Oscars 2023: ಇಂಡಸ್ಟ್ರಿಗೆ ಕಾಲಿಟ್ಟು 3 ದಶಕಗಳ ಬಳಿಕ ಆಸ್ಕರ್ ಗೆದ್ದ ಬ್ರೆಂಡನ್ ಫ್ರೇಸರ್!

ಲಾಸ್ ಏಂಜಲೀಸ್‌ನಲ್ಲಿ ನಡೆದ 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ 2022ರಲ್ಲಿ ಬಿಡುಗಡೆಗೊಂಡ ಅತ್ಯುತ್ತಮ ಚಲನಚಿತ್ರಗಳಿಗೆ ಹಾಗೂ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಚಿತ್ರಗಳು ಹಾಗೂ ಕಲಾವಿದರು ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಭಾರತದ 'ದ ಎಲಿಫೆಂಟ್ ವಿಸ್ಪರರ್ಸ್' ಎಂಬ ಕಿರುಚಿತ್ರಕ್ಕೆ ಬೆಸ್ಟ್ ಡಾಕ್ಯು ಶಾರ್ಟ್ ಫಿಲ್ಮ್ ಪ್ರಶಸ್ತಿ ಲಭಿಸಿತು ಹಾಗೂ ಟಾಲಿವುಡ್‌ನ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಅತ್ಯುತ್ತಮ ನಟ ಪ್ರಶಸ್ತಿಯನ್ನು ದ ವೇಲ್ ಚಿತ್ರಕ್ಕಾಗಿ ನಟ ಬ್ರೆಂಡನ್ ಫ್ರೇಸರ್ ಪಡೆದುಕೊಂಡರು. ಈ ಚಿತ್ರದಲ್ಲಿ ಅನಾರೋಗ್ಯಕ್ಕೊಳಗಾದ ಇಂಗ್ಲಿಷ್ ಪ್ರೊಫೆಸರ್ ಪಾತ್ರವನ್ನು ನಿರ್ವಹಿಸಿರುವ ಬ್ರೆಂಡನ್ ಫ್ರೇಸರ್ ಸಿನಿ ರಸಿಕರ ಮೆಚ್ಚುಗೆಗಳನ್ನು ದೊಡ್ಡ ಮಟ್ಟದಲ್ಲಿ ಪಡೆದುಕೊಂಡಿದ್ದರು. ಮೊದಲಿಗೆ ಸಿನಿ ರಸಿಕರ ಶಹಬ್ಬಾಷ್‌ಗಿರಿ ಗಿಟ್ಟಿಸಿಕೊಂಡಿದ್ದ ಬ್ರೆಂಡನ್ ಫ್ರೇಸರ್‌ಗೆ ಇದೀಗ ಆಸ್ಕರ್ ಗೌರವ ದಕ್ಕಿದೆ.

Oscars 2023: Actor Brendan Fraser won best actor award at the age of 54

ಈ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಬರೋಬ್ಬರಿ 32 ವರ್ಷಗಳನ್ನು ಕಳೆದ ಬಳಿಕ ಬ್ರೆಂಡನ್ ಫ್ರೇಸರ್ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡು ಅತಿದೊಡ್ಡ ಗೌರವಕ್ಕಾಗಿ ಹಲವು ವರ್ಷಗಳ ಪರಿಶ್ರಮವಿರಬೇಕು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಬ್ರೆಂಡನ್ ಫ್ರೇಸರ್ 1968ರ ಡಿಸೆಂಬರ್ 3ರಂದು ಯುಎಸ್‌ನ ಇಂಡಿಯಾನಾದಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಭಾಗವಹಿಸಿದ್ದ ಒಂದು ನಾಟಕದಿಂದಾಗಿ ನಟನೆಯತ್ತ ಆಸಕ್ತಿ ಬೆಳೆಸಿಕೊಂಡ ಬ್ರೆಂಡನ್ ಫ್ರೇಸರ್ ಬಳಿಕ ಹಲವಾರು ನಾಟಕಗಳಲ್ಲಿ ಬಣ್ಣ ಹಚ್ಚಿದರು.

