Oscars 2025 ; 97ನೇ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ದಿನಗಣನೆ, ಎಲ್ಲಿ ನೋಡಬಹುದು, ಈ ಬಾರಿ ವಿಶೇ‍ಷತೆಗಳೇನು ?

ಆಸ್ಕರ್ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಆಸ್ಕರ್ ಪಡೆಯುವುದು ವಿಶ್ವದ ಹಲವು ನಿರ್ದೇಶಕರ ಜೀವಮಾನದ ಆಸೆ. ಆದರೆ ಆಸ್ಕರ್ ಪ್ರಶಸ್ತಿ ದೊರೆಯುವುದು ಇರಲಿ, ಪ್ರಶಸ್ತಿಗೆ ನಾಮ ನಿರ್ದೇಶನವಾದರೆ ಸಾಕು ಸಿನಿಮಾ ಹಾಗೂ ಸಾಕ್ಷ್ಯ ಚಿತ್ರತಂಡಕ್ಕೆ ಅದು ದೊಡ್ಡ ವಿಚಾರ.

ಇಂಥಾ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಮತ್ತೆ ನಡೆಯಲಿದೆ. ಹಲವರ ಕನಸು ನನಸಾಗಲಿದೆ. ಹೌದು. ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭ ಈ ಮಾರ್ಚ್ 3ರಂದು ನಡೆಯಲಿದೆ. ಲಾಸ್ ಏಂಜಲೀಸ್‌ನ ಡಾಲ್ಬಿ ಚಿತ್ರಮಂದಿರ ಈ ರಂಗು ರಂಗಾದ ಪ್ರಶಸ್ತಿ ಸಮಾರಂಭಕ್ಕೆ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.

oscars-2025-date-time-india-streaming-details-performances-and-everything-you-need-to-know

ಇನ್ನು ರೆಡ್ ಕಾರ್ಪೆಟ್ ಮೇಲೆ ತಾರೆಯರ ದಂಡು ಭಾರತೀಯ ಕಾಲಮಾನದ ಪ್ರಕಾರ ನಡುರಾತ್ರಿ 01-30ರಿಂದ ಹೆಜ್ಜೆ ಹಾಕಲು ಶುರುಮಾಡಲಿದ್ದು ಬೆಳಗ್ಗೆ 05-30ಕ್ಕೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಇನ್ನು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ABC ವಾಹಿನಿ ಪ್ರಸಾರ ಮಾಡಲಿದೆ. ಅಮೆರಿಕಾದಲ್ಲಿ ಹುಲು ಈ ಜವಾಬ್ಧಾರಿಯನ್ನು ವಹಿಸಿಕೊಂಡಿದೆ. ಇದೇ ಮೊದಲ ಬಾರಿ ಹುಲುದಲ್ಲಿ ಆಸ್ಕರ್ ಪ್ರಸಾರವಾಗುತ್ತಿರುವುದು ವಿಶೇಷ. ಇನ್ನು ಉಕ್ರೇನ್‌ನಲ್ಲಿ ಈ ಕಾರ್ಯಕ್ರಮವನ್ನು ಸಸ್ಪಿಲ್ನೆ ಕಲ್ಟರ್ ಪ್ರಸಾರ ಮಾಡಲಿದೆ. ಭಾರತದಲ್ಲಿ ಆಸ್ಕರ್ ನೋಡಲು ಬಯಸುವರು ಜಿಯೋ ಹಾಟ್‌ ಸ್ಟಾರ್‌ನಲ್ಲಿ ನೋಡಬಹುದು. ಜಿಯೋ ಇಲ್ಲದವರು ಸ್ಟಾರ್ ಮೂವೀಸ್‌ನಲ್ಲಿಯೂ ಈ ಭವ್ಯ ಸಮಾರಂಭವನ್ನು ಕಣ್ತುಂಬಿಕೊಳ್ಳಬಹುದು.

ಇದಲ್ಲದೇ ಯೂಟ್ಯೂಬ್, AT&T ಟಿವಿ ಮತ್ತು ಫುಬೊಟಿವಿ ಮೂಲಕವೂ ಆಸ್ಕರ್ ಪ್ರಶಸ್ತಿಯನ್ನು ವಿಶ್ವದಲ್ಲಿನ ನಾನಾ ಭಾಗದ ಜನರು ಕಣ್ತುಂಬಿಕೊಳ್ಳಬಹುದು. ಕಾನನ್ ಒ ಬ್ರೇನ್ ಇದೇ ಮೊದಲ ಬಾರಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನೆಸ್ಸ್ ನೀಡುವ ಆಸ್ಕರ್‌ ಪ್ರಶಸ್ತಿಯ ನಿರೂಪಣೆ ಮಾಡಲಿದ್ದಾರೆ. ಈ ಹಿನ್ನೆಲೆ ಈಗಾಗಲೇ ತುಂಬಾನೇ ಉತ್ಸುಕರಾಗಿರುವ ಕಾನನ್ ಒ ಬ್ರೇನ್ ಈ ಹಿಂದೆ 2002 ಮತ್ತು 2006ರಲ್ಲಿ ಎಮ್ಮಿ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆ ಮಾಡಿದ್ದರು. ತಮ್ಮ ಹಾಸ್ಯ ಪ್ರಜ್ಞೆಯಿಂದ ಎಲ್ಲರ ಹೃದಯ ಗೆದ್ದಿದ್ದರು.

ಇನ್ನು ಪ್ರಖ್ಯಾತ ರ್ಯಾಪರ್ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತೆ ಕ್ವೀನ್ ಲತೀಫಾ ಜಾಝ್ ಮಾಸ್ಟರ್, ಸಂಗೀತ ಸಂಯೋಜಕ, ಗಾಯಕ ಕ್ವಿನ್ಸ್ ಜೋನ್ಸ್‌ಗೆ ವಿಶೇಷವಾದ ಗೌರವವನ್ನು ತಮ್ಮ ಕಂಠದ ಮೂಲಕ ಈ ಕಾರ್ಯಕ್ರಮದಲ್ಲಿ ಸಲ್ಲಿಸಲಿದ್ದಾರೆ.

ಸೆಲೆನಾ ಗೊಮೆಜ್, ಓಪ್ರಾ ವಿನ್‌ಫ್ರೇ, ಜೋ ಅಲ್ವಿನ್, ಗೋಲ್ಡಿ ಹಾನ್, ಬೆನ್ ಸ್ಟಿಲ್ಲರ್, ಅನಾ ಡಿ ಅರ್ಮಾಸ್, ಸ್ಟರ್ಲಿಂಗ್ ಕೆ. ಬ್ರೌನ್, ವಿಲ್ಲೆಮ್ ಡಫೊ, ಲಿಲಿ-ರೋಸ್ ಡೆಪ್ ಮತ್ತು ಕೋನಿ ನೀಲ್ಸನ್. ಅವರು ಹ್ಯಾಲೆ ಬೆರ್ರಿ, ಪೆನೆಲೋಪ್ ಕ್ರೂಜ್, ಎಲ್ಲೆ ಫ್ಯಾನಿಂಗ್, ವೂಪಿ ಗೋಲ್ಡ್‌ಬರ್ಗ್, ಸ್ಕಾರ್ಲೆಟ್ ಜೋಹಾನ್ಸನ್, ಜಾನ್ ಲಿತ್‌ಗೋ, ಆಮಿ ಪೋಹ್ಲರ್, ಜೂನ್ ಸ್ಕ್ವಿಬ್ ಮತ್ತು ಬೋವೆನ್ ಯಾಂಗ್ ಮತ್ತು ಕಳೆದ ವರ್ಷದ ನಟನಾ ವಿಜೇತರಾದ ಎಮ್ಮಾ ಸ್ಟೋನ್, ರಾಬರ್ಟ್ ಡೌನಿ ಜೂನಿಯರ್, ಸಿಲಿಯನ್ ಮರ್ಫಿ, ಡಾ'ವೈನ್ ಜಾಯ್ ರಾಂಡೋಲ್ಫ್ ಮುಂತಾದವರು ಆಸ್ಕರ್ ಪ್ರಶಸ್ತಿಯನ್ನು ವಿಜೇತರಿಗೆ ಪ್ರದಾನ ಮಾಡಲಿದ್ದಾರೆ.

More from Filmibeat

Read more about: oscars 2025 oscars filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X