Oscars 2023: ಒಟ್ಟು 23 ಆಸ್ಕರ್ ಪ್ರಶಸ್ತಿಗಳಲ್ಲಿ ಯಾವ ಚಿತ್ರಕ್ಕೆ ಎಷ್ಟು ಪ್ರಶಸ್ತಿ? ಹೆಚ್ಚು ಗೆದ್ದ ಚಿತ್ರ ಯಾವುದು?
ಇಂದು ( ಮಾರ್ಚ್ 13 ) ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮನರಂಜನಾ ಕ್ಷೇತ್ರದ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಅಡಿಯಲ್ಲಿ 23 ವಿಭಾಗಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಲ್ಲಿ ಭಾರತದ ಆರ್ ಆರ್ ಆರ್ ಚಿತ್ರ ನಾಟು ನಾಟು ಹಾಡಿಗಾಗಿ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿಯನ್ನು ಪಡೆದುಕೊಂಡಿತು ಹಾಗೂ 'ದ ಎಲಿಫೆಂಟ್ ವಿಸ್ಪರರ್ಸ್' ಬೆಸ್ಟ್ ಡಾಕ್ಯು ಶಾರ್ಟ್ ಫಿಲ್ಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಹೀಗೆ ಭಾರತ ಒಟ್ಟು ಎರಡು ಕೆಟಗರಿ ಅಡಿಯಲ್ಲಿ ಈ ಬಾರಿಯ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಒಟ್ಟು 23 ಕೆಟಗರಿ ಅಡಿಯಲ್ಲಿ ನೀಡಲಾದ ಪ್ರಶಸ್ತಿಗಳ ಪೈಕಿ ಹೆಚ್ಚು ಪ್ರಶಸ್ತಿಯನ್ನು ಯಾವ ಚಿತ್ರ ಪಡೆದುಕೊಂಡಿದೆ, ಯಾವ ಚಿತ್ರಗಳು ಎಷ್ಟೆಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

* ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್ - 7 ಪ್ರಶಸ್ತಿಗಳು
* ಆಲ್ ಕ್ವೈಟ್ ಆನ್ ದ ವೆಸ್ಟರ್ನ್ ಫ್ರಂಟ್ - 4 ಪ್ರಶಸ್ತಿಗಳು
* ದ ವೇಲ್ - 2 ಪ್ರಶಸ್ತಿಗಳು
* ಆರ್ ಆರ್ ಆರ್ - 1 ಪ್ರಶಸ್ತಿ
* ದ ಎಲಿಫೆಂಟ್ ವಿಸ್ಪರರ್ಸ್ - 1 ಪ್ರಶಸ್ತಿ
* ಅವತಾರ್ ದ ವೇ ಆಫ್ ವಾಟರ್ಸ್ - 1 ಪ್ರಶಸ್ತಿ
* ಟಾಪ್ ಗನ್ ಮ್ಯಾವೆರಿಕ್ - 1 ಪ್ರಶಸ್ತಿ
* ಬ್ಲಾಕ್ ಪ್ಯಾಂಥರ್: ವಾಖೆಂಡಾ ಫಾರೆವರ್ - 1 ಪ್ರಶಸ್ತಿ
* ವುಮೆನ್ ಟಾಕಿಂಗ್ - 1 ಪ್ರಶಸ್ತಿ
* ಆನ್ ಐರಿಷ್ ಗುಡ್‌ಬೈ - 1 ಪ್ರಶಸ್ತಿ
* ನವಲ್ನಿ - 1 ಪ್ರಶಸ್ತಿ
* ಗ್ಯುಲೆರ್ಮೊ ದೆಲ್ ಟೊರೊಸ್ ಪಿನೊಚಿನೊ - 1 ಪ್ರಶಸ್ತಿ
* ದ ಬಾಯ್, ದ ಮೋಲ್, ದ ಫಾಕ್ಸ್ ಅಂಡ್ ದ ಹಾರ್ಸ್ - 1 ಪ್ರಶಸ್ತಿ


Click it and Unblock the Notifications