ತರಬೇತಿಯನ್ನೂ ಸಹ ಪಡೆದು ಅಭ್ಯಾಸ ನಡೆಸುತ್ತಿದ್ದ ಬ್ರೆಂಡನ್ ಫ್ರೇಸರ್ 1990ರಲ್ಲಿ ಕಲಾವಿಭಾಗದಲ್ಲಿ ಡಿಗ್ರಿ ಪಡೆದ ಬಳಿಕ 1991ರಲ್ಲಿ ದೊಡ್ಡ ಪರದೆ ಮೇಲೆ ನಟಿಸುವ ಅವಕಾಶವನ್ನೂ ಸಹ ಪಡೆದರು. ಆ ವರ್ಷ ಬಿಡುಗಡೆಗೊಂಡಿದ್ದ ಡಾಗ್‌ಫೈಟ್ ಎಂಬ ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಬ್ರೆಂಡನ್ ಫ್ರೇಸರ್ 1992ರಲ್ಲಿ ಬಿಡುಗಡೆಗೊಂಡ ಎನ್ಸಿಕೊ ಮ್ಯಾನ್ ಎಂಬ ಸಿನಿಮಾ ಮೂಲಕ ನಾಯಕನಾಗಿಯೂ ನಟಿಸಿದರು.

ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸನ್ನು ಸಾಧಿಸಿತಾದರೂ ಬ್ರೆಂಡನ್ ಫ್ರೇಸರ್ ನಟನೆಯನ್ನು ಮೆಚ್ಚಿಕೊಂಡಿದ್ದ ಸಿನಿಮಾ ಮಂದಿ ಹಲವಾರು ಆಫರ್‌ಗಳನ್ನು ನೀಡಿದರು. ಬಳಿಕ ಹಲವಾರು ಹಿಟ್ ಚಿತ್ರಗಳನ್ನು ನೀಡಿದ ಬ್ರೆಂಡನ್ ಫ್ರೇಸರ್ ಕೆಲ ಸಿನಿಮಾಗಳು ಸೋತ ಕಾರಣ ಮಂಕಾದರು. 2014ರ ಬಳಿಕ ಸುಮಾರು ಐದು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿಯೂ ನಟಿಸದೆಯೇ ಸುಮ್ಮನಿದ್ದರು.

ಇದೀಗ ಮತ್ತೆ ಬಣ್ಣ ಹಚ್ಚಲು ಆರಂಭಿಸಿದ ಬ್ರೆಂಡನ್ ಫ್ರೇಸರ್‌ಗೆ ಈ ಪ್ರಶಸ್ತಿ ಮತ್ತಷ್ಟು ಬಲ ನೀಡಿದಂತಾಗಿದೆ. ಈ ಕುರಿತು ಪ್ರಶಸ್ತಿ ಸಮಾರಂಭದಲ್ಲಿಯೂ ಸಹ ಮಾತನಾಡಿದ ಬ್ರೆಂಡನ್ ಫ್ರೇಸರ್ ಚಿತ್ರರಂಗಕ್ಕೆ ಕಾಲಿಟ್ಟ ಮೂರು ದಶಕಗಳ ಬಳಿಕ ತನಗೆ ಈ ಮಟ್ಟದ ಗೌರವ ಸಿಕ್ಕಿದ್ದು ಖುಷಿ ತಂದಿದೆ ಹಾಗೂ ತನ್ನನ್ನು ಇನ್ನಷ್ಟು ಹುರಿದುಂಬಿಸಿದೆ ಎಂದು ಹೇಳಿಕೊಂಡರು.

More from Filmibeat

English summary
Oscars 2023: Actor Brendan Fraser won best actor award at the age of 54. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X