Oscars Winners List: 96ನೇ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ

ಸಿನಿ ಪ್ರಪಂಚದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. 2024ರ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಶುರುವಾಗಿದೆ. 96 ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳ ಪಟ್ಟಿ ಬಿಡುಗಡೆಯಾಗಿ ಕುತೂಹಲ ಮೂಡಿತ್ತು.

ಸದ್ಯ ಆಸ್ಕರ್ ಪ್ರಶಸ್ತಿ ಪ್ರದಾನ ಶುರುವಾಗಿದ್ದು ಕಳೆದ ವರ್ಷ ತೆರೆಕಂಡ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಓಪನ್‌ಹೈಮರ್ ಹಾಗೂ ಪೂರ್ ಥಿಂಗ್ಸ್ ಚಿತ್ರಗಳಿಗೆ ಈ ಬಾರಿಯ ಆಸ್ಕರ್‌ ಪ್ರಶಸ್ತಿಗಳಲ್ಲಿ ಸಿಂಹಪಾಲು ಸಿಕ್ಕಿದೆ. ಇನ್ನು ಆಸ್ಕರ್ ವೇದಿಕೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಜಾನ್ ಸೆನಾ ಬಹುತೇಕ ಬೆತ್ತಲಾಗಿ ವೇದಿಕೆ ಏರಿದ ಘಟನೆಯೂ ನಡೀತು.

Oscars 2024 Complete list of winners at the 96th Academy Awards

96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದವರ ಸಂಭ್ರಮ ಮುಗಿಲು ಮುಟ್ಟಿದೆ. 'ಓಪನ್‌ಹೈಮರ್' ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಅದೇ ರೀತಿ 'ದಿ ಹೋಲ್ಡೋವರ್ಸ್' ಚಿತ್ರಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದರು. ಆಕೆ ಪ್ರಶಸ್ತಿ ಪಡೆದು ವೇದಿಕೆ ಏರಿ ಮಾತನಾಡುತ್ತ ಭಾವುಕರಾದರು.

'ದಿ ಜೋನ್ ಆಫ್ ಇಂಟ್ರೆಸ್ಟ್'ಗೆ ಬೆಸ್ಟ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್ ಸಿಕ್ಕರೆ ಪೂರ್‌ ಥಿಂಗ್ಸ್‌' ಚಿತ್ರಕ್ಕಾಗಿ ಬೆಸ್ಟ್‌ ಹೇರ್‌ ಸ್ಟೈಲ್‌ ಅಂಡ್‌ ಮೇಕಪ್‌ ಪ್ರಶಸ್ತಿ ಹಾಗೂ ಇದೇ ಚಿತ್ರಕ್ಕಾಗಿ ನಡಿಯಾ ಸ್ಟೇಸಿ, ಮಾರ್ಕ್‌ ಕೌಲಿಯರ್‌ ಬೆಸ್ಟ್‌ ಮೇಕಪ್‌ ಪ್ರಶಸ್ತಿ ಪಡೆದರು. ಇನ್ನು 'ಅಮೆರಿಕನ್‌ ಫಿಕ್ಷನ್‌' (ಕಾರ್ಡ್‌ ಜೆಫರ್‌ಸನ್‌) ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ ಪ್ರಶಸ್ತಿ, 'ಅನಾಟಮಿ ಆಫ್‌ ಎ ಫಾಲ್'(ಜಸ್ಟಿನ್‌ ಟ್ರೈಟ್‌, ಅರ್ಥರ್‌ ಹರಾರಿ)ಚಿತ್ರಕ್ಕೆ ಬೆಸ್ಟ್‌ ಒರಿಜಿನಲ್‌ ಸ್ಕ್ರೀನ್‌ ಪ್ಲೇ ಪ್ರಶಸ್ತಿ, 'ದಿ ಬಾಯ್‌ ಆಂಡ್‌ ದಿ ಹಿರಾನ್‌' ಚಿತ್ರಕ್ಕೆ ಬೆಸ್ಟ್‌ ಆನಿಮೇಟೆಡ್‌ ಫೀಚರ್ ಫಿಲ್ಮ್‌ ಪ್ರಶಸ್ತಿ ಲಭಿಸಿದೆ.

