Oscars 2023: ಆಸ್ಕರ್ ನಾಮಿನಿಗಳಿಗೆ ಆಸ್ಟ್ರೇಲಿಯಾದಲ್ಲಿ ಭೂಮಿ ಬಹುಮಾನ: ಗಿಫ್ಟ್‌ ಬ್ಯಾಗ್‌ನಲ್ಲಿ ಬೇರೆ ಏನೇನಿರುತ್ತೆ?

By ಫಿಲ್ಮಿಬೀಟ್ ಡೆಸ್ಕ್

ಸಿನಿಲೋಕದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. ಅಷ್ಟು ಸುಲಭವಾಗಿ ಈ ಪ್ರಶಸ್ತಿ ಯಾರಿಗೂ ಧಕ್ಕುವುದಿಲ್ಲ. ಪ್ರಶಸ್ತಿ ಇರಲಿ ಪ್ರಶಸ್ತಿಗಾಗಿ ನಾಮಿನೇಟ್ ಆಗುವುದು ಕಷ್ಟದ ಮಾತು. ಇನ್ನು ವಿಜೇತರಿಗೆ ಮಾತ್ರವಲ್ಲ, ನಾಮಿನೇಟ್ ಆದವರಿಗೂ ಸಾಕಷ್ಟು ಉಡುಗೊರೆ ಸಿಗಲಿದೆ. ನಾಮಿನಿಗಳ ಗಿಫ್ಟ್‌ ಬ್ಯಾಗ್‌ನಲ್ಲಿ ಏನೆಲ್ಲಾ ಇರಲಿದೆ ಅನ್ನುವುದರ ಬಗ್ಗೆ ತಿಳಿಯಲೇ ಬೇಕು. ಈ ಬಾರಿ ನಾಮಿನಿಗಳಿಗೆ ಆಸ್ಟ್ರೇಲಿಯಾದಲ್ಲಿ ಭೂಮಿ ಸಿಗಲಿದೆ.

ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ನಟ- ನಟಿಯರು, ನಿರ್ದೇಶಕರು ಹಾಗೂ ಇತರೆ ತಂತ್ರಜ್ಞರಿಗೆ ಅಕಾಡೆಮಿ ಅಮೂಲ್ಯವಾದ ಬಹುಮಾನ ನೀಡುತ್ತದೆ. ಈ ಬಾರಿ ಭೂಮಿಯನ್ನು ಕೂಡ ಉಡುಗೊರೆಯಾಗಿ ನೀಡಲಿದೆ. ಅದು ಎಲ್ಲಿ ಎಂದು ಕೇಳುತ್ತೀರಾ? ಈ ಬಾರಿ ಆಸ್ಕರ್‌ ನಾಮಿನಿಗಳ ಗಿಫ್ಟ್ ಬ್ಯಾಗ್‌ನಲ್ಲಿ ಆಸ್ಟ್ರೇಲಿಯಾದ ಒಂದು ಚದರ ಮೀಟರ್ ಭೂಮಿ ಸಿಗಲಿದೆ. ಆದರೆ ಈ ಭೂಮಿಯನ್ನು ನಾಮಿನಿಗಳು ತಮ್ಮ ಅಧೀನಕ್ಕೆ ಪಡೆಯಲು ಸಾಧ್ಯವಿಲ್ಲ. ಆದರೆ ನಾಮಿನಿಗಳ ಹೆಸರಿನಲ್ಲಿ ಇರುತ್ತದೆ. ಅಂದರೆ ಅವರ ನೆನಪಿನಲ್ಲಿ ಉಳಿಯುತ್ತದೆ..

Oscars 2023: Nominees are receiving this plot of land from a company called pieces of Australia

ಸಾಮಾನ್ಯವಾಗಿ ಆಸ್ಕರ್ ನಾಮಿನಿಗಳಿಗೆ ಬಹುಮಾನ ನೀಡಲು ಅಕಾಡೆಮಿಗೆ ಸಂಬಂಧ ಇಲ್ಲದ ಸಾಕಷ್ಟು ವ್ಯಾಪಾರ ಸಂಸ್ಥೆಗಳು ಪೈಪೋಟಿ ನಡೆಸುತ್ತವೆ. ಅದರಲ್ಲಿ 'ಪೀಸೆಸ್ ಆಫ್ ಆಸ್ಟ್ರೇಲಿಯಾ' ಎನ್ನುವ ರಿಯಲ್ ಎಸ್ಟೇಟ್ ಕಂಪೆನಿ ಕೂಡ ಒಂದು. ಈ ಕಂಪೆನಿ ಆಸ್ಕರ್ ನಾಮಿನಿಗಳಿಗೆ ಕೊಡುವ ಗಿಫ್ಟ್ ಹ್ಯಾಂಪರ್‌ನಲ್ಲಿ ಜಾಗ ಪಡೆಯಲು 4 ಸಾವಿರ ಡಾಲರ್(3, 27,000 ರೂಪಾಯಿ) ಚೆಲ್ಲಿದೆ. ನಾಮಿನಿಗಳಿಗೆ ನೀಡುವ ಗಿಫ್ಟ್ ಬ್ಯಾಗ್‌ನಲ್ಲಿ 'ಪೀಸೆಸ್ ಆಫ್ ಆಸ್ಟ್ರೇಲಿಯಾ' ಸಂಸ್ಥೆ ತಮ್ಮ 'ಆಸ್ಸಿಮೇಟ್ ಕನ್ಜರ್ವೇಶನ್ ಪ್ಯಾಕ್ಸ್‌' ಸೇರಿಸಿದೆ.

