Oscars 2022: ಹಲ್ಲೆ ಮಾಡಿದ್ದಕ್ಕೆ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ ನಟ ಸ್ಮಿತ್

ಆಸ್ಕರ್ಸ್ 2022 ಕೆಲ ಹೊತ್ತಿನ ಮುಂದಷ್ಟೆ ಮುಗಿದಿದೆ. ಈ ಬಾರಿಯ ಆಸ್ಕರ್‌ ಸಿನಿಮಾಗಳಿಂದಾಗಿ ಮಾತ್ರವಲ್ಲ ಬೇರೆ ಕಾರಣಕ್ಕೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ನಟ ವಿಲ್ ಸ್ಮಿತ್.

ಆಸ್ಕರ್ಸ್ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯುವಾಗ ನಟ ವಿಲ್ ಸ್ಮಿತ್ ವೇದಿಕೆ ಏರಿ ನಟ ರಾಕ್‌ನ ಕಪಾಳಕ್ಕೆ ಭಾರಿಸಿರುವುದು ಭಾರಿ ಸುದ್ದಿಯಾಗಿದೆ.

ಆಗಿದ್ದಿಷ್ಟು, ನಟ, ಕಮಿಡಿಯನ್ ಕ್ರಿಸ್ ರಾಕ್ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಪ್ರದಾನ ಮಾಡಲು ವೇದಿಕೆಗೆ ಆಗಮಿಸಿದರು. ನಟ ವಿಲ್ ಸ್ಮಿತ್ ಹಾಗೂ ಪತ್ನಿ ಜಾಡಾ ತಮ್ಮ ತಲೆ ಬೋಳಿಸಿಕೊಂಡಿರುವ ಬಗ್ಗೆ ತಮಾಷೆ ಮಾಡಿದರು. ಇದು ಜಾಡಾಗೆ ಹಿಡಿಸಲಿಲ್ಲ. ಕೂಡಲೇ ವೇದಿಕೆ ಏರಿದ ನಟ ವಿಲ್ ಸ್ಮಿತ್, ಕ್ರಿಸ್ ರಾಕ್ ಬಳಿ ಹೋಗಿ ಅವರ ಕಪಾಳಕ್ಕೆ ಬಾರಿಸಿದರು.

ಆರಂಭದಲ್ಲಿ ಇದು ತಮಾಷೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕ್ರಿಸ್ ರಾಕ್‌ಗೆ ಹೊಡೆದು ಕೆಳಗೆ ಬಂದು ಕುಳಿತ ವಿಲ್ ಸ್ಮಿತ್, 'ನನ್ನ ಪತ್ನಿಯ ಬಗ್ಗೆ ಮಾತನಾಡಬೇಡ' ಎಂದು ಕಿರುಚಿದರು, ಅದಕ್ಕೆ ಕ್ರಿಸ್ ಓಕೆ ಎಂದರು. ಮತ್ತೆ ಜೋರಾಗಿ 'ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಂದ ಹೇಳಬೇಡ' ಎಂದು ಕಿರುಚಿದರು. ಕ್ರಿಸ್ ರಾಕ್ ಸುಮ್ಮನಾದರು.

ಕಾರ್ಯಕ್ರಮದ ಅಂತಿಮದಲ್ಲಿ ವಿಲ್ ಸ್ಮಿತ್‌ಗೆ 'ಕಿಂಗ್ಸ್ ರಿಚರ್ಡ್' ಸಿನಿಮಾದ ರಿಚರ್ಡ್ ವಿಲಿಯಮ್ಸ್ ಪಾತ್ರದಲ್ಲಿನ ನಟನೆಗೆ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪಡೆದ ಬಳಿಕ ಆಸ್ಕರ್ ಸ್ವಿಕಾರ ಭಾಷಣದಲ್ಲಿ ಭಾವುಕವಾಗಿ ಮಾತನಾಡಿದ ನಟ ವಿಲ್ ಸ್ಮಿತ್, ಅಳುತ್ತ ಕ್ಷಮಾಪಣೆ ಕೇಳಿದರು.