Oscars 2024 Complete list of winners at the 96th Academy Awards

'ವಾರ್‌ ಈಸ್ ಓವರ್‌' ಚಿತ್ರಕ್ಕೆ ಬೆಸ್ಟ್‌ ಆನಿಮೇಟೆಡ್‌ ಶಾರ್ಟ್‌ ಫಿಲ್ಮ್‌ ಪ್ರಶಸ್ತಿ ಅದೇ ರೀತಿ 'ಪೂರ್‌ ಥಿಂಗ್ಸ್‌'(ಹೋಲಿ ವೆಡ್ಡಿಂಗ್‌ಟನ್‌) ಚಿತ್ರಕ್ಕೆ ಅತ್ಯುತ್ತಮ ಕ್ಯಾಸ್ಟೂಮ್‌ ವಿನ್ಯಾಸ ಪ್ರಶಸ್ತಿ, 'ಪೂರ್‌ ಥಿಂಗ್ಸ್‌' ಚಿತ್ರಕ್ಕಾಗಿ ಜೇಮ್ಸ್‌ ಪ್ರೈಸ್‌, ಶೋನಾ ಹೆತ್‌ ಬೆಸ್ಟ್‌ ಪ್ರೊಡಕ್ಷನ್‌ ಡಿಸೈನ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.

* ಅತ್ಯುತ್ತಮ ನಟ- ಕಿಲಿಯನ್ ಮರ್ಫಿ(ಓಪನ್‌ಹೈಮರ್)

* ಅತ್ಯುತ್ತಮ ನಟಿ- ಎಮ್ಮಾ ಸ್ಟೋನ್(ಪೂರ್ ಥಿಂಗ್ಸ್)

* ಅತ್ಯುತ್ತಮ ಚಿತ್ರ- ಓಪನ್‌ಹೈಮರ್

* ಅತ್ಯುತ್ತಮ ನಿರ್ದೇಶಕ-ಕ್ರಿಸ್ಟೋಫರ್ ನೋಲನ್(ಓಪನ್‌ಹೈಮರ್)

* ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್- ಗಾಡ್ಜಿಲ್ಲಾ ಮೈನಸ್ ಒನ್

* ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್- ದಿ ವಂಡರ್‌ಫುಲ್ ಸ್ಟೋರಿ ಆಫ್ ಹೆನ್ರಿ ಸುಗರ್

* ಅತ್ಯುತ್ತಮ ಸಂಕಲನ- ಓಪನ್‌ಹೈಮರ್

* ಸೌಂಡ್- ದಿ ಜೋನ್ ಆಫ್ ಇಂಟ್ರೆಸ್ಟ್

* ಅತ್ಯುತ್ತಮ ಛಾಯಾಗ್ರಹಣ- ಹೊಯ್ಟೆ ವ್ಯಾನ್ ಹೊಯ್ಟೆಮಾ (ಓಪನ್‌ಹೈಮರ್)

* ಒರಿಜಿನಲ್ ಸ್ಕೋರ್- (ಓಪನ್‌ಹೈಮರ್) ಲುಡ್ವಿಗ್ ಗೊರಾನ್ಸನ್

* ಡಾಕ್ಯುಮೆಂಟರಿ ಶಾರ್ಟ್‌ ಫಿಲ್ಮ್- ದಿ ಲಾಸ್ಟ್ ರಿಪೇರ್ ಶಾಪ್

* ಒರಿಜಿನಲ್ ಸಾಂಗ್- ವಾಟ್‌ ವಾಸ್ ಐ ಮೇಡ್ ಫಾರ್(ಬಾರ್ಬಿ)

* ಡಾಕ್ಯುಮೆಂಟರಿ ಫೀಚರ್ ಫಿಲ್ಮ್- 20 ಡೇಸ್ ಇನ್ ಮರಿಯುಪೋಲ್

More from Filmibeat

English summary
Oscars 2024: the full list of winners
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X