ಕ್ವಿನ್ಸ್‌ಲ್ಯಾಂಡ್‌ನ ವೆಸ್ಟ್ರನ್ ಡೌನ್ಸ್ ಪ್ರಾಂತ್ಯದಲ್ಲಿ ಇರುವ 'ಎನ್ವಿರೋಷಿಯನ್ ಎಸ್ಟೇಟ್‌'ನಲ್ಲಿ ಒಂದು ಮೀಟರ್ ಚದರ ಭೂಮಿ ಆಸ್ಕರ್ ನಾಮಿನಿಗಳ ಹೆಸರಿಗೆ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದ ಲೈಸೆನ್ಸ್ ಸರ್ಟಿಫಿಕೇಟ್ ಅರ್ಹರಿಗೆ ತಲುಪಿಸುತ್ತಾರೆ. 'ಎನ್ವಿರೋಷಿಯನ್ ಎಸ್ಟೇಟ್‌'ನ ಒಂದಷ್ಟು ಭಾಗವನ್ನು 'ಪೀಸೆಸ್ ಆಫ್ ಆಸ್ಟ್ರೇಲಿಯಾ' ಸಂಸ್ಥೆ ಆಸ್ಕರ್ ನಾಮಿನಿಗಳ ಬಹುಮಾನವಾಗಿ ಘೋಷಿಸಿದೆ. ಈ ಭೂಮಿ ಒಟ್ಟು 1,21,774 ಚದರ ಮೀಟರ್ ಇರುತ್ತದೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಹೇಳಿದೆ. ಇದನ್ನು ಮಾರಿದರೆ 2.5 ಮಿಲಿಯನ್ ಡಾಲರ್ ಆಗಬಹುದು ಎನ್ನಲಾಗುತ್ತದೆ.

ಇನ್ನು ಆಸ್ಕರ್ ನಾಮಿನಿಗಳಿಗೆ 1 ಲಕ್ಷ ಡಾಲರ್ ಮೌಲ್ಯದ ಗಿಫ್ಟ್ ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಈ ಗಿಫ್ಟ್ ಬ್ಯಾಗ್‌ನಲ್ಲಿ ಸ್ಪಾ ಚಿಕಿತ್ಸೆ, ಲಿಪೋಷೆಷನ್ ಸೆಷನ್‌ಗಳು, ಮಿಠಾಯಿ ಮತ್ತು ಬಿಸ್ಕತ್ತು ಇರುತ್ತದೆ. ಲೈಫ್‌ಸ್ಟೈಲ್ ಹಾಗೂ ಬ್ಯೂಟಿ ಪ್ರಾಡೆಕ್ಟ್‌ಗಳು ಸೇರಿ 60 ವಸ್ತುಗಳು ಬ್ಯಾಗ್‌ನಲ್ಲಿ ಇರಲಿದೆ. ಪ್ರವಾಸದ ಪ್ಯಾಕೇಜ್‌ ಕೂಡ ಇರಲಿದೆ. ಇನ್ನು ನಾಮಿನಿಗಳು ಗಿಫ್ಟ್ ಬ್ಯಾಗ್ ಬೇಡ ಎಂದು ಹೇಳಲು ಅವಕಾಶ ಇದೆ. ಕಳೆದ ವರ್ಷ ನಟ ಡೆನ್ಜಲ್ ವಾಷಿಂಗ್‌ಟನ್ ಗಿಫ್ಟ್ ಬ್ಯಾಗ್ ಬೇಡ ಎಂದಿದ್ದರು. ಮತ್ತೊಬ್ಬ ನಟ ಜೆಕೆ ಸಿಮೊನ್ಸ್ ಚಾರಿಟಿಗಾಗಿ ಗಿಫ್ಟ್ ಬ್ಯಾಗ್ ದಾನ ಮಾಡಿದ್ದರು.

Oscars 2023: Nominees are receiving this plot of land from a company called pieces of Australia

ಈ ಬಾರಿ 3 ವಿಭಾಗಗಳಲ್ಲಿ ಭಾರತದ ಚಿತ್ರಗಳು ಆಸ್ಕರ್‌ ಸ್ಪರ್ಧೆಯಲ್ಲಿವೆ. 'RRR' ಚಿತ್ರದ 'ನಾಟು ನಾಟು' ಸಾಂಗ್ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಇನ್ನು ಸಾಕ್ಷ್ಯಚಿತ್ರಗಳಾದ 'ಆಲ್‌ ದಟ್‌ ಬ್ರೀಥ್ಸ್' ಮತ್ತು 'ಎಲಿಫೆಂಟ್‌ ವಿಸ್ಪರ್ಸ್‌' ಈ ಬಾರಿ ಆಸ್ಕರ್‌ ರೇಸ್‌ನಲ್ಲಿವೆ. ಕೆಲವೇ ಗಂಟೆಗಳಲ್ಲಿ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಬಹುದು.

More from Filmibeat

English summary
Oscars 2023: Nominees are receiving this plot of land from a company called pieces of australia. Oscars Nominees also receive the Gift bags. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X