಯ ಮಲಯಾಳಂ ಸಿನಿಮಾ 'ಮರಕ್ಕರ್; ಅರಬ್ಬಿ ಕಡಲಿಂಟೆ ಸಿಂಹಂ' ಹಾಗೂ ಸಾಕ್ಷ್ಯಚಿತ್ರ 'ರೈಟಿಂಗ್ ವಿಥ್ ಫೈರ್' ಸ್ಪರ್ಧೆಯಲ್ಲಿದ್ದು ಇಂದು ಸಂಜೆ ಘೋಷಣೆ ಆಗುವ ಪಟ್ಟಿಯಲ್ಲಿ ಈ ಮೂರೂ ಸಿನಿಮಾಗಳು ಇರಲೆಂದು ಭಾರತೀಯ ಸಿನಿಮಾ ಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ.

    ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದಿದ್ದ 270 ಸಿನಿಮಾಗಳ ಪಟ್ಟಿಯನ್ನು ಆಸ್ಕರ್ಸ್ ಆಯೋಜಕರು ಜನವರಿ 20 ರಂದು ಘೋಷಿಸಿದ್ದರು. ಆ ಪಟ್ಟಿಯಲ್ಲಿ ಭಾರತದ ಮೂರು ಸಿನಿಮಾಗಳು ಸ್ಥಾನ ಪಡೆದಿದ್ದವು.

    ಅರ್ಹತೆ ಪಡೆದ ಸಿನಿಮಾಗಳನ್ನು ವೀಕ್ಷಿಸಿದ ಒಂದು ವಿಶೇಷ ತಂಡ ನಾಮಿನೇಷನ್ ಹಂತಕ್ಕೆ ಏರಬೇಕಾದ ಸಿನಿಮಾಕ್ಕೆ ಮತದಾನ ಮಾಡಿದ್ದು ಅದರ ಫಲಿತಾಂಶದ ಆಧಾರದ ಮೇಲೆ ಇಂದಿನ ನಾಮಿನೇಟ್ ಆದ ಸಿನಿಮಾಗಳನ್ನು ಘೋಷಿಸಲಾಗುತ್ತದೆ.

    28 ವಿವಿಧ ವಿಭಾಗಗಳಿಗೆ ನಾಮಿನೇಷನ್ ಪಡೆದ ಸಿನಿಮಾಗಳನ್ನು ಘೋಷಿಸಲಾಗುತ್ತಿದ್ದು, ಪ್ರತಿ ವಿಭಾಗಕ್ಕೂ ನಾಲ್ಕು ಅಥವಾ ಐದು ಸಿನಿಮಾಗಳು, ನಟರು ನಾಮಿನೇಟ್ ಆಗಲಿದ್ದಾರೆ. ನಾಮಿನೇಟ್ ಆದ ಸಿನಿಮಾಗಳನ್ನು ವೀಕ್ಷಿಸುವ ತಂಡ ಮತ್ತೆ ಮತದಾನ ಮಾಡಿ ಅತ್ಯುತ್ತಮ ಒಂದು ಸಿನಿಮಾವನ್ನು ಎಲ್ಲ ವಿಭಾಗದಲ್ಲಿಯೂ ಆಯ್ಕೆ ಮಾಡಿ ಆಸ್ಕರ್‌ ನೀಡಲಿದೆ. ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಾರ್ಚ್ 27 ರಂದು ನಡೆಯಲಿದೆ.

    English summary
    Oscars 2022 nominations will be announced on February 08. Indian movies Jai bhim, Marakkar and documentary Writing with Fire were on race
    Tuesday, February 8, 2022, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X