Oscars 2023: ಬೆಸ್ಟ್ ಪಿಕ್ಚರ್ ಪ್ರಶಸ್ತಿ ಪಡೆದ 'ಎವೆರಿಥಿಂಗ್ ಎವೆರಿವೇರ್ ಆಲ್ಎಟ್ ಒನ್ಸ್' ಬಜೆಟ್ ಹಾಗೂ ಕಲೆಕ್ಷನ್ ಎಷ್ಟು?

ಸಿನಿ ರಂಗದ ಅತಿದೊಡ್ಡ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 95ನೇ ಆವೃತ್ತಿ ಲಾಸ್ ಏಂಜೆಲೀಸ್‌ನಲ್ಲಿ ನಡೆದಿದೆ. ಕಳೆದ ಹಲವು ತಿಂಗಳುಗಳಿಂದ ವಿವಿಧ ಘಟ್ಟಗಳಲ್ಲಿ ಯಶಸ್ವಿಯಾಗಿ ಕೊನೆಗೆ ನಾಮಿನೇಟ್ ಆದ ಚಿತ್ರಗಳು ಹಾಗೂ ಕಲಾವಿದರ ಪೈಕಿ ಒಬ್ಬರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾರತದ ಡಾಕುಮೆಂಟರಿ ಕಿರುಚಿತ್ರ 'ದ ಎಲಿಫೆಂಟ್ ವಿಸ್ಪರರ್ಸ್' ಬೆಸ್ಟ್ ಡಾಕುಮೆಂಟರಿ ಶಾರ್ಟ್ ಫಿಲ್ಮ್ ಪ್ರಶಸ್ತಿಯನ್ನು ಗೆದ್ದಿದ್ದರೆ, ತೆಲುಗಿನ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿಯನ್ನು ಘೋಷಿಸಿದೆ. ಈ ಎರಡೂ ಚಿತ್ರಗಳೂ ಭಾರತಕ್ಕೆ ಆಸ್ಕರ್ ತಂದುಕೊಟ್ಟ ಹಿರಿಮೆಯನ್ನು ಗಳಿಸಿಕೊಂಡಿವೆ.

Oscars 2023: Everything Everywhere All at once movie budget and collection report

ಇನ್ನು ಈ ಬಾರಿಯ ಆಸ್ಕರ್‌ನಲ್ಲಿ 'ಎವರಿಥಿಂಗ್ ಎವರಿವೇರ್ ಆಲ್ಎಟ್ ಒನ್ಸ್' ಎಂಬ ಅಮೆರಿಕಾದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಬೆಸ್ಟ್ ಪಿಕ್ಚರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಚಿತ್ರವೂ ಸೇರಿದಂತೆ ಒಟ್ಟು ಹತ್ತು ಚಿತ್ರಗಳು ಆಸ್ಕರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವು. ಹಾಗಿದ್ದರೆ ನಾಮಿನೇಟ್ ಆದ ಆ ಹತ್ತು ಚಿತ್ರಗಳನ್ನು ಹಿಂದಿಕ್ಕಿ ಪ್ರತಿಷ್ಠಿತ ಆಸ್ಕರ್‌ನಲ್ಲಿ ಬೆಸ್ಟ್ ಪಿಕ್ಚರ್ ಪ್ರಶಸ್ತಿಯನ್ನು ಪಡೆದುಕೊಂಡ 'ಎವರಿಥಿಂಗ್ ಎವರಿವೇರ್ ಆಲ್ಎಟ್ ಒನ್ಸ್' ಚಿತ್ರದ ಮಾಹಿತಿ ಏನು, ಚಿತ್ರ ಎಷ್ಟು ವೆಚ್ಚದಲ್ಲಿ ತಯಾರಾಗಿ ಎಷ್ಟು ಗಳಿಸಿತ್ತು ಎಂಬ ಮಾಹಿತಿ ಈ ಕೆಳಕಂಡಂತಿದೆ..

