twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಎರಡು ಡಾಕ್ಯುಮೆಂಟರಿಗಳ ಜೊತೆ ಆಸ್ಕರ್ ಹೊಸ್ತಿಲಿಗೆ ಬಂದ 'ನಾಟು ನಾಟು'

    |

    95ನೇ ಆಸ್ಕರ್‌ ಪ್ರಶಸ್ತಿಗೆ ನಾಮಿನೇಶನ್ ಪ್ರಕ್ರಿಯೆ ಈಗಷ್ಟೆ ಮುಗಿದಿದ್ದು, ಭಾರತಕ್ಕೆ ಅಲ್ಪ ನಿರಾಸೆ, ಅಲ್ಪ ಸಂತಸ ಪ್ರಾಪ್ತಿಯಾಗಿದೆ.

    ಬಹುವಾಗಿ ನಿರೀಕ್ಷೆ ಹುಟ್ಟಿಸಿದ್ದ RRR ಸಿನಿಮಾ ಒಂದು ವಿಭಾಗದಲ್ಲಿ ನಾಮಿನೇಟ್ ಆಗಲು ಯಶಸ್ವಿಯಾಗಿದೆ. ಸಿನಿಮಾದ 'ನಾಟು ನಾಟು' ಹಾಡು ಅತ್ಯುತ್ತಮ ಹಾಡು ವಿಭಾಗದಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿದ್ದು, ಇತರೆ ನಾಲ್ಕು ಸಿನಿಮಾಗಳ ಹಾಡಿನೊಂದಿಗೆ ಸೆಣೆಸಬೇಕಿದೆ.

    ಇದರ ಜೊತೆಗೆ ಭಾರತದ ಎರಡು ಡಾಕ್ಯುಮೆಂಟರಿಗಳು ಸಹ ಆಸ್ಕರ್‌ಗೆ ನಾಮಿನೇಟ್ ಆಗುವ ಗೌರವವನ್ನು ಪಡೆದುಕೊಂಡಿವೆ. ವಿವಿಧ ಪಕ್ಷಿ, ಪ್ರಾಣಿಗಳನ್ನು ಸಾಕುವ ದೆಹಲಿಯ ಮುಸ್ಲಿಂ ಕುಟುಂಬವೊಂದರ ಕುರಿತ ಡಾಕ್ಯುಮೆಂಟರಿ 'ಆಲ್ ದಟ್ ಬ್ರೀತ್ಸ್' ಆಸ್ಕರ್‌ಗೆ ನಾಮಿನೇಟ್ ಆಗಿದೆ. ಇದರ ಜೊತೆಗೆ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಭಾರತದ್ದೇ ಆದ 'ದಿ ಎಲಿಫೆಂಟ್ ವಿಸ್ಪರ್ಸ್' ಸಹ ನಾಮಿನೇಟ್ ಆಗಿದೆ.

    Oscars 2023: RRRs Natu Natu Makes Into Nominations

    ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಿದ್ದ 'ಚೆಲ್ಲೊ ಶೋ' ಯಾವುದೇ ವಿಭಾಗದಲ್ಲಿ ನಾಮಿನೇಟ್ ಆಗಿಲ್ಲ. ಮಾತ್ರವಲ್ಲದೆ, RRR ಸಿನಿಮಾ ಸಹ ಒರಿಜಿನಲ್ ಸಾಂಗ್ ಒಂದನ್ನು ಬಿಟ್ಟು ಇನ್ನಾವುದೇ ವಿಭಾಗದಲ್ಲಿ ನಾಮಿನೇಟ್ ಆಗಿಲ್ಲ.

    'ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್', 'ಆಲ್ ಕ್ವೈಟ್ ಅಟ್ ವೆಸ್ಟರ್ಸ್ ಫ್ರಂಟ್', 'ಟಾರ್', 'ದಿ ಫೇಬಲ್‌ಮ್ಯಾನ್ಸ್', 'ಎಲ್ವಿಸ್', 'ಟಾಪ್ ಗನ್ ಮೇವರಿಕ್' ಸಿನಿಮಾಗಳು ಹೆಚ್ಚಿನ ನಾಮಿನೇಶನ್‌ಗಳನ್ನು ಪಡೆದುಕೊಂಡಿವೆ.

    ಗೋಲ್ಡನ್ ಗ್ಲೋಬ್‌ನಲ್ಲಿ RRR ಅನ್ನು ಹಿಂದಿಕ್ಕಿ ವಿದೇಶಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದ 'ಅರ್ಜೆಂಟೀನಾ 1995' ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿದ್ದು ಗೆಲ್ಲುವ ನೆಚ್ಚಿನ ಸಿನಿಮಾ ಎನಿಸಿಕೊಂಡಿದೆ.

    English summary
    Oscars 2023: RRR movie's Natu Natu song makes into Oscars final list. India's two documentaries also nominated this year.
    Tuesday, January 24, 2023, 19:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X