Oscars 2023: "ಇದು ಆರಂಭ ಅಷ್ಟೇ".. ಪ್ರಶಸ್ತಿ ಸ್ವೀಕರಿಸಿ ಹಾಡಿನ ರೂಪದಲ್ಲಿ ಮಾತನಾಡಿದ ಎಂ. ಎಂ ಕೀರವಾಣಿ

'ನಾಟು ನಾಟು' ಎನ್ನುವ ಅದ್ಭುತ ಸಾಂಗ್ ಸೃಷ್ಟಿಸಿ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಗೂ ಗೀತ ಸಾಹಿತಿ ಚಂದ್ರಬೋಸ್ ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿ ಆನಂದದಲ್ಲಿ ತೇಲಾಡಿದ ಕೀರವಾಣಿ ಹಾಡಿನ ರೂಪದಲ್ಲಿ ವೇದಿಕೆ ಮೇಲೆ ಮಾತನಾಡಿದರು. 130 ಕೋಟಿ ಭಾರತೀಯರ ಕನಸು ನನಸಾಗಿದೆ. ತೆಲುಗು ಸಿನಿಮಾ ಗೀತೆಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಇಡೀ ಪ್ರಪಂಚ 'ನಾಟು ನಾಟು' ಎಂದು ಕುಣಿತ್ತಿದೆ.

ಆಸ್ಕರ್ ಟ್ರೋಫಿ ಕೈಯಲ್ಲಿ ಹಿಡಿದು ಕೀರವಾಣಿ ಮಾತು ಮರೆತು ಹಾಡಿನ ರೂಪದಲ್ಲಿ ಸಂತೋಷ ವ್ಯಕ್ತಪಡಿಸಿದರು. "ಆಸ್ಕರ್ ನೀಡಿದ ಅಕಾಡೆಮಿ ಧನ್ಯವಾದ. ಈ ದಿನ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ತಂದಿದೆ. ನನ್ನ ಮನಸ್ಸಿನಲ್ಲಿ ಒಂದು ಆಸೆ ಇತ್ತು. ರಾಜಮೌಳಿ ಮತ್ತವರ ತಂಡ ಹಾಗೂ ತಂಡ ಪ್ರತಿ ಭಾರತೀಯರು ಹೆಮ್ಮೆ ಪಡುವಂತೆ RRR ಆಸ್ಕರ್ ಎತ್ತಿ ಹಿಡಿದಿದೆ. ನಮ್ಮನ್ನು ಪ್ರಪಂಚದ ಅಗ್ರಸ್ಥಾನದಲ್ಲಿ ನಿಲ್ಲಿಸಿದೆ. ಇದಕ್ಕಾಗಿ ಶ್ರಮಿಸಿದ ಕಾರ್ತಿಕೇಯಗೆ ಥ್ಯಾಂಕ್ಸ್" ಎಂದರು.

oscars 2023: Naatu Naatu RRR Best Original Song Composer M. M. Keeravani and Lyricist Chandraboses Speech

ಮತ್ತೊಂದು ಕಡೆ ಗೀತ ಸಾಹಿತಿ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು. ಸಂತಸ ತಡೆಯಲಾಗದೇ ಪ್ರಶಸ್ತಿಯನ್ನು ಡಾಲ್ಬಿ ಹಾಲ್‌ನ ಎಲ್ಲಾ ಮೂಲೆಗೂ ತೋರಿಸಿ ಖುಷಿಪಟ್ಟರು. ಕೊನೆಗೆ 'ನಮಸ್ತೆ' ಎಂದು ಹೇಳಿದರು. ಬಳಿಕ ಆಸ್ಕರ್ ಬ್ಯಾಕ್‌ಸ್ಟೇಜ್‌ನಲ್ಲಿ ಹಾಲಿವುಡ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. "ಕೆಲವೇ ನಿಮಿಷಗಳ ಹಿಂದೆ ನಮ್ಮ ಹಾಡು ಪ್ರಪಂಚದ ಅಗ್ರಸ್ಥಾನದಲ್ಲಿ ನಿಂತಿದ್ದು ಖುಷಿ ಆಯಿತು. ನನಗೆ ಬಹಳ ಹೆಮ್ಮೆ ಆಗುತ್ತಿದೆ. ನಮ್ಮ ದೇಶ, ನಮ್ಮ ತಂಡ, ಚಂದ್ರಬೋಸ್ ಸೇರಿದಂತೆ ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು" ಎಂದು ಕೀರವಾಣಿ ಹೇಳಿದ್ದಾರೆ.

