Naatu Naatu: ಆಸ್ಕರ್ ಹೊಸ್ತಿಲಲ್ಲಿ 'ನಾಟು ನಾಟು': ಅದೊಂದು ಸಾಂಗ್ ಕೊಡ್ತಿದೆ ಟಫ್ ಕಾಂಪಿಟೇಷನ್
ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಸಾಂಗ್ ಆಸ್ಕರ್ ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದೆ. ಆದರೆ ಅದೊಂದು ಹಾಡು ಪ್ರಬಲ ಪೈಪೋಟಿ ಕೊಡ್ತಿದೆ. ಕೆಲವೇ ಗಂಟೆಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗಲಿದೆ. ಈಗಾಗಲೇ 'RRR' ತಂಡ ಲಾಸ್ ಎಂಜಲೀಸ್‌ನಲ್ಲಿ ಬೀಡುಬಿಟ್ಟಿದೆ. ಭಾರತೀಯ ಸಿನಿರಸಿಕರು ಕೂಡ ಮೌಳಿ ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುವುದನ್ನು ನೋಡಲು ಕಾಯ್ತಿದ್ದಾರೆ.
14 ಕೆಟಗರಿಯಲ್ಲಿ 'RRR' ಸಿನಿಮಾ ಪ್ರಶಸ್ತಿಗಾಗಿ ಪ್ರಯತ್ನಿಸಿದರೆ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಮಾತ್ರ ನಾಮಿನೇಟ್ ಆಗಿದೆ. ಅಕಾಡೆಮಿ ಪ್ರಶಸ್ತಿಗಾಗಿ ಈ ಬಾರಿ ಪ್ರಪಂಚದಾದ್ಯಂತ 81 ಸಾಂಗ್ಸ್ ಎಲಿಜಿಬಲ್ ಸಾಧಿಸಿದ್ದವು. ಅದರಲ್ಲಿ ಮೊದಲ ಸುತ್ತಿನಲ್ಲಿ ಉಳಿದಿದ್ದು 15 ಸಾಂಗ್ಸ್ ಮಾತ್ರ. ಎರಡನೇ ಸುತ್ತಿನಲ್ಲಿ 10 ಸಾಂಗ್ಸ್ ಹೊರಬಿದ್ದು 5 ಸಾಂಗ್ಸ್ ಮಾತ್ರ ನಾಮಿನೇಟ್ ಆಗಿವೆ. 'ನಾಟು ನಾಟು' ಸಾಂಗ್‌ಗೆ ಫೈಟ್ ಕೊಡುತ್ತಿರುವ ಇನ್ನುಳಿದ 4 ಸಾಂಗ್ಸ್ ಯಾವುದು ಗೊತ್ತಾ?

ಭಾರತದಿಂದ 'ನಾಟು ನಾಟು' ಸಾಂಗ್ ಕೊನೆ ಹಂತಕ್ಕೆ ತಲುಪಿದೆ. ಅಮೇರಿಕಾದ 'ಟೆಲ್ ಇಟ್ ಲೈಕ್ ಎ ವುಮೆನ್' ಚಿತ್ರದ 'ಅಪ್ಲಾಜ್' ಸಾಂಗ್ ಕೂಡ ರೇಸ್‌ನಲ್ಲಿದೆ. 'ಟಾಪ್‌ಗನ್: ಮ್ಯಾವರಿಕ್' ಚಿತ್ರದಿಂದ 'ಹೋಲ್ಡ್ ಮೈ ಹ್ಯಾಂಡ್' ಸಾಂಗ್ ಕೂಡ ನಾಮಿನೇಟ್ ಆಗಿದೆ. ಇದನ್ನು ಲೇಡಿ ಗಾಗಾ ಹಾಡಿದ್ದಾರೆ. ಇನ್ನು 'ಬ್ಲಾಕ್‌ಫ್ಯಾಂಥರ್: ವಕಾಂಡ ಫರೆವರ್' ಚಿತ್ರದ 'ಲಿಫ್ಟ್ ಮಿ ಅಪ್' ಹಾಗೂ 'ಎವ್ರೀಥಿಂಗ್ ಎವ್ರೀ ವೇರ್ ಆಲ್ ಎಟ್ ವನ್ಸ್' ಸಿನಿಮಾದ 'ದಿಸ್ ಈಸ್ ಎ ಲೈಫ್' ಸಾಂಗ್ಸ್ ಅಂತಿಮ ಸುತ್ತಿನಲ್ಲಿವೆ.
ರಿಹಾನ್ನಾ ಹಾಡಿರುವ 'ಬ್ಲಾಕ್‌ಫ್ಯಾಂಥರ್: ವಕಾಂಡ ಫರೆವರ್' ಚಿತ್ರದ 'ಲಿಫ್ಟ್ ಮಿ ಅಪ್' ಸಾಂಗ್ 'ನಾಟು ನಾಟು' ಸಾಂಗ್‌ಗೆ ಟಫ್ ಕಾಂಪಿಟೇಷನ್ ಕೊಡುತ್ತಿದೆ. ಹಾಲಿವುಡ್ ಮೀಡಿಯಾಗಳು ಕೂಡ ಇದೇ ಮಾತನ್ನು ಹೇಳುತ್ತಿವೆ. ಹಾಲಿವುಡ್ ಪಾಪ್ ಗಾಯಕಿ ರಿಹಾನ್ನಾ ಹಾಡಿರುವ ಈ ಬ್ರೀಜಿ ಸಾಂಗ್ ಹಾಲಿವುಡ್ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಇನ್ನು ರಿಹಾನ್ನಾ ಖ್ಯಾತಿ ಎಲ್ಲರಿಗೂ ಗೊತ್ತಿದೆ. ಹಾಲಿವುಡ್ ಮಂದಿ ಕೂಡ 'ಲಿಫ್ಟ್ ಮಿ ಅಪ್' ಸಾಂಗ್ ಬೆಂಬಲಿಸುವ ಸಾಧ್ಯತೆಯಿದೆ.

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 'ನಾಟು ನಾಟು' ಹಾಗೂ 'ಲಿಫ್ಟ್ ಮಿ ಅಪ್' ಸಾಂಗ್ ನಡುವೆ ಹೆಚ್ಚು ಪೈಪೋಟಿ ಇದೆ ಎನ್ನಲಾಗುತ್ತಿದೆ. ಈಗಾಗಲೇ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ಆಗ ರಿಹಾನ್ನಾ 'RRR' ಟೀಂಗೆ ವಿಶ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅಂದಹಾಗೆ 'ನಾಟು ನಾಟು' ಹಾಡನ್ನು ಆಸ್ಕರ್ ವೇದಿಕೆಯಲ್ಲಿ ಲೈವ್ ಪರ್ಫಾರ್ಮೆನ್ಸ್ ಮಾಡಲಾಗುತ್ತಿದೆ.
ನಾಟು ನಾಟು ಹಾಡಿಗೆ ಎಂ. ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಕಾಲ ಭೈರವ ಹಾಗೂ ರಾಹುಲ್ ಸಿಪ್ಲಿಗಿಜ್ ಹಾಡನ್ನು ಹಾಡಿದ್ದಾರೆ. ಚಂದ್ರಬೋಸ್ ಸಾಹಿತ್ಯ ಇದ್ದು ಪ್ರೇಮ್ ರಕ್ಷಿತ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ರಾಮ್‌ಚರಣ್- ತಾರಕ್ ಬಿಂದಾಸ್ ಹೆಜ್ಜೆ ಹಾಕಿ ರಂಗೇರಿಸಿದ್ದರು.


Click it and Unblock the Notifications