''ರಿಚರ್ಡ್ ವಿಲಿಯಮ್ಸ್, ಆತನ ಕುಟುಂಬದ ರಕ್ಷಕ. ನನ್ನ ಜೀವನದ ಈ ಕಾಲಘಟ್ಟದಲ್ಲಿ ಆ ದೇವರು ನನ್ನಿಂದ ಮಾಡಿಸುತ್ತಿರುವ ಕಾರ್ಯಗಳ ಬಗ್ಗೆ ನಾನು ಬಹಳ ಖುಷಿಯಾಗಿಯೂ, ಸಂತೃಪ್ತನಾಗಿಯೂ ಇದ್ದೇನೆ. 'ಕಿಂಗ್ ರಿಚರ್ಡ್' ಸಿನಿಮಾದಲ್ಲಿ ನಾನು ನನ್ನ ಮಕ್ಕಳನ್ನು ರಕ್ಷಿಸುವ ಕಾರ್ಯ ಮಾಡಿದ್ದೇನೆ. ನನ್ನ ಜೀವನದಲ್ಲಿ ನಾನು ಇದನ್ನೇ ಮಾಡುತ್ತಾ ಬಂದಿದ್ದೇನೆ. ಜನರನ್ನು ಪ್ರೀತಿಸಲು, ಜನರನ್ನು ರಕ್ಷಿಸಲು ನನಗೆ ಹೇಳಿಕೊಡಲಾಗಿದೆ. ನನ್ನ ಜನಗಳಿಗೆ 'ನದಿಯಂತಾಗುವುದನ್ನು' ನನಗೆ ಹೇಳಿಕೊಡಲಾಗಿದೆ'' ಎಂದು ಅಳುತ್ತಲೇ ಹೇಳಿದರು ವಿಲ್ ಸ್ಮಿತ್.

ವಿಲಿಯಮ್ಸ್ ಕುಟುಂಬಕ್ಕೆ ಧನ್ಯವಾದ

ವಿಲಿಯಮ್ಸ್ ಕುಟುಂಬಕ್ಕೆ ಧನ್ಯವಾದ

''ಪ್ರೀತಿ ತುಂಬಿದ ಪಾತ್ರೆ ಆಗಬೇಕು ಎಂಬುದು ನನ್ನ ಆಸೆ. ನಾನು ವೀನಸ್ ವಿಲಿಯಮ್ಸ್ ಹಾಗೂ ಸರೀನಾ ವಿಲಿಯಮ್ಸ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಡೀಯ ವಿಲಿಯಮ್ಸ್ ಕುಟುಂಬಕ್ಕೆ ಧನವ್ಯಾದ ಹೇಳುತ್ತೇನೆ. ಅವರು ನನ್ನನ್ನು ನಂಬಿ ತಮ್ಮ ಕುಟುಂದ ಕತೆಯನ್ನು ನೀಡಿದ್ದಕ್ಕೆ. ಇಂಥಹಾ ಕತೆಗಳಿಗೆ ರಾಯಭಾರಿ ಆಗಬೇಕು ಎಂಬುದು ನನ್ನ ಆಸೆ.

ಪರೋಕ್ಷವಾಗಿ ಕ್ರಿಸ್‌ ರಾಕ್‌ ಅನ್ನು ಉಲ್ಲೇಖಿಸಿದ ಸ್ಮಿತ್

ಪರೋಕ್ಷವಾಗಿ ಕ್ರಿಸ್‌ ರಾಕ್‌ ಅನ್ನು ಉಲ್ಲೇಖಿಸಿದ ಸ್ಮಿತ್

''ನೀವಂದುಕೊಂಡಿದ್ದನ್ನು ಮಾಡುವ ಈ ಪಯಣದಲ್ಲಿ ನೀವು ಜನಗಳಿಂದ ದ್ವೇಷ ಎದುರಿಸಬೇಕಾಗುತ್ತದೆ. ಈ ಉದ್ಯಮದಲ್ಲಿ ಜನ ನಿಮ್ಮ ವಿರುದ್ಧ ಬಹಳ ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮನ್ನು ಅವಮಾನಿಸುತ್ತಾರೆ. ಆಗೆಲ್ಲ ಏನೂ ಆಗಿಯೇ ಇಲ್ಲವೆಂಬಂತೆ ನಾವು ನಗಬೇಕಾಗುತ್ತದೆ'' ಎಂದು ಪರೋಕ್ಷವಾಗಿ ಕ್ರಿಸ್ ರಾಕ್ ತಮ್ಮ ಪತ್ನಿಯ ಬಗ್ಗೆ ಹಾಸ್ಯ ಮಾಡಿದ್ದನ್ನು ಉಲ್ಲೇಖಿಸಿದರು.

