Oscars 2023 Winners List: ತೆಲುಗಿನ 'ನಾಟು ನಾಟು' ಗೀತೆಗೆ ಆಸ್ಕರ್ ಗರಿ: ಇಲ್ಲಿದೆ ಆಸ್ಕರ್ ವಿಜೇತರ ಸಂಪೂರ್ಣ ಲಿಸ್ಟ್

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಸಡಗರ ಸಂಭ್ರಮದಿಂದ ನಡೀತಿದೆ. ಈ ಬಾರಿ 'RRR' ಚಿತ್ರದ 'ನಾಟು ನಾಟು' ಸಾಂಗ್ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿರುವುದರಿಂದ ಭಾರತೀಯರು ಕೂಡ ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ, ತಂತ್ರಜ್ಞರಿಗೆ ಪ್ರಶಸ್ತಿ ಘೋಷಣೆ ಆಗಿದೆ.

ಆಂಡ್ರ್ಯೂ ಗಾರ್ಫೀಲ್ಡ್, ಮೈಲ್ಸ್ ಟೆಲ್ಲರ್ ಮತ್ತು ಕೆಲೀ ಸ್ಪೆರ್ರಿ ಮತ್ತು ಇದ್ರಿಸ್ ಎಲ್ಬಾ ಸೇರಿದಂತೆ ಜಗತ್ತಿನ ಖ್ಯಾತ ಸೆಲೆಬ್ರೆಟಿಗಳು ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಭಾರತದಿಂದ ದೀಪಿಕಾ ಪಡುಕೋಣೆ ಮತ್ತು RRR ತಂಡದ ಜೂ. NTR, ರಾಮ್ ಚರಣ್ ಮತ್ತು ರಾಜಮೌಳಿ ಹಾಜರಾಗಿದ್ದಾರೆ. ಈಗಾಗಲೇ ಕಾರ್ಯಕ್ರಮದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ನಾಟು ನಾಟು' ಲೈವ್ ಪರ್ಫಾರ್ಮೆನ್‌ ನೋಡಿ ಸಿನಿರಸಿಕರು ಖುಷಿಯಾಗಿದ್ದಾರೆ.

Oscars 2023: Complete winners list for the 95th Academy Awards, Full list of winners

ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೊದಲಿಗೆ ಜಿಮ್ಮಿ ಕಿಮ್ಮೆಲ್ ನಿರೂಪಣೆ ಮಾಡಿದರು. ಬೆಸ್ಟ್ ಆನಿಮೇಟೆಡ್ ಚಿತ್ರಕ್ಕಾಗಿ ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ ಮೊದಲ ಪ್ರಶಸ್ತಿ ಪಡೆದುಕೊಂಡರು. ಭಾರತದ 'ಆಲ್ ದಟ್ ಬ್ರೀತ್ಸ್' ಡಾಕ್ಯಮೆಂಟರಿಗೆ 95ನೇ ಅಕಾಡೆಮಿ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಯಿತು. ಆ ಪ್ರಶಸ್ತಿ ನವಲ್ನಿ ಡಾಕ್ಯುಮೆಂಟರಿಗೆ ಸಿಕ್ತು. 'ದಿ ಎಲಿಫೆಂಟ್ ವಿಸ್ಪರರ್ಸ್' ಕಿರುಚಿತ್ರ ಹಾಗೂ 'ನಾಟು ನಾಟು' ಹಾಡು ಸೇರಿ ಭಾರತಕ್ಕೆ 2 ಆಸ್ಕರ್ ಪ್ರಶಸ್ತಿ ಲಭಿಸಿದೆ.

ಇನ್ನು ಆಸ್ಕರ್ ಪ್ರಶಸ್ತಿ ವಿಜೇತರ ಲಿಸ್ಟ್ ಇಲ್ಲಿದೆ

ಅನಿಮೇಟೆಡ್ ಫೀಚರ್ - ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ

ಪೋಷಕ ನಟ - ಕೆ ಹುಯ್ ಕ್ವಾನ್ (ಎವರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)

Oscars 2023: Complete winners list for the 95th Academy Awards, Full list of winners

ಪೋಷಕ ನಟಿ - ಜೇಮೀ ಲೀ ಕರ್ಟಿಸ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)

ಡಾಕ್ಯುಮೆಂಟರಿ ಫೀಚರ್ - ನವಲ್ನಿ

ಲೈವ್-ಆಕ್ಷನ್ ಶಾರ್ಟ್ - ಆನ್ ಐರಿಶ್ ಗುಡ್ ಬೈ

ಸಿನಿಮಾಟೋಗ್ರಫಿ - ಆಲ್ ಸೈಯಟ್ ಆನ್ ದಿ ವೆಸ್ಟರ್ನ್ ಫ್ರಂಟ್

ಮೇಕಪ್ ಮತ್ತು ಹೇರ್ - ದಿ ವೇಲ್ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ - ದಿ ಎಲಿಫೆಂಟ್ ವಿಸ್ಪರರ್ಸ್

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ - ದಿ ಬಾಯ್, ದಿ ಮೋಲ್, ದಿ ಫಾಕ್ಸ್ ಮತ್ತು ಹಾರ್ಸ್

ಪ್ರೊಡಕ್ಷನ್ ಡಿಸೈನ್ - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

ಒರಿಜಿನಲ್ ಸ್ಕೋರ್ - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

ವಿಷುಯಲ್ ಎಫೆಕ್ಟ್ಸ್ - ಅವತಾರ್: ದಿ ವೇ ಆಫ್ ವಾಟರ್

ಒರಿಜಿನಲ್ ಸ್ಕ್ರೀನ್‌ಪ್ಲೇ - ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್

ಅಡಾಪ್ಟೆಡ್ ಸ್ಕ್ರೀನ್‌ಪ್ಲೇ - ವುಮೆನ್ ಟಾಕಿಂಗ್

ಸೌಂಡ್ - ಟಾಪ್ ಗನ್: ಮೇವರಿಕ್

ಬೆಸ್ ಒರಿಜಿನಲ್ ಸಾಂಗ್ - ನಾಟು ನಾಟು(RRR)

ಎಡಿಟಿಂಗ್ - ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್

ಡೈರೆಕ್ಟರ್ - ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)

ಅತ್ಯುತ್ತಮ ನಟ- ಬ್ರೆಂಡನ್ ಫ್ರೇಸರ್ (ದಿ ವೇಲ್)

ಅತ್ಯುತ್ತಮ ನಟಿ - ಮಿಚೆಲ್ ಯೋಹ್ (ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ )

ಅತ್ಯುತ್ತಮ ಸಿನಿಮಾ - ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್

More from Filmibeat

English summary
Oscars 2023: Complete winners list for the 95th Academy Awards, Full list of winners. Latest highlights from the award show. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X