"ಬಹಳ ಖುಷಿ ಆಗುತ್ತಿದೆ. ಪ್ರಪಂಚದ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು. ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ತಾಯ್ನಾಡು, ನಮ್ಮ ತೆಲುಗು ಚಿತ್ರರಂಗ ಹೆಮ್ಮೆ ಪಡುತ್ತಿದೆ. ಇದು ಬರೀ ಆರಂಭ ಅಷ್ಟೇ. ಇಡೀ ಪ್ರಪಂಚ ಮುಖ್ಯವಾಗಿ ಪಾಶ್ಚಿಮಾತ್ಯರು ಇಂಡಿಯನ್ ಮ್ಯೂಸಿಕ್, ಏಷಿಯನ್ ಮ್ಯೂಸಿಕ್ ಕಡೆ ಗಮನ ಹರಿಸಿದ್ದಾರೆ. ಇದು ಬಹಳ ಖುಷಿ ತಂದಿದೆ. ಎಲ್ಲರೂ ನಮ್ಮ ಮ್ಯೂಸಿಕ್ ಅಪ್ಪಿಕೊಳ್ಳಲು ಈಗ ಬಾಗಿಲು ತೆರೆದಂತೆ ಆಗಿದೆ. 'ನಾಟು ನಾಟು' ಭಾರತದ ಸಂಸ್ಕೃತಿಯ ಜಾನರ್ ಹಾಡು. ಅದನ್ನು ಚಂದ್ರಬೋಸ್ ಒಳ್ಳೆ ಪದಗಳಿಂದ ಅದ್ಬುತವಾಗಿ ಹೊರಗೆ ತಂದರು" ಎಂದು ಹೇಳಿದ್ದಾರೆ.

oscars 2023: Naatu Naatu RRR Best Original Song Composer M. M. Keeravani and Lyricist Chandraboses Speech

ಚಂದ್ರಬೋಸ್ ಮಾತನಾಡಿ "ತೆಲುಗು ಭಾಷೆಯಲ್ಲಿ 56 ಅಕ್ಷರಗಳಿವೆ. ಸಾಕಷ್ಟು ಪದಗಳು, ಸಾಕಷ್ಟು ಭಾವಗಳು ನಮ್ಮ ಭಾಷೆಗಿದೆ. ಬಹಳ ಶ್ರೇಷ್ಠ ಭಾಷೆ. ಸಂಗೀತಮಯ ಭಾಷೆ ತೆಲುಗು. ಒಂದು ಸಾಮಾನ್ಯ ಪದ ಬರೆದರು ಅದು ಸಂಗೀತದಂತೆ ಕೇಳುತ್ತದೆ. RRR ಚಿತ್ರದ ನಾಟು ನಾಟು ಹಾಡಿನ ಅರ್ಥವನ್ನು ತೆಗುಗು ಭಾಷಿಕರು ಇಷ್ಟಪಡುತ್ತಾರೆ. ಆದರೆ ಪರಭಾಷಿಕರು ಹಾಡಿನ ಸೌಂಡಿಂಗ್‌ ಇಷ್ಟಪಡುತ್ತೀರಾ. ಅದರಿಂದ ಈ ಪ್ರಶಸ್ತಿ ಸಿಕ್ತು. ಬೇಗ ಭಾರತಕ್ಕೆ ಹೋಗಿ ಮಡದಿ, ಮಕ್ಕಳಿಗೆ ಪ್ರಶಸ್ತಿ ತೋರಿಸಬೇಕು ಎನ್ನುವುದು ನನ್ನ ಆಸೆ" ಎಂದಿದ್ದಾರೆ.

More from Filmibeat

English summary
oscars 2023: Naatu Naatu RRR Best Original Song Composer M. M. Keeravani and Lyricist Chandrabose's Speech. song wins Best Original Song at the 95th Academy Awards. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X