'ಎವರಿಥಿಂಗ್ ಎವರಿವೇರ್ ಆಲ್ಎಟ್ ಒನ್ಸ್' ಅಮೆರಿಕಾದ ಒಂದು ಕಾಮಿಡಿಯಿಂದ ಕೂಡಿದ ಚಿತ್ರವಾಗಿದೆ. ಡೇನಿಯಲ್ಸ್ ಎಂದೇ ಖ್ಯಾತಿಯನ್ನು ಪಡೆದಿರುವ ಡೇನಿಯಲ್ ಕ್ವಾನ್ ಹಾಗೂ ಡೇನಿಯಲ್ ಸೈನರ್ಟ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಿಚೆಲ್ ಯೋಯ್ಹ್, ಸ್ಟೀಫನ್ ಹ್ಸು, ಕೆ ಹು ಕ್ವಾನ್, ಜೇಮ್ಸ್ ಹಾಂಗ್, ಜೇಮಿಲಿ ಕರ್ಟಸ್, ಜೆನ್ನಿ ಸ್ಲೇಟ್ ಹಾಗೂ ಜೂನಿಯರ್ ಹ್ಯಾರಿ ಶುಮ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ

139 ನಿಮಿಷಗಳ ಈ ಚಿತ್ರಕ್ಕೆ ಡೇನಿಯಲ್ ರುಸ್ಸೊ, ಜೋ ರುಸ್ಸೊ ಹಾಗೂ ಮೈಕ್ ಲರೊಕ್ಕಾ ಸೇರಿದಂತೆ ಇನ್ನೂ ಹಲವರು ಬಂಡವಾಳ ಹೂಡಿದ್ದಾರೆ. ಸುಮಾರು 204 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಬಾಕ್ಸ್ ಆಫೀಸ್‌ನಲ್ಲಿ 885 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ 'ಎವರಿಥಿಂಗ್ ಎವರಿವೇರ್ ಆಲ್ಎಟ್ ಒನ್ಸ್' ಸಿನಿಮಾ ಇದೀಗ ಆಸ್ಕರ್‌ನಲ್ಲಿಯೂ ಸಹ ಅಬ್ಬರಿಸಿದೆ.

Oscars 2023: Everything Everywhere All at once movie budget and collection report

ಪ್ರಶಸ್ತಿ ಗೆದ್ದವರ ಪಟ್ಟಿ: ಈ ಬಾರಿಯ ಆಸ್ಕರ್ ಪ್ರಶಸ್ತಿಯನ್ನು ಯಾವ ವಿಭಾಗದಲ್ಲಿ ಯಾರು ಗೆದ್ದರು ಎಂಬ ಮಾಹಿತಿ ಇಲ್ಲಿದೆ. ಪೋಷಕ ನಟ - ಕೆ ಹುಯ್ ಕ್ವಾನ್ (ಎವರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್

ಪೋಷಕ ನಟ - ಕೆ ಹುಯ್ ಕ್ವಾನ್ (ಎವರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)

ಪೋಷಕ ನಟಿ - ಜೇಮೀ ಲೀ ಕರ್ಟಿಸ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)

ಡಾಕ್ಯುಮೆಂಟರಿ ಫೀಚರ್ - ನವಲ್ನಿ

ಲೈವ್-ಆಕ್ಷನ್ ಶಾರ್ಟ್ - ಆನ್ ಐರಿಶ್ ಗುಡ್ ಬೈ

ಸಿನಿಮಾಟೋಗ್ರಫಿ - ಆಲ್ ಸೈಯಟ್ ಆನ್ ದಿ ವೆಸ್ಟರ್ನ್ ಫ್ರಂಟ್

ಮೇಕಪ್ ಮತ್ತು ಹೇರ್ - ದಿ ವೇಲ್

ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ - ದಿ ಎಲಿಫೆಂಟ್ ವಿಸ್ಪರರ್ಸ್

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ - ದಿ ಬಾಯ್, ದಿ ಮೋಲ್, ದಿ ಫಾಕ್ಸ್ ಮತ್ತು ಹಾರ್ಸ್

ಪ್ರೊಡಕ್ಷನ್ ಡಿಸೈನ್ - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ ಒರಿಜಿನಲ್ ಸ್ಕೋರ್ - ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್

ವಿಷುಯಲ್ ಎಫೆಕ್ಟ್ಸ್ - ಅವತಾರ್: ದಿ ವೇ ಆಫ್ ವಾಟರ್

ಒರಿಜಿನಲ್ ಸ್ಕ್ರೀನ್‌ಪ್ಲೇ - ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್

ಅಡಾಪ್ಟೆಡ್ ಸ್ಕ್ರೀನ್‌ಪ್ಲೇ - ವುಮೆನ್ ಟಾಕಿಂಗ್

ಸೌಂಡ್ - ಟಾಪ್ ಗನ್ ಮೇವರಿಕ್ ಬೆಸ್ಟ್ ಒರಿಜಿನಲ್ ಸಾಂಗ್ - ನಾಟು ನಾಟು(RRR)

ಎಡಿಟಿಂಗ್ - ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ ಡೈರೆಕ್ಟರ್ - ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)

More from Filmibeat

English summary
Oscars 2023: Everything Everywhere All at once movie budget and collection report. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X