ಕ್ಷಮೆ ಕೇಳಿದ ವಿಲ್ ಸ್ಮಿತ್

ಕ್ಷಮೆ ಕೇಳಿದ ವಿಲ್ ಸ್ಮಿತ್

''ನಾನು ಅಕಾಡೆಮಿ (ಆಸ್ಕರ್ಸ್) ಹಾಗೂ ನನ್ನ ಸಹ ನಾಮಿನೇಟರ್‌ಗಳಿಗೆ ಕ್ಷಮೆ ಕೇಳುತ್ತೇನೆ'' ಎಂದು ಕ್ಷಣ ಮೌನವಾದರು. ಆದರೆ ವಿಲ್ ಸ್ಮಿತ್ ತಾವು ಹಲ್ಲೆ ಮಾಡಿದ ಕಮಿಡಿಯನ್ ಕ್ರಿಸ್ ರಾಕ್‌ಗೆ ಕ್ಷಮೆ ಕೇಳಲಿಲ್ಲ. ಬದಲಿಗೆ ಆಸ್ಕರ್ಸ್‌ಗೆ ಹಾಗೂ ಅಲ್ಲಿ ಹಾಜರಿದ್ದವರಿಗಷ್ಟೆ ಕ್ಷಮೆ ಕೇಳಿದರು. ಕ್ಷಮೆ ಕೇಳಿದ ಬಳಿಕ ಮಾತು ಮುಂದುವರೆಸಿದ ವಿಲ್ ಸ್ಮಿತ್, ''ನನಗೆ ಈ ಪ್ರಶಸ್ತಿ ಬಂದಿದ್ದಕ್ಕೆ ನಾನು ಅಳುತ್ತಿಲ್ಲ. ಗೆಲ್ಲುವುದು ಮಹತ್ವದ್ದಲ್ಲ ಎಂದು ಸ್ಮಿತ್, ತಮ್ಮೊಟ್ಟಿಗೆ 'ಕಿಂಗ್ ರಿಚರ್ಡ್ಸ್' ಸಿನಿಮಾದಲ್ಲಿ ಕೆಲಸ ಮಾಡಿದ ನಟರು, ತಂತ್ರಜ್ಞರನ್ನು ನೆನಪಿಸಿಕೊಂಡರು.

ಆಸ್ಕರ್ಸ್‌ನವರು ಮತ್ತೆ ಕರೆಯುತ್ತಾರೊ ಇಲ್ಲವೊ: ವಿಲ್ ಸ್ಮಿತ್

ಆಸ್ಕರ್ಸ್‌ನವರು ಮತ್ತೆ ಕರೆಯುತ್ತಾರೊ ಇಲ್ಲವೊ: ವಿಲ್ ಸ್ಮಿತ್

''ಹುಚ್ಚು ತಂದೆ' ಎಂದು ರಿಚರ್ಡ್ಸ್ ವಿಲಿಯಮ್ಸ್ ಅನ್ನು ಸಿನಿಮಾದಲ್ಲಿ ಕರೆಯಲಾಗುತ್ತದೆ. ನಾನೂ ಹಾಗೆಯೇ ಎನಿಸುತ್ತದೆ. ಪ್ರೀತಿಯು ನಿಮ್ಮನ್ನು ಕೆಲವು ಹುಚ್ಚು ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ'' ಎಂದ ಸ್ಮಿತ್, ತಮ್ಮ ತಾಯಿ ಹಾಗೂ ಕುಟುಂಬವನ್ನು ನೆನಪಿಸಿಕೊಂಡರು. ''ಈ ಪ್ರಶಸ್ತಿ ನೀಡಿದ್ದಕ್ಕೆ, ಈ ಗೌರವ ನೀಡಿದ್ದಕ್ಕೆ ಧನ್ಯವಾದ. ವಿಲಿಯಮ್ಸ್ ಕುಟುಂಬಕ್ಕೆ ಧನ್ಯವಾದ. ಆಸ್ಕರ್ಸ್‌ಗೆ ಧನ್ಯವಾದ. ಮತ್ತೆ ಆಸ್ಕರ್ಸ್‌ನವರು ನನ್ನನ್ನು ಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ'' ಎಂದು ನಕ್ಕು ಭಾಷಣ ಮುಗಿಸಿದರು ಸ್ಮಿತ್.

More from Filmibeat

English summary
Actor Will Smith asked apology to Oscars and nominees for his action of hitting Chris Rock on the